More

    24 ವರ್ಷದ ಹಿಂದೆ ಮಾಡಿದ್ದ ತಪ್ಪಿಗಾಗಿ ಸರ್ಕಾರಿ ಕೆಲಸ ಕಳೆದುಕೊಂಡ ಮಹಿಳೆ..!

    ಮಲ್ಕಂಗಿರಿ: ಒಡಿಶಾದ ಮಲ್ಕಂಗಿರಿಯಲ್ಲಿ ಸೀನಿಯರ್​ ಕ್ಲರ್ಕ್​ ಆಗಿರುವ ಮಹಿಳೆಯೊಬ್ಬಳು 24 ವರ್ಷದ ಹಿಂದೆ ಮಾಡಿದ್ದ ತಪ್ಪಿಗಾಗಿ ಕೈತುಂಬ ಸಂಬಳ ಬರುತ್ತಿದ್ದ ಸರ್ಕಾರಿ ಉದ್ಯೋಗವನ್ನು ಕಳೆದುಕೊಂಡಿದ್ದಾರೆ.

    ಕ್ಲರ್ಕ್​ ಲಕ್ಷ್ಮಿಪ್ರಿಯಾ ಬೆಹೆರಾ ಎಂಬಾಕೆಯನ್ನು ಮಲ್ಕಂಗಿರಿ ಜಿಲ್ಲಾಧಿಕಾರಿ ಯೆದ್ದುಲಾ ವಿಜಯ್​ ಕೆಲಸದಿಂದ ವಜಾಗೊಳಿಸಿದ್ದಾರೆ. 24 ವರ್ಷಗಳ ಹಿಂದೆ ಕೆಲಸಕ್ಕೆ ಸೇರುವಾಗ ನಕಲಿ ಎಸ್​ಟಿ ಪ್ರಮಾಣಪತ್ರ ನೀಡಿರುವ ಆರೋಪ ಕೇಳಿಬಂದು ಹಿನ್ನೆಲೆಯಲ್ಲಿ ಕೆಲಸದಿಂದ ಬೆಹೆರಾರನ್ನು ತೆಗೆದುಹಾಕಲಾಗಿದೆ.

    ಇದನ್ನೂ ಓದಿರಿ: ಹೆರಿಗೆ ಬಳಿಕ ಮಾಸುಚೀಲವನ್ನೂ ಬೇಯಿಸಿ ತಿಂದ ತಾಯಿ!; ಎರಡನೇ ಹೆರಿಗೆ ನಂತರವೂ ಮತ್ತದೇ ಪುನರಾವರ್ತನೆ…

    ಇದಕ್ಕೂ ಮುನ್ನ ಒಡಿಶಾದ ದಕ್ಷಿಣ ಕಂದಾಯ ಆಯುಕ್ತರು ತನಿಖೆಯನ್ನು ಕೈಗೊಂಡಿದ್ದರು. ಇದೀಗ ತನಿಖಾ ವರದಿಯ ಆಧಾರದ ಮೇಲೆ ಬೆಹೆರಾರನ್ನು ಕೆಲಸದಿಂದ ವಜಾಗೊಳಿಸಿ ಆದೇಶ ಹೊರಡಿಸಲಾಗಿದೆ.

    ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗ(ಎಸ್​ಇಬಿಸಿ)ದ ಬೆಹೆರಾ ಪರಿಶಿಷ್ಟ ಪಂಗಡ (ಎಸ್​ಟಿ)ದ ವ್ಯಕ್ತಿಯನ್ನು ಮದುವೆಯಾಗಿದ್ದಾರೆ. ಆ ಬಳಿಕ ಗಂಡನ ಗುರುತಿನ ಆಧಾರದ ಮೇಲೆ ಎಸ್​ಟಿ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿದ್ದರು. ಸರಿಯಾದ ಪರಿಶೀಲನೆ ನಡೆಸದೇ ಜುನಾಗಢದ ತಹಸೀಲ್ದಾರ್​ ಎಸ್​ಟಿ ಪ್ರಮಾಣಪತ್ರವನ್ನು ವಿತರಣೆ ಮಾಡಿದ್ದರು. ಇದೇ ಪ್ರಮಾಣಪತ್ರ ಪಡೆದುಕೊಂಡು ಬೆಹೆರಾ ಸರ್ಕಾರಿ ಕೆಲಸವನ್ನು ಪಡೆದುಕೊಂಡಿದ್ದರು.

    ಇದನ್ನೂ ಓದಿರಿ: ಶೃಂಗೇರಿಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಮೇಲೆ 30ಕ್ಕೂ ಹೆಚ್ಚು ಜನರಿಂದ ಸಾಮೂಹಿಕ ಅತ್ಯಾಚಾರ!

    ಇದೀಗ 24 ವರ್ಷದ ಹಿಂದೆ ತಾನು ಮಾಡಿದ ತಪ್ಪಿನಿಂದಾಗಿ ಕೆಲಸದಿಂದ ವಜಾಗೊಂಡಿದ್ದಾರೆ. ಈ ಮೂಲಕ ಸರ್ಕಾರಿ ಉದ್ಯೋಗವನ್ನು ಕಳೆದುಕೊಂಡು ಕಣ್ಣೀರಿಡುವಂತಾಗಿದೆ. (ಏಜೆನ್ಸೀಸ್​)

    ಗ್ರಾಮ ಪಂಚಾಯಿತಿ ಚುನಾವಣೆಯ ಪರಾಜಿತ ಅಭ್ಯರ್ಥಿಯಿಂದಲೇ ಪತ್ನಿ ಕೊಲೆ

    ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕ ಅರೆಸ್ಟ್​

    ಕರ್ನಾಟಕದ ಈ ಊರಲ್ಲಿ 150 ಎಕರೆ ಜಮೀನು ಫ್ರೀ! ಸಿಕ್ಕಷ್ಟು ಜಾಗಕ್ಕೆ ಬೇಲಿ ಹಾಕಿದ ಜನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts