More

    ‘ಹಂ ಆಪ್ಕೆ ಹೇ ಕೌನ್​’ಗೆ 26 ವರ್ಷ … ನೆನಪುಗಳನ್ನು ಹಂಚಿಕೊಂಡ ಮಾಧುರಿ

    ಭಾರತೀಯ ಚಿತ್ರರಂಗದಲ್ಲೇ ನೂರು ಕೋಟಿ ಸಂಪಾದಿಸಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾದ ಚಿತ್ರದ ಎಂದರೆ ಅದು ಸಲ್ಮಾನ್​ ಖಾನ್​ ಮತ್ತು ಮಾಧುರಿ ದೀಕ್ಷಿತ್​ ಅಭಿನಯದ ‘ಹಂ ಆಪ್ಕೆ ಹೇ ಕೌನ್​’. ಈ ಚಿತ್ರ ಆ ಕಾಲಕ್ಕೆ ಅದೆಂಥಾ ಹವಾ ಸೃಷ್ಟಿಸಿತ್ತು ಎಂದರೆ, ಚಿತ್ರ ಬಿಡುಗಡೆಯಾಗಿ ಎರಡ್ಮೂರು ವರ್ಷಗಳ ಕಾಲ ಅದರ ಬಗ್ಗೆಯೇ ಚರ್ಚೆಯಾಗಿತ್ತು.

    ಈಗ್ಯಾಕೆ ಈ ಚಿತ್ರದ ವಿಷಯವೆಂದರೆ, ಈ ಐಕಾನಿಕ್​ ಚಿತ್ರ ಬಿಡುಗಡೆಯಾಗಿ ಇಂದಿಗೆ 26 ವರ್ಷಗಳಾಗಿವೆ. 1994ರಲ್ಲಿ ಇದೇ ದಿನ ಈ ಚಿತ್ರ ಬಿಡುಗಡೆಯಾಗಿತ್ತು. ಚಿತ್ರದ ಅವಧಿ ಹೆಚ್ಚಿದ್ದರಿಂದ, ಇಷ್ಟೊಂದು ದೊಡ್ಡ ಚಿತ್ರವನ್ನು ಯಾರು ನೋಡುತ್ತಾರೆ ಎಂಬ ಪ್ರಶ್ನೆ ಕೇಳಿಬಂದಿತ್ತು.

    ಇದನ್ನೂ ಓದಿ: ನವೆಂಬರ್​ನಲ್ಲಿ ಫೀಲ್ಡ್​ಗೆ ಇಳಿಯುತ್ತಾರಂತೆ ಸಲ್ಮಾನ್​ ಖಾನ್​

    ಏಕೆಂದರೆ, ಅದಕ್ಕೂ ಮುಂಚಿನ ಕೆಲವು ವರ್ಷಗಳಲ್ಲಿ, ಅಷ್ಟೊಂದು ದೊಡ್ಡ ಚಿತ್ರ ಯಾವುದೂ ಬಂದಿರಲಿಲ್ಲ. ಹಾಗಾಗಿ ‘ಹಂ ಆಪ್ಕೆ ಹೇ ಕೌನ್​’ ಚಿತ್ರವನ್ನು ಜನ ನೋಡುತ್ತಾರಾ ಎಂಬ ಪ್ರಶ್ನೆ ಸಹಜವಾಗಿಯೇ ಬಾಲಿವುಡ್​ ವಲಯದಲ್ಲಿ ಇತ್ತು. ಆದರೆ, ಎಲ್ಲರ ನಿರೀಕ್ಷೆಗಳನ್ನು ತಲೆಕೆಳಗೆ ಮಾಡಿ, ಚಿತ್ರ ಅದ್ಭುತ ಯಶಸ್ಸು ಸಾಧಿಸಿತು. ಈ ಚಿತ್ರದ ನಂತರ ಸಲ್ಮಾನ್​ ಖಾನ್​ ಸೂಪರ್​ ಸ್ಟಾರ್ ಆದರು.

    ಈಗ ಚಿತ್ರ 26 ವರ್ಷಗಳನ್ನು ಪೂರೈಸಿದ ಖುಷಿಯನ್ನು, ಆ ಚಿತ್ರದ ನಾಯಕಿ ಮಾಧುರಿ ದೀಕ್ಷಿತ್​ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಆ ಚಿತ್ರದ ಒಂದು ಐಕಾನಿಕ್​ ಫೋಟೋ ಜತೆಗೆ, ಅದೇ ಮಾದರಿಯಲ್ಲಿ ನಂತರದ ವರ್ಷಗಳಲ್ಲಿ ತೆಗೆದು ಇನ್ನೊಂದು ಫೋಟೋ ಸೇರಿಸಿ ತಮ್ಮ ಅಭಿಮಾನಿಗಳ ಜತೆಗೆ ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: ಸಲ್ಮಾನ್​ ಖಾನ್​ ಟೈಗರ್ ಸರಣಿಯ ಮೂರನೇ ಚಿತ್ರ ನಿರ್ದೇಶಿಸುವವರು ಇವರೇ!

    ಈ ಕುರಿತು ಟ್ವೀಟ್​ ಮಾಡಿರುವ ಅವರು. ”ಹಂ ಆಪ್ಕೆ ಹೇ ಕೌನ್​’ ಚಿತ್ರಕ್ಕೆ 26 ವರ್ಷಗಳು ಪೂರೈಸಿವೆ ಎಂಬುದನ್ನು ನಂಬುವುದಕ್ಕೇ ಸಾಧ್ಯವಾಗುತ್ತಿಲ್ಲ. ಆ ಚಿತ್ರವು ಇನ್ನೂ ನೆನಪಲ್ಲಿ ಹಸಿರಾಗಿದೆ. ಅದಕ್ಕೆ ಕಾರಣ, ಒಂದು ಅದ್ಭುತ ತಂಡದ ಪರಿಶ್ರಮ. ಪ್ರತಿಯೊಂದು ದೃಶ್ಯ ಸೆರೆ ಹಿಡಿಯುವುದಕ್ಕೆ ಚಿತ್ರತಂಡ ಪಟ್ಟ ಶ್ರಮ ಅದ್ಭುತ. ಆ ಚಿತ್ರ ಹಿಟ್​ ಆಗಿದ್ದಷ್ಟೇ ಅಲ್ಲ, ಈಗಲೂ ಜನ ಅದರ ಬಗ್ಗೆ ಮಾತಾಡಿಕೊಳ್ಳುತ್ತಾರೆ. ಇಂಥದ್ದೊಂದು ಚಿತ್ರವನ್ನು ಯಶಸ್ವಿಗೊಳಿಸಿದ ಎಲ್ಲರಿಗೂ ಥ್ಯಾಂಕ್ಸ್​’ ಎಂದು ಅವರು ಧನ್ಯವಾದ ಹೇಳಿದ್ದಾರೆ.

    ‘ಹಂ ಆಪ್ಕೆ ಹೇ ಕೌನ್​’ ಚಿತ್ರದಲ್ಲಿ ಸಲ್ಮಾನ್​ ಮತ್ತು ಮಾಧುರಿ ಜತೆಗೆ ಅನುಪಂ ಖೇರ್​, ರೀಮಾ ಲಾಗೂ, ಅಲೋಕ್​ ನಾಥ್​, ರೇಣುಕಾ ಶಹಾನೆ, ಮೊನಿಶ್​ ಬೆಹ್ಲ್​ ಮುಂತಾದವರು ಅಭಿನಯಿಸಿದ್ದು, ಸೂರಜ್​ ಬರ್ಜಾತ್ಯ ನಿರ್ದೇಶನ ಮಾಡಿದ್ದಾರೆ.

    ನಿಮ್ಮಪ್ಪ ಸಿಎಂ ಆಗಿದ್ದು ಹೇಗೆ ಅಂತ ನಮಗೆ ಗೊತ್ತಿಲ್ವಾ?: ಕಂಗನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts