More

    24 ಗಂಟೆಯಲ್ಲಿ 162 ಜನರಿಗೆ ಸೋಂಕು

    ಕಾರವಾರ: ಜಿಲ್ಲೆಯಲ್ಲಿ ಶನಿವಾರ ಒಂದೇ ದಿನ 162 ಜನರಿಗೆ ಕರೊನಾ ಸೋಂಕು ತಗುಲಿದೆ. ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ 24 ಗಂಟೆಯಲ್ಲಿ 150 ಕ್ಕೂ ಹೆಚ್ಚು ಕರೊನಾ ರೋಗಿಗಳು ಪತ್ತೆಯಾಗಿದ್ದಾರೆ.

    ಹಳಿಯಾಳ ಹಾಗೂ ದಾಂಡೇಲಿ ಸೇರಿ 45, ಭಟ್ಕಳದಲ್ಲಿ 55, ಕಾರವಾರ-12, ಅಂಕೋಲಾ- 16, ಕುಮಟಾ- 5, ಹೊನ್ನಾವರ- 8, ಶಿರಸಿ- 11, ಮುಂಡಗೋಡ- 6, ಜೊಯಿಡಾ- 2, ಸಿದ್ದಾಪುರ ಹಾಗೂ ಯಲ್ಲಾಪುರದಲ್ಲಿ ತಲಾ 1 ಪ್ರಕರಣಗಳು ಪತ್ತೆಯಾಗಿವೆ. ಭಟ್ಕಳದಲ್ಲಿ ಮುಟ್ಟಳ್ಳಿ ಪಿಡಿಒ ಹಾಗೂ ತಹಸೀಲ್ದಾರ್ ಕಚೇರಿಯ ಸಿಬ್ಬಂದಿಗೆ 1 ವರ್ಷದ ಬಾಲಕಿಗೆ, 70 ವರ್ಷದ ವೃದ್ಧನಿಗೂ ಕರೊನಾ ತಗುಲಿದೆ. ಹಳಿಯಾಳದಲ್ಲಿ ಯಡೋಗಾ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗೆ, ತಾಲೂಕು ಆಸ್ಪತ್ರೆ ನರ್ಸ್​ಗೆ ಹಾಗೂ ಪೊಲೀಸ್ ಸಿಬ್ಬಂದಿಗೆ ಕರೊನಾ ಬಂದಿದೆ.

    ಕಾರವಾರದ ಗ್ರಾಮೀಣ ಭಾಗದಲ್ಲಿ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ ಹಲವರಿಗೆ ಕರೊನಾ ದೃಢಪಟ್ಟಿದೆ.

    ದಾಂಡೇಲಿಯ 37 ಜನರಿಗೆ ಕರೊನಾ ತಟ್ಟಿದೆ.ಮಾರುತ್ನಿಗರದಲ್ಲಿ 10, ಟೌನ್​ಶಿಪ್​ನಲ್ಲಿ 6, ಹಳೇ ದಾಂಡೇಲಿಯಲ್ಲಿ 5 ಪ್ರಕರಣಗಳು ಪತ್ತೆಯಾಗಿವೆ.

    88 ಜನರ ಬಿಡುಗಡೆ: ಕರೊನಾದಿಂದ ಮುಕ್ತಿ ಪಡೆದ 88 ಜನರನ್ನು ಶನಿವಾರ ಬಿಡುಗಡೆ ಮಾಡಲಾಗಿದೆ. ಹಳಿಯಾಳ, ಭಟ್ಕಳದಲ್ಲಿ ತಲಾ 33, ಮುಂಡಗೋಡ-13, ಕುಮಟಾ- 5, ಕಾರವಾರ- 3, ಹೊನ್ನಾವರದಲ್ಲಿ ಒಬ್ಬರನ್ನು ಕೇರ್ ಸೆಂಟರ್ ನಿಂದ ಬಿಡುಗಡೆ ಮಾಡಲಾಗಿದೆ.

    ಹೋಂ ಐಸೋಲೇಶನ್: ಕರೊನಾ ರೋಗ ಲಕ್ಷಣ ರಹಿತ ಸೋಂಕಿತರಿಗೆ ಮನೆಯಲ್ಲೇ ಚಿಕಿತ್ಸೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತಿದೆ. ಈ ರೀತಿ ಭಟ್ಕಳ ಹಾಗೂ ಶಿರಸಿಯ ತಲಾ 17, ಕುಮಟಾ ಹಾಗೂ ಕಾರವಾರದ ತಲಾ 5, ಅಂಕೋಲಾದ 7, ಮುಂಡಗೋಡ ಹಾಗೂ ಹಳಿಯಾಳದ ತಲಾ ಇಬ್ಬರು, ಯಲ್ಲಾಪುರದ 9 ಜನ ಸೇರಿ ಒಟ್ಟು 64 ಸೋಂಕಿತರು ಹೋಂ ಐಸೋಲೇಶನ್​ನಲ್ಲಿರಲು ಅವಕಾಶ ಕಲ್ಪಿಸಲಾಗಿದೆ.

    ಆತಂಕ ಬೇಡ: ಕ್ರಿಮ್ಸ್ ಆಸ್ಪತ್ರೆಯ ಜೀವ ವಿಜ್ಞಾನ ಪ್ರಯೋಗಾಲಯಕ್ಕೆ ಔಷಧೀಕರಣ ಮಾಡಬೇಕಾಗಿರುವುದರಿಂದ ಒಂದೂವರೆ ದಿನ ಬಂದ್ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಂದ ಎಲ್ಲ ಗಂಟಲ ದ್ರವದ ಮಾದರಿಗಳನ್ನೂ ತಪಾಸಣೆಗೆ ಒಳಪಡಿಸಿದ್ದರಿಂದ ಹೆಚ್ಚಿನ ಪ್ರಕರಣಗಳು ಪತ್ತೆಯಾಗಿವೆ. ಆತಂಕ ಬೇಡ. ಇನ್ನೊಂದು ದಿನ ವಿವಿಧ ತಾಲೂಕುಗಳಲ್ಲಿ ರ್ಯಾಪಿಡ್ ಟೆಸ್ಟ್ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ತಿಳಿಸಿದ್ದಾರೆ.

    ಸೋಂಕಿತೆಗೆ ಸುಸೂತ್ರ ಹೆರಿಗೆ: ಕರೊನಾ ಸೋಂಕಿನಿಂದ ಬಳಲುತ್ತಿದ್ದ ದೇವಳಮಕ್ಕಿಯ ಗರ್ಭಿಣಿಗೆ ಕಾರವಾರದ ಕ್ರಿಮ್್ಸ ವೈದ್ಯರು ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸಿದ್ದಾರೆ. ಕಳೆದ ಜು.22 ರಂದು ಕರೊನಾ ಪಾಸಿಟಿವ್ ಆಗಿದ್ದ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದರು. ಜನಿಸಿದ ಹೆಣ್ಣು ಮಗು ಆರೋಗ್ಯವಾಗಿದೆ. ಮಗುವಿಗೂ ಕರೊನಾ ರ್ಯಾಪಿಡ್ ಟೆಸ್ಟ್ ಮಾಡಲಾಗಿದ್ದು, ಮಗುವಿಗೆ ಸೋಂಕು ಇಲ್ಲದಿರುವುದು ಪತ್ತೆಯಾಗಿದೆ. ತಾಯಿಯನ್ನು ಪ್ರತ್ಯೇಕ ವಾರ್ಡ್​ನಲ್ಲಿ ಇರಿಸಲಾಗಿದೆ. ಆದರೆ, ಮಗುವಿಗೆ ಸ್ತನ್ಯಪಾನದ ವ್ಯವಸ್ಥೆ ಮಾಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ. ಜಿಲ್ಲಾ ಸರ್ಜನ್ ಡಾ.ಶಿವಾನಂದ ಕುಡ್ತರಕರ್ ಅವರ ನೇತೃತ್ವದಲ್ಲಿ ಡಾ.ನರೇಶ ಪಾವಸ್ಕರ್, ಡಾ.ಪೂಜಾ, ಡಾ.ಮಂಜುನಾಥ ಭಟ್, ಡಾ.ಅರ್ಚನಾ ಪಿಕಳೆ, ಡಾ.ವಿಶ್ವನಾಥ, ಡಾ. ವಜ್ರಮಟ್ಟಿ ಅವರ ತಂಡ ಹೆರಿಗೆ ಮಾಡಿಸಿದೆ. ಶುಶ್ರೂಷಕಿಯರಾದ ಜಯಶ್ರೀ ನಾಯ್ಕ, ಸುಷ್ಮಾ ನಾಯ್ಕ, ಕನ್ಸೆಪ್ಟಾ ಅಲ್ಮೆಡಾ, ಮೇಘಾ ನಾಯ್ಕ, ಸಚಿನ್​ಸಹಕರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts