More

    ಮಧ್ಯಪ್ರದೇಶದಲ್ಲಿ 28 ಸಚಿವರ ಪ್ರಮಾಣವಚನ: ಒಬಿಸಿ ವರ್ಗಕ್ಕೆ ಆದ್ಯತೆ, ಐವರು ಮಾತ್ರ ಮಹಿಳೆಯರು

    ಭೋಪಾಲ್: ಮಾಜಿ ಕೇಂದ್ರ ಸಚಿವ ಪ್ರಲ್ಹಾದ ಪಟೇಲ್ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ ಸೇರಿದಂತೆ 28 ಶಾಸಕರು ಸೋಮವಾರ ಮಧ್ಯಾಹ್ನ ಮಧ್ಯಪ್ರದೇಶ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದರಲ್ಲಿ 18 ಮಂದಿ ಕ್ಯಾಬಿನೆಟ್ ದರ್ಜೆಯ ಸಚಿವರಾದರೆ, ಇನ್ನುಳಿದ 10 ಮಂದಿ ಕಿರಿಯ ಸಚಿವರು ಅಥವಾ ರಾಜ್ಯ ಸಚಿವರಾಗುತ್ತಾರೆ.

    ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ರೂಪಿಸಿದ ಮಹಿಳಾ ಸಬಲೀಕರಣ ಕಾರ್ಯಕ್ರಮವಾದ ‘ಲಾಡ್ಲಿ ಬೆಹ್ನಾ ಯೋಜನೆ’ಯು ಮಹತ್ವದ ಕೊಡುಗೆ ನೀಡಿದೆ ಎಂದು ಪಕ್ಷದ ಪ್ರತಿಪಾದಿಸಿದೆ. ಆದರೆ, ಪ್ರಸ್ತುತ ಕ್ಯಾಬಿನೆಟ್​ನಲ್ಲಿ ಐವರು ಸಚಿವರು ಮಾತ್ರ ಮಹಿಳೆಯರಿದ್ದಾರೆ.

    ಹೊಸ ಸಂಪುಟದಲ್ಲಿ 11 ಸದಸ್ಯರು ಒಬಿಸಿ (ಇತರ ಹಿಂದುಳಿದ ವರ್ಗಗಳ) ವರ್ಗದಿಂದ ಬಂದವರು, ಮುಂದಿನ ವರ್ಷದ ಚುನಾವಣೆಗೆ ಮುಂಚಿತವಾಗಿ ಜಾತಿ/ವರ್ಗದ ಅಂಕಗಣಿತವನ್ನು ಸಮತೋಲನಗೊಳಿಸಲು ಬಿಜೆಪಿಯ ನಿರಂತರ ಪ್ರಯತ್ನವನ್ನು ಈ ಕ್ರಮ ಸೂಚಿಸುತ್ತದೆ. ಮೋಹನ್ ಯಾದವ್ ಅವರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಿರುವ ಕ್ರಮದ ಹಿಂದೆಯೂ ಬಿಜೆಪಿಯು ಇದೇ ತಂತ್ರಗಾರಿಕೆ ಅನುಸರಿಸುವುದು ಕಂಡುಬರುತ್ತದೆ.

    ರಾಜ್ಯಪಾಲ ಮಂಗುಭಾ ಸಿ ಪಟೇಲ್ ಅವರು ಹೊಸ ಸಂಪುಟ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.

    ಸೋಮವಾರ ಪ್ರಮಾಣ ವಚನ ಸ್ವೀಕರಿಸಿದವರಲ್ಲಿ ನಿರ್ಮಲಾ ಭೂರಿಯಾ, ನಾರಾಯಣ ಕುಶ್ವಾಹಾ ಮತ್ತು ನಾಗರ್ ಸಿಂಗ್ ಚೌಹಾಣ್ ಸೇರಿದ್ದಾರೆ. ಭೂರಿಯಾ ಅವರು ಈ ಹಿಂದೆ ಕಿರಿಯ ಆರೋಗ್ಯ ಸಚಿವರಾಗಿದ್ದರು. ಕುಶ್ವಾಹಾ ಅವರು ಕಿರಿಯ ಗೃಹ ಸಚಿವರಾಗಿದ್ದರು.

    ವಿಜಯ್ ಶಾ, ಕರಣ್ ಸಿಂಗ್ ವರ್ಮಾ, ರಾಕೇಶ್ ಸಿಂಗ್, ವಿಶ್ವಸ್ ಸಾರಂಗ್, ರಾಕೇಶ್ ಶುಕ್ಲಾ, ಚೈತನ್ಯ ಕಶ್ಯಪ್, ಇಂದರ್ ಸಿಂಗ್ ಪರ್ಮಾರ್, ಮತ್ತು ಉದಯ್ ಪ್ರತಾಪ್ ಸಿಂಗ್ ಅವರಂತೆ ಬುಡಕಟ್ಟು ನಾಯಕ ಸಂಪತಿಯ ಉಯಿಕೇ, ಪ್ರದ್ಯುಮನ್ ಸಿಂಗ್ ತೋಮರ್, ತುಳಸಿ ರಾಮ್ ಸಿಲಾವತ್, ಗೋವಿಂದ್ ಸಿಂಗ್ ರಜಪೂತ್, ಐದಲ್ ಸಿಂಗ್ ಕಂಸನಾ ಅವರೂ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

    ಸಬ್​ ಕಾ ರಾಮ: ರಾಮ ಮಂದಿರ “ಪ್ರಾಣ ಪ್ರತಿಷ್ಠಾ” ಸಮಾರಂಭದಲ್ಲಿ ಸರ್ವರನ್ನು ತಲುಪಲು ಆರ್​ಎಸ್​ಎಸ್​ ಪ್ಲ್ಯಾನ್

    ಅಪಘಾತ ಸ್ಥಳಕ್ಕೆ ಧಾವಿಸುತ್ತಿದ್ದಾಗ ಮತ್ತೊಂದು ಅಪಘಾತ: ಒಂದೇ ಕುಟುಂಬದ ನಾಲ್ವರು ಬಲಿ ತೆಗೆದುಕೊಂಡ ದಟ್ಟ ಮಂಜು

    700 ರೂಪಾಯಿಗೆ ಥಾರ್​ ಕಾರು ಕೇಳಿದ ಪುಟಾಣಿ: ವಾಹನ ಉದ್ಯಮಿ ಆನಂದ್ ಮಹೀಂದ್ರಾ ಹೇಳಿದ್ದೇನು? ಇಂಟರ್​ನೆಟ್​ ಬಳಕೆದಾರರ ಆಕರ್ಷಕ ಸಲಹೆಗಳೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts