More

    ಹೊಸ ವರ್ಷದ ಸಂಭ್ರಮದ ನಡುವೆಯೇ ಆತಂಕ; ರಾಜ್ಯದಲ್ಲಿ ಒಂದೇ ದಿನ 23 ಒಮಿಕ್ರಾನ್ ಪ್ರಕರಣ!

    ಬೆಂಗಳೂರು: ಒಮಿಕ್ರಾನ್ ಭೀತಿಯ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಟ್ಟುನಿಟ್ಟಿನ ನಿಯಮ, ಪೊಲೀಸ್ ಬಿಗಿ ಬಂದೋಬಸ್ತ್​ ಮೂಲಕ ಹೊಸ ವರ್ಷಾಚರಣೆಯ ಸಂಭ್ರಮಕ್ಕೆ ಕೆಲವೊಂದು ನಿರ್ಬಂಧ ವಿಧಿಸುವ ಜತೆಗೆ ವಿಶೇಷ ನಿಗಾ ಕೂಡ ಇರಿಸಲಾಗಿದೆ. ಈ ನಡುವೆಯೇ ಇವತ್ತೊಂದೇ ದಿನ ರಾಜ್ಯದಲ್ಲಿ 23 ಒಮಿಕ್ರಾನ್ ಪ್ರಕರಣಗಳು ದೃಢಪಟ್ಟಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

    ಇದನ್ನೂ ಓದಿ: ಭಾರತಕ್ಕೆ ಮೊದಲ ಒಮಿಕ್ರಾನ್​ ತಂದಿಟ್ಟವ ಈಗ ದೇಶದಲ್ಲೇ ಇಲ್ಲ, ಅಸಲಿಗೆ ಆತ ಭಾರತೀಯನೇ ಅಲ್ಲ?: ಬೆಂಗ್ಳೂರಿಗೆ ಸುಮ್ನೆ ಕಳಂಕ!

    ಜಗತ್ತಿನಾದ್ಯಂತ ಕೆಲವು ದಿನಗಳಿಂದ ಹಾವಳಿ ಇಡುತ್ತ ಹಲವಾರು ದೇಶಗಳಿಗೂ ವ್ಯಾಪಿಸಿರುವ ಒಮಿಕ್ರಾನ್​ ಭಾರತದಲ್ಲೇ ಮೊದಲ ಬಾರಿಗೆ ಅದೂ ಬೆಂಗಳೂರಿನಲ್ಲೇ ದೃಢಪಟ್ಟಿತ್ತು. ಇದೇ ಡಿ. 2ರಂದು ಬೆಂಗಳೂರಿನಲ್ಲಿ ಎರಡು ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗುವ ಮೂಲಕ ಭಾರತಕ್ಕೆ ಹೊಸ ವೇರಿಯಂಟ್​ನ ಅಧಿಕೃತ ಪ್ರವೇಶವಾಗಿತ್ತು.

    ಇದನ್ನೂ ಓದಿ: ಭೂಕಂಪನದ ಜತೆಗೇ ಕೇಳಿಬಂತು ಭೂಮಿಯೊಳಗಿಂದ ನಿಗೂಢ ಶಬ್ದ; ಗ್ರಾಮಗಳಿಗೆ ತಹಸೀಲ್ದಾರ್ ಭೇಟಿ

    ಆ ಬಳಿಕ ಹೆಚ್ಚುತ್ತಲೇ ಬಂದ ಒಮಿಕ್ರಾನ್​ ಪ್ರಕರಣಗಳ ಸಂಖ್ಯೆ ನಿನ್ನೆಗೆ 43ಕ್ಕೆ ತಲುಪಿತ್ತು. ಆದರೆ ಇವತ್ತೊಂದೇ ದಿನ ರಾಜ್ಯದಲ್ಲಿ 23 ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದ್ದು, ಆ ಪೈಕಿ 19 ಸೋಂಕಿತರು ವಿದೇಶದಿಂದ ಬಂದವರಾಗಿದ್ದಾರೆ. ಈ ಮೂಲಕ ದೃಢೀಕೃತ ಪ್ರಕರಣಗಳ ಒಟ್ಟು ಸಂಖ್ಯೆ 66ಕ್ಕೆ ತಲುಪಿದೆ. ಅದರಲ್ಲೂ ಕಳೆದ 28 ದಿನಗಳಲ್ಲಿ ಪತ್ತೆಯಾದ ಒಟ್ಟು ಪ್ರಕರಣಗಳ ಅರ್ಧಕ್ಕೂ ಹೆಚ್ಚು ಪ್ರಕರಣಗಳು ಒಂದೇ ದಿನದಲ್ಲಿ ಪತ್ತೆಯಾಗಿರುವುದು ಆತಂಕ ಮೂಡಿಸಿದೆ.

    ಹೊಸ ವರ್ಷದ ಹಿಂದಿನ ದಿನವೇ ‘ಪ್ರೊಡಕ್ಷನ್​ ನಂ. 2’ ಘೋಷಿಸಿದ ರಿಷಬ್ ಶೆಟ್ಟಿ; ನೆಕ್ಸ್ಟ್​ ಇಂಟ್ರೊಡಕ್ಷನ್​ ನಾಯಕನಾ-ನಾಯಕಿಯಾ?!

    ‘ಕಿಕ್ಕು ಪ್ರಾಪ್ತಿರಸ್ತು’ ಎಂದು ಅವಳು ಇಂದೇ ಹಾರೈಸಿಬಿಟ್ಟಳು!; ಇದು ಕಾಕತಾಳೀಯವಾ..?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts