More

    ಪ್ರಧಾನಿ ಮೋದಿ ನೂತನ ಸಚಿವ ಸಂಪುಟದಲ್ಲಿ 27 ಒಬಿಸಿ ಮಂತ್ರಿಗಳು

    ನವದೆಹಲಿ: ಪ್ರಧಾನಿ ಮೋದಿ ನೇತೃತ್ವದ ಹೊಸ ಸಚಿವ ಸಂಪುಟದಲ್ಲಿ 50 ವರ್ಷಕ್ಕಿಂತ ಕಡಿಮೆ ವಯಸ್ಸಿನ 14 ಮಂತ್ರಿಗಳಿದ್ದಾರೆ. ಜಾತಿ, ವಲಯ ಮತ್ತು ಅನುಭವವನ್ನು ಅಳೆದು ತೂಗಿ ಸಂಪುಟದಲ್ಲಿ ಸಮತೋಲನ ಕಾಯ್ದುಕೊಳ್ಳಲಾಗಿದೆ.

    ಒಂಬತ್ತು ರಾಜ್ಯಗಳ 11 ಮಹಿಳಾ ಮಂತ್ರಿಗಳು ಹೊಸ ಸಂಪುಟದಲ್ಲಿ ಇರಲಿದ್ದಾರೆ. ಬಿಹಾರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಕರ್ನಾಟಕ, ರಾಜಸ್ಥಾನ ಮತ್ತು ತಮಿಳುನಾಡು ಸೇರಿದ ಎಂಟು ರಾಜ್ಯಗಳಿಂದ ಬಂದ 12 ಮಂದಿ ಪರಿಶಿಷ್ಟ ಜಾತಿಯ ಮಂತ್ರಿಗಳಿದ್ದು, ಇಬ್ಬರು ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ನೂತನ ಮಂತ್ರಿಗಳಲ್ಲಿ 27 ಮಂದಿ ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದು, ಅವರಲ್ಲಿ ಐದು ಮಂದಿ ಸಂಪುಟದಲ್ಲಿರುತ್ತಾರೆ.

    ದಾಖಲೆಯ ಎಂಟು ಮಂತ್ರಿಗಳು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದು, ಅವರಲ್ಲಿ ಮೂವರು ಸಂಪುಟದಲ್ಲಿ ಇರಲಿದ್ದಾರೆ. ಅವರೆಲ್ಲ ಅರುಣಾಚಲ ಪ್ರದೇಶ, ಜಾರ್ಖಂಡ್, ಛತ್ತೀಸ್​ಗಢ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ ಮತ್ತು ಅಸ್ಸಾಂನಿಂದ ಬಂದವರಾಗಿದ್ದಾರೆ.

    ಹೊಸ ಸಚಿವಾಲಯದಲ್ಲಿ ಸಮುದಾಯಗಳನ್ನು ಕಡಿತಗೊಳಿಸಲಾಗಿದೆ. ಓರ್ವ ಮುಸ್ಲಿಂ, ಓರ್ವ ಸಿಖ್, ಓರ್ವ ಕ್ರಿಶ್ಚಿಯನ್ ಮತ್ತು ಇಬ್ಬರು ಬೌದ್ಧ ಮಂತ್ರಿಗಳು ಇರುತ್ತಾರೆ. ಕ್ಯಾಬಿನೆಟ್ ಮಂತ್ರಿಗಳಲ್ಲಿ ಮೂವರು ಧಾರ್ಮಿಕ ಅಲ್ಪಸಂಖ್ಯಾತರು ಇರಲಿದ್ದಾರೆ. (ಏಜೆನ್ಸೀಸ್​)

    ಇಂದು ಪ್ರಮಾಣ ವಚನ ಸ್ವೀಕರಿಸುವ ಸಚಿವರ ಪಟ್ಟಿ ಬಿಡುಗಡೆ; ಕರ್ನಾಟಕದ ನಾಲ್ವರಿಗೆ ಮಂತ್ರಿಗಿರಿ

    ಕೇಂದ್ರ ಸಚಿವ ಸಂಪುಟ ಪುನರಚನೆಗೆ ಕ್ಷಣಗಣನೆ: ಘಟಾನುಘಟಿ ಸಚಿವರುಗಳೇ ಸಂಪುಟದಿಂದ ಔಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts