More

    2ನೇ ಹಂತದ ಲೋಕಸಭೆ ಚುನಾವಣೆ; 109 ನಾಮಪತ್ರ ತಿರಸ್ಕೃತ

    ಬೆಂಗಳೂರು: ರಾಜ್ಯದಲ್ಲಿ 2ನೇ ಹಂತದ ಲೋಕಸಭೆ ಚುನಾವಣೆ ಸಲ್ಲಿಸಿದ್ದ 109 ನಾಮಪತ್ರಗಳು ತಿರಸ್ಕೃತಗೊಂಡಿವೆ.

    ಶನಿವಾರ ನಾಮಪತ್ರ ಪರಿಶೀಲನೆ ನಡೆದಿದ್ದು, 14 ಕ್ಷೇತ್ರಗಳಲ್ಲಿ ಒಟ್ಟು 330 ಅಭ್ಯರ್ಥಿಗಳು 503 ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ 394 ನಾಮಪತ್ರ ಪುರಸ್ಕೃತಗೊಂಡಿದ್ದು, 109 ನಾಮಪತ್ರ ತಿರಸ್ಕೃತಗೊಂಡಿವೆ. ಒಟ್ಟು 272 ಅಭ್ಯರ್ಥಿಗಳ ನಾಮಪತ್ರ ಮಾನ್ಯವಾಗಿವೆ.

    2ನೇ ಹಂತದಲ್ಲಿ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

    ಸುರಪುರ ನಾಮಪತ್ರ ತಿರಸ್ಕೃತ ಇಲ್ಲ:

    ಸುರಪುರ ವಿಧಾನಸಭೆ ಉಪ ಚುನಾವಣೆಗೆ ಸಲ್ಲಿಕೆಯಾದ 7 ಅಭ್ಯರ್ಥಿಗಳ 13 ನಾಮಪತ್ರಗಳು ಪುರಸ್ಕೃತವಾಗಿವೆ. ಈ ಕ್ಷೇತ್ರದಿಂದ ಸಲ್ಲಿಕೆಯಾದ ಯಾವುದೇ ನಾಮಪತ್ರ ತಿರಸ್ಕೃತವಾಗಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts