More

    ಮುಖ್ಯಮಂತ್ರಿ ಯೋಗಿ ಕಚೇರಿ ಎದುರು ಬೆಂಕಿ ಹಚ್ಚಿಕೊಂಡ ತಾಯಿ-ಮಗಳು; ಮೂವರು ಪೊಲೀಸರು ಅಮಾನತು

    ಲಖನೌ: ಇಂದು ಬೆಳಗ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರ ಕಚೇರಿಯೆದುರು ತಾಯಿ-ಮಗಳು ಬೆಂಕಿ ಹಚ್ಚಿ, ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಮೇಠಿಯ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ.

    ಭೂ ವಿವಾದ ಪ್ರಕರಣದಲ್ಲಿ ಪೊಲೀಸರ ಸಹಾಯ ಕೇಳಿದರೂ ಅವರು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ ಮಹಿಳೆ ಮತ್ತು ಅವರ ಮಗಳು ಸೀದಾ ಲಖನೌನಲ್ಲಿರುವ ಸಿಎಂ ಯೋಗಿ ಆದಿತ್ಯನಾಥ್​ ಕಚೇರಿ ಎದುರು ಬಂದು, ಸಾರ್ವಜನಿಕವಾಗಿಯೇ ಬೆಂಕಿ ಹಚ್ಚಿಕೊಂಡಿದ್ದಾರೆ. ಅವರು ಬೆಂಕಿ ಹಚ್ಚಿಕೊಂಡ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿತ್ತು.
    ತಾಯಿ-ಮಗಳು ಇಬ್ಬರೂ ಅಮೇಠಿಯವರಾಗಿದ್ದಾರೆ. ತಾಯಿಯ ದೇಹ ಸುಮಾರು 90 ಪರ್ಸಂಟ್​ ಸುಟ್ಟಿದ್ದು, ಮಗಳಿಗೆ ಶೇ.15ರಷ್ಟು ಸುಟ್ಟ ಗಾಯಗಳಾಗಿವೆ. ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಬಿಬಿಎಂಪಿ ಆಯುಕ್ತರ ದಿಡೀರ್ ವರ್ಗಾವಣೆಗೆ ಕಾರಣವೇನು?

    ಈ ಮಧ್ಯೆ ಲಖನೌ ಪೊಲೀಸರು, ಮಹಿಳೆಯರಿಬ್ಬರೂ ಕಾಂಗ್ರೆಸ್ ಮುಖಂಡನೋರ್ವನಿಂದ ಪ್ರಚೋದಿತರಾಗಿ ಬಂದು, ಇಲ್ಲಿ ಬೆಂಕಿ ಹಚ್ಚಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಹಾಗೇ ಹೆಚ್ಚಿನ ತನಿಖೆಯನ್ನೂ ಕೈಗೊಂಡಿದ್ದಾರೆ.

    ಇಡೀ ರಾಜ್ಯದಲ್ಲಿರುವ ಎಲ್ಲ ರಾಜಕೀಯ ಪಕ್ಷಗಳೂ ತಾಯಿ-ಮಗಳ ಆತ್ಮಹತ್ಯೆ ಯತ್ನದ ಪ್ರಕರಣವನ್ನು ಅಸ್ತ್ರಗಳನ್ನಾಗಿ ಪ್ರಯೋಗಿಸುತ್ತಿದ್ದಾರೆ. ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿಕೊಂಡಿವೆ.

    ಹಾಗೇ, ತಾಯಿ-ಮಗಳು ಆರೋಪ ಮಾಡಿದ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ ಎಂದು ಸ್ಥಳೀಯ ಪೊಲೀಸ್ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್​)

    ದೇಶದಲ್ಲಿ ಕೊವಿಡ್​-19 ಸೋಂಕಿನಿಂದ ಮೃತಪಟ್ಟ ವೈದ್ಯರ ಅಧಿಕೃತ ಸಂಖ್ಯೆಯನ್ನು ಬಹಿರಂಗ ಪಡಿಸಿದ ಐಎಂಎ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts