More

    257 ಮತಗಟ್ಟೆಗಳಲ್ಲಿ ಮತದಾನ

    ನಾಗಮಂಗಲ: ನಾಗಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 257 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದ್ದು, ಈ ಪೈಕಿ 52 ಸೂಕ್ಷ್ಮ ಮತಗಟ್ಟೆಗಳು ಹಾಗೂ 3 ಭವ್ಯ ಮತಗಟ್ಟೆಗಳಾಗಿವೆ.
    ಕ್ಷೇತ್ರದಲ್ಲಿ 1,07,115 ಪುರುಷರು, 1,07,075 ಮಹಿಳೆಯರು ಹಾಗೂ ಇತರ 12 ಸೇರಿ ಒಟ್ಟು 2,14,202 ಮತದಾರರಿದ್ದಾರೆ. ಚುನಾವಣಾ ಕರ್ತವ್ಯಕ್ಕೆ ಒಟ್ಟು 1108 ಸಿಬ್ಬಂದಿ ನಿಯೋಜಿಸಿದ್ದು, ಈ ಪೈಕಿ ಪಿಆರ್‌ಒ 277, ಎಪಿಆರ್‌ಒ 277 ಹಾಗೂ ಪಿಒ 554 ಆಗಿದ್ದಾರೆ. ಪೊಲೀಸ್ ಇಲಾಖೆಯಿಂದಲೂ ಭದ್ರತೆಗಾಗಿ ಸಿಬ್ಬಂದಿ ನಿಯೋಜಿಸಿದ್ದು, 2 ಡಿವೈಎಸ್ಪಿ, 5 ಸಿಪಿಐ, 8 ಪಿಎಸ್ಸೈ, 252 ಪೊಲೀಸರು ಹಾಗೂ 130 ಜನ ಗೃಹರಕ್ಷಕ ದಳ, ಒಂದು ಕೆಎಸ್‌ಆರ್‌ಪಿ ತುಕಡಿ ಹಾಗೂ 3 ಅರೆಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
    ಜಿಲ್ಲಾಧಿಕಾರಿ ಪರಿಶೀಲನೆ: ಪಟ್ಟಣದ ಜೂನಿಯರ್ ಕಾಲೇಜಿನ ಮಸ್ಟರಿಂಗ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಡಾ.ಗೋಪಾಲಕೃಷ್ಣ ಮಂಗಳವಾರ ಭೇಟಿ ನೀಡಿ ಮತದಾನ ಪ್ರಕ್ರಿಯೆಗೆ ಮಾಡಲಾಗಿರುವ ಸಿದ್ಧತೆ ಕುರಿತು ಮಾಹಿತಿ ಪಡೆದರು. ಶಾಂತಿಯುತ ಮತದಾನವಾಗುವಂತೆ ಅಧಿಕಾರಿಗಳು ಕ್ರಮವಹಿಸುವಂತೆ ಸೂಚಿಸಿದರು.
    ಸಿಬ್ಬಂದಿ ಊಟದ ವ್ಯವಸ್ಥೆ, ವಾಹನಗಳ ವ್ಯವಸ್ಥೆ ಹಾಗೂ ಮತಗಟ್ಟೆಗಳ ಕುರಿತಾಗಿ ಮಾಹಿತಿ ಪಡೆದರು. ಚುನಾವಣಾಧಿಕಾರಿ ಅಕ್ರಂ ಅಲಿಶಾ, ಸಹಾಯಕ ಚುನಾವಣಾಧಿಕಾರಿ ನಯೀಂ ಉನ್ನಿಸಾ, ಗ್ರೇಡ್-2 ತಹಸೀಲ್ದಾರ್ ಸ್ವಾಮೀಗೌಡ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts