More

    ತೂಕದಲ್ಲಿ ಅಜಗಜಾಂತರ ವ್ಯತ್ಯಾಸವಿರುವ ಇವರಿಬ್ಬರ ಲವ್​ ಸ್ಟೋರಿ ತುಂಬಾ ಡಿಫರೆಂಟ್..!​

    ಒಟ್ಟಾವ: ಮಾಜಿ​ ಪ್ರಿಯಕರನ ಕಿರುಕುಳದಿಂದ ಮನನೊಂದಿದ್ದ 257 ಎಲ್​ಬಿ (117 ಕೆ.ಜಿ) ತೂಕವಿರುವ ಮಹಿಳಾ ಕೇರ್​ ವರ್ಕರ್ ಇದೀಗ ತನಗಿಂತ ಅರ್ಧ ತೂಕ ಕಡಿಮೆ ಇರುವ ಹೊಸ ಪ್ರಿಯಕರನ ಪ್ರೀತಿಯಲ್ಲಿ ಬಿದ್ದು ಸಂತಸವಾಗಿರುವುದಾಗಿ ಹೇಳಿಕೊಂಡಿದ್ದಾಳೆ. ತನ್ನ ದೇಹದ ಭಾರಕ್ಕಿಂತ ಮಾಜಿ ಪ್ರಿಯಕರ ಆಡಿದ ಮಾತಿನ ಭಾರವೇ ನನ್ನನ್ನು ಹೆಚ್ಚು ಕುಗ್ಗಿಸಿತು ಎಂದು ತಿಳಿಸಿದ್ದಾರೆ.

    ಮಹಿಳೆಯ ಹೆಸರು ಬ್ರಿಟ್ಟನಿ ಜಾಕಸ್​ (23). 22ರ ಮೈಕಟ್ಟು ಇರುವಂತೆ ತೂಕ ಇಳಿಸು ಎಂದು ಮಾಜಿ ಪ್ರಿಯಕರ ತುಂಬಾ ಒತ್ತಡ ಹೇರಿದ್ದರಿಂದ ನನ್ನ ಆತ್ಮವಿಶ್ವಾಸದೊಂದಿಗೆ ನಾನೇ ಹೋರಾಡುವಂತಾಗಿ ತೀವ್ರ ಕುಗ್ಗಿದ್ದೆ. ಏನೇ ಮಾಡಿದರೂ ದೇಹದ ಭಾರವನ್ನು ತಗ್ಗಿಸಲು ಸಾಧ್ಯವಾಗುತ್ತಿರಲಿಲ್ಲ. ಇದರ ನಡುವೆ ಮಾಜಿ ಪ್ರಿಯಕರ ಚುಚ್ಚು ಮಾತುಗಳನ್ನು ಆಡತ್ತಿದ್ದ. ನಾನು ಮಾನಸಿಕವಾಗಿ ಕುಗ್ಗಿ ತುಂಬಾ ಚಿಂತೆಯಲ್ಲಿದ್ದೆ. ಈ ಮಧ್ಯೆ ಮಾಜಿ ಪ್ರಿಯಕರ ಬ್ರೇಕ್​ ಅಪ್​ ನನ್ನನ್ನು ಮತ್ತಷ್ಟು ಆಘಾತಕ್ಕೆ ದೂಡಿತು ಎಂದು ಜಾಕಸ್​ ಮನಸಿನ ನೋವನ್ನು ತೋಡಿಕೊಂಡಳು.

    ಇದನ್ನೂ ಓದಿರಿ: ಪಾಲಕರಿಗೆ ಸುಳ್ಳು ಹೇಳಿ ಲಾಡ್ಜ್​ ಸೇರಿದ್ದ ಸರ್ಕಾರಿ ನೌಕರರಿಬ್ಬರ ಸ್ಥಿತಿ ನೋಡಿ ಬೆಚ್ಚಿಬಿದ್ದ ಪೊಲೀಸರು!

    ತೂಕದಲ್ಲಿ ಅಜಗಜಾಂತರ ವ್ಯತ್ಯಾಸವಿರುವ ಇವರಿಬ್ಬರ ಲವ್​ ಸ್ಟೋರಿ ತುಂಬಾ ಡಿಫರೆಂಟ್..!​

    ಕೊನೆಗೂ ತನ್ನ ಭಾರವನ್ನು ಕಡಿಮೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದ ಕೆನಡಾದ ಒಂಟ್ಯಾರಿಯೋ ಮೂಲದ ಜಾಕಸ್​, ಆಗಸ್ಟ್​ ತಿಂಗಳಲ್ಲಿ ಫೇಸ್​ಬುಕ್​ನಲ್ಲಿ ಮ್ಯಾಟ್​ ಮೊಂಟ್​ಗುಮೆರಿ (23) ಎಂಬ ಪರ್ಸನಲ್​ ಟ್ರೈನರ್​ ಪರಿಚಯವಾಗುತ್ತದೆ. ವಿಶೇಷವೆಂದರೆ ಮೊದಲ ಭೇಟಿಯಲ್ಲೇ ಇಬ್ಬರಿಗೂ ಪ್ರೇಮಾಂಕುರವಾಗುತ್ತದೆ. ಸದ್ಯ ಈ ಜೋಡಿ ನಿಶ್ಚಿತಾರ್ಥ ನೆರವೇರಿಸಿಕೊಂಡಿದ್ದಾರೆ.

    ನಾವು ಮಾತನಾಡಲು ಆರಂಭಿಸಿದಾಗ ಡೇಟಿಂಗ್​ ಮಾಡುವುದನ್ನು ಬಿಟ್ಟುಬಿಡಲು ನಿರ್ಧರಿಸಿದ್ದೆವು. ಆದರೆ, ಎಲ್ಲವನ್ನು ಬದಿಗೊತ್ತಿ ಇಬ್ಬರು ಸಂತಸದಿಂದ ಇದ್ದೇವೆ. ಆರಂಭದಲ್ಲಿ ತುಂಬಾ ಮುಜುಗರ ಆಗುತ್ತಿತ್ತು. ಈ ಮೊದಲೇ ಸಂಬಂಧದಲ್ಲಿ ಇದ್ದೆ. ತೂಕ ಇಳಿಸಲು ಡಯೆಟ್​ ಮಾಡು ಇಲ್ಲವೇ ನಿನ್ನನ್ನು ಬಿಟ್ಟುಬಿಡುತ್ತೇನೆ ಎಂದಿದ್ದ. ಇದರಿಂದ ನನ್ನ ಆತ್ಮ ವಿಶ್ವಾಸಕ್ಕೆ ಧಕ್ಕೆಯಾಯಿತು. ಇದಾದ ಬೆನ್ನಲ್ಲೆ ತೂಕ ಇಳಿಸಲು ವರ್ಕೌಟ್​ ಆರಂಭಿಸಿದೆ. ಈ ನಡುವೆ ಒಂದು ಅರ್ಥವಾಯಿತು. ಅವನು ಹೇಳಿದ ಹಾಗೇ ಮಾಡಿದರೆ, ನಾನು ಇನ್ನು ಮುಂದೆ ನನ್ನನ್ನೇ ಪ್ರೀತಿಸುವುದಿಲ್ಲ ಮತ್ತು ಸೌಂದರ್ಯದ ಬಗ್ಗೆ ಬೇರೊಬ್ಬರ ಗ್ರಹಿಕೆಗಾಗಿ ನಾನು ಬದಲಾಗುತ್ತಿದ್ದೇನೆ ಎಂದು ಅರಿತುಕೊಂಡೆ. ಕೊನೆಗೂ ಆತ ನನ್ನಿಂದ ದೂರವಾದ ಎಂದು ಜಾಕಸ್​ ಹೇಳಿಕೊಂಡಿದ್ದಾಳೆ.

    ಇದನ್ನೂ ಓದಿರಿ: 24 ವರ್ಷದ ಹಿಂದೆ ಮಾಡಿದ್ದ ತಪ್ಪಿಗಾಗಿ ಸರ್ಕಾರಿ ಕೆಲಸ ಕಳೆದುಕೊಂಡ ಮಹಿಳೆ..!ತೂಕದಲ್ಲಿ ಅಜಗಜಾಂತರ ವ್ಯತ್ಯಾಸವಿರುವ ಇವರಿಬ್ಬರ ಲವ್​ ಸ್ಟೋರಿ ತುಂಬಾ ಡಿಫರೆಂಟ್..!​

    ಇದಾದ ಬಳಿಕ ಪರಿಚಯವಾದ ಮ್ಯಾಟ್​, ಜಾಕಸ್​ನ ಆತ್ಮವಿಶ್ವಾಸ ಮತ್ತು ದೇಹದ ಸಕಾರಾತ್ಮಕ ಸಂದೇಶಕ್ಕೆ ತಕ್ಷಣ ಆಕರ್ಷಿತರಾದರಂತೆ. ಅಲ್ಲದೆ, ತನಗೂ ಸಹ ಹಿಂದೆ ಮಹಿಳೆಯೊಬ್ಬಳ ಜತೆ ಸಂಬಂಧ ಇದ್ದುದ್ದಾಗಿ ಮ್ಯಾಟ್​ ಒಪ್ಪಿಕೊಂಡಿದ್ದು, ಇದೀಗ ಎಲ್ಲವನ್ನು ಮರೆತು ಇಬ್ಬರು ಪ್ರೀತಿಯ ಉತ್ತಂಗದಲ್ಲಿದ್ದಾರೆ. ಇದರೊಂದಿಗೆ ಜಾಕಸ್​ ತೂಕ ಇಳಿಕೆಯ ಕಡೆಗೆ ಗಮನವನ್ನು ಹರಿಸುತ್ತಿದ್ದಾರೆ. ಇಬ್ಬರ ನಡುವಿನ ತೂಕದ ವ್ಯತ್ಯಾಸದ ಬಗ್ಗೆ ಅವರೆಂದು ದುಃಖಿತರಾಗಿಲ್ಲವಂತೆ. ಯಾರು ಏನೇ ಹೇಳಿದರು ಒಟ್ಟಿಗೆ ಇರುತ್ತೇವೆ ಎಂದು ಜಾಕಸ್​ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)

    ಪ್ರಿಯಕರನ ಕರೆ ಬಂತೆಂದು ಮನೆಯಿಂದ ಹೊರ ಹೋದ ಬಾಲಕಿ ಶವವಾಗಿ ಪತ್ತೆ! ಆ ರಾತ್ರಿಯ ರಹಸ್ಯ ಇಲ್ಲಿದೆ

    ಬ್ಲೂಫಿಲ್ಮ್​ ವೀಕ್ಷಣೆಗೆ ವೇದಿಕೆಯಾಗ್ತಿದೆ ಸದನ- ಸಭಾಪತಿಯಿಂದ ಹೊರಟಿತೊಂದು ಆದೇಶ

    ಕೈ ಕೊಟ್ಟ ಪ್ರೇಯಸಿಯ ಬರ್ತ್​ ಡೇ ಪಾರ್ಟಿಗೆ ಮಾಜಿ ಲವರ್ ಎಂಟ್ರಿ! ನೋಡನೋಡುತ್ತಿದ್ದಂತೆ ನಡೆಯಿತು ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts