More

    ಕಾಣೆಯಾದವರ ಸುತ್ತ ಕಣ್ಣಾಮುಚ್ಚಾಲೆ; ವಿಜಯವಾಣಿ ಸಿನಿಮಾ ವಿಮರ್ಶೆ

    • ಚಿತ್ರ : 21 ಅವರ್ಸ್
    • ನಿರ್ದೇಶನ: ಜೈಶಂಕರ್ ಪಂಡಿತ್
    • ನಿರ್ಮಾಣ: ಅಹಂ ಕಾನ್ಸೆಪ್ಟಂ
    • ತಾರಾಗಣ: ಧನಂಜಯ್, ದುರ್ಗಾ ಕೃಷ್ಣ, ಸುದೇವ್ ನಾಯರ್, ರಾಹುಲ್ ಮಹಾದೇವ್, ಮುಂತಾದವರು

    | ಚೇತನ್ ನಾಡಿಗೇರ್ ಬೆಂಗಳೂರು

    ‘ನೀನು ಅಲ್ಲಿಗೆ ಹೋಗು. ಶ್ರೀಕಾಂತ್ ಎಂಬ ಪೊಲೀಸ್ ಆಫೀಸರ್ ನಿನಗೆ ಸಿಗುತ್ತಾನೆ. ನೀನು ಅವನ ಜತೆಗೆ ಪೊಲೀಸ್ ಸ್ಟೇಶನ್​ನಲ್ಲೇ ಇರು. ಅವರು ನಿನಗೆ ಪ್ರೊಟೆಕ್ಷನ್ ಕೊಡುತ್ತಾರೆ. ಅಲ್ಲಿಗೆ ಬಂದು ನಾನು ಪಿಕಪ್ ಮಾಡುತ್ತೇನೆ …’ ಹಾಗಂತ ಮಗಳಿಗೆ ಹೇಳಿರುತ್ತಾನೆ ಅಪ್ಪ. ಸ್ಟೇಶನ್​ಗೆ ಹೋದರೆ ಅಲ್ಲಿ ಮಗಳೂ ಇಲ್ಲ, ಶ್ರೀಕಾಂತ್ ಎಂಬ ಪೊಲೀಸ್ ಆಫೀಸರ್ ಸಹ ಇಲ್ಲ. ಇಷ್ಟಕ್ಕೂ ಮಗಳು ಕಾಣೆಯಾಗಿದ್ದು ಎಲ್ಲಿ?

    ಹೀಗೆ ರೋಚಕವಾಗಿ ಶುರುವಾಗುತ್ತದೆ ಧನಂಜಯ್ ಅಭಿನಯದ ‘21 ಅವರ್ಸ್’. ಹೀಗೆ ಶುರುವಾಗುವ ಚಿತ್ರವು, ಕ್ರಮೇಣ ಆ ಹುಡುಗಿ ಯಾರು, ಆಕೆಯ ಕಥೆಯೇನು, ಕಳೆದು ಹೋಗುವ ಮುನ್ನ ಏನೆಲ್ಲಾ ಆಗಿತ್ತು ಎಂಬ ವಿಷಯಗಳು ಬೇರೆಯವರ ಮೂಲಕ ತೆರೆದುಕೊಳ್ಳುತ್ತಾ ಹೋಗುತ್ತದೆ. ಆಕೆ ನಾಪತ್ತೆಯಾಗಿರುವುದರ ಹಿಂದೆ ಆಕೆಯ ಪತಿ, ಬಾಯ್ಫ್ರೆಂಡ್, ಮಲತಂದೆ ಅಥವಾ ಬೇರೆಯವರ ಕೈವಾಡ ಇರಬಹುದಾ ಎಂಬ ಸಂಶಯ ಬರುವಂತೆ ತೋರಿಸಲಾಗುತ್ತದೆ. ಆದರೆ, ನಿಜಕ್ಕೂ ಆಕೆಯ ಕಣ್ಮರೆಯ ಹಿಂದೆ ಯಾರ ಕೈವಾಡವಿದೆ? ಎಂದು ಗೊತ್ತಾಗಬೇಕಿದ್ದರೆ ಚಿತ್ರ ನೋಡಬೇಕು. ಕಥೆ ಕೇಳುವುದಕ್ಕೇನೋ ಚೆನ್ನಾಗಿದೆ. ಆದರೆ, ನಿಜಕ್ಕೂ ಅದೇ ಕುತೂಹಲ ಕಾಯ್ದುಕೊಂಡು, ಅಷ್ಟೇ ರೋಚಕವಾಗಿ ಮುಗಿ ಯುತ್ತದೆ ಎಂದು ಹೇಳುವುದು ಕಷ್ಟ. ಮೊದಲಾರ್ಧ ಕುತೂಹಲ ಉಳಿಸಿಕೊಳ್ಳುವ ಚಿತ್ರವು, ಕ್ರಮೇಣ ಸಡಿಲವಾಗುತ್ತಾ ಹೋಗುತ್ತದೆ. ಕೊನೆಗೆ, ಇಷ್ಟೇನಾ ಎನ್ನುವಂತೆ ಮುಗಿಯುತ್ತದೆ.

    ಚಿತ್ರದ ಕಥೆ ಹೆಚ್ಚಾಗಿ ನಡೆಯುವುದು ಒಳಾಂಗಣದಲ್ಲಿ. ಅದರಲ್ಲೂ ಮಾತುಗಳ ಮೂಲಕವೇ ಚಿತ್ರ ಮುಂದುವರೆಯುತ್ತದೆ. ಒಳಂಗಾಣವನ್ನು ಚೆನ್ನಾಗಿ ಸೆರೆಹಿಡಿಯುವ ಪ್ರಯತ್ನವನ್ನು ಛಾಯಾಗ್ರಾಹಕ ತಿರು ಮಾಡಿದ್ದಾರಾದರೂ, ಪ್ರೇಕ್ಷಕರನ್ನು ಸಂಪೂರ್ಣವಾಗಿ ಹಿಡಿದಿಡುವುದು ಕಷ್ಟ. ಮುಖ್ಯವಾಗಿ ಚಿತ್ರದಲ್ಲೊಂದಿಷ್ಟು ತಾಂತ್ರಿಕ ಸಮಸ್ಯೆಗಳಿವೆ. ಮಾತುಗಳು ಸರಿ ಯಾಗಿ ಕೇಳುವುದಿಲ್ಲ. ಮಲಯಾಳಿ ಪಾತ್ರ ಗಳಿರುವುದರಿಂದ ಭಾಷೆ ಸ್ಪಷ್ಟವಾಗುವುದಿಲ್ಲ. ನಟ ಧನಂಜಯ್ ಇದುವರೆಗೂ ಮಾಡದ ಒಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    ಕೆನಡಾದಲ್ಲಿ ಕನ್ನಡ ಮಾತು: ಚಂದ್ರ ಆರ್ಯರಿಗೆ ಭಾರಿ ಬೆಂಬಲ; ಹಿಂಬಾಲಕರ ಸಂಖ್ಯೆಯಲ್ಲಿ ಹೆಚ್ಚಳ…

    ಕಟ್ಟುಮಸ್ತಾದ ಯುವಕ ಸಾವಿಗೆ ಶರಣು; ಮನೆಯಲ್ಲೇ ಆತ್ಮಹತ್ಯೆ, ಕಾರಣ ನಿಗೂಢ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts