More

    ರಾಜ್ಯದ ಪಾಲಿಗೆ 2023 ನಿರಾಶಾದಾಯಕ ‘ವರ್ಷ’: ಕೈಕೊಟ್ಟ ಮುಂಗಾರು, ಹಿಂಗಾರು

    ಬೆಂಗಳೂರು: ರಾಜ್ಯವು 2023ರ ವರ್ಷದಾದ್ಯಂತ ಮಳೆ ಕೊರತೆ ಅನುಭವಿಸಿದ್ದು, ಬರ ಆವರಿಸಿದ್ದರಿಂದ ರೈತ ಸಮುದಾಯ ಸಂಕಷ್ಟ ಎದುರಿಸುವಂತಾಯಿತು. ಮುಂಗಾರು, ಹಿಂಗಾರು ಕೈಕೊಟ್ಟಿದ್ದರಿಂದ ಆಹಾರ ಉತ್ಪಾದನೆಯಲ್ಲೂ ಗಣನೀಯವಾಗಿ ಕುಂಠಿತವಾಯಿತು.

    ಜ.1ರಿಂದ ಡಿ.31ರವರೆಗೆ ವಾಡಿಕೆಯಂತೆ 1,153 ಮಿ.ಮೀ. ಮಳೆ ಆಗಬೇಕಿತ್ತು. ಆದರೆ, 872 ಮಿ.ಮೀ. ಮಾತ್ರ ಬಿದ್ದಿದ್ದು, ಶೇ.24 ಕೊರತೆ ಉಂಟಾಯಿತು. ವಾಡಿಕೆಯಂತೆ ಬರಬೇಕಿದ್ದ ನೈಋತ್ಯ ಮುಂಗಾರು ತಡವಾಗಿ ಆಗಮಿಸಿತ್ತು. ಜು.1ರಿಂದ ಸೆ.30ರವರೆಗೆ ವಾಡಿಕೆಯಂತೆ 852 ಮಿ.ಮೀ. ಮಳೆ ಆಗಬೇಕಿದ್ದರೂ 642 ಮಿ.ಮೀ. (ಶೇ.25) ಮಳೆ ಕೊರತೆ ಎದುರಾಗಿತ್ತು. ಈ ಅವಧಿಯಲ್ಲಿ ದಕ್ಷಿಣ ಒಳನಾಡಿನಲ್ಲಿ ವಾಡಿಕೆಯಂತೆ 369 ಮಿ.ಮೀ.ಗೆ ಪ್ರತಿಯಾಗಿ 271 ಮಿ.ಮೀ. ಮಳೆ ಬಿದ್ದಿತು. ಉತ್ತರ ಒಳನಾಡಿನಲ್ಲಿ 479 ಮಿ.ಮೀ.ಗೆ ಪ್ರತಿಯಾಗಿ 386 ಮಿ.ಮೀ. ಮಳೆ ಸುರಿದಿದೆ. ಅದೇ ರೀತಿ, ಕರಾವಳಿಯಲ್ಲಿ 3,101 ಮಿ.ಮೀ. ಮಳೆ ಬದಲು 2,514 ಮಿ.ಮೀ. ಸುರಿದಿತ್ತು. ಮಲೆನಾಡಲ್ಲಿ 1,556 ಮಿ.ಮೀ. ಬದಲಾಗಿ 956 ಮಿ.ಮೀ. ಸುರಿದಿದೆ. ಇದರಿಂದಾಗಿ 150 ತಾಲೂಕುಗಳಲ್ಲಿ ಹೆಚ್ಚು ಬರ ಆವರಿಸಿದೆ.

    ಹಿಂಗಾರು ಕುಂಠಿತ
    ರಾಜ್ಯದಲ್ಲಿ 2023ರ ಡಿ.31ಕ್ಕೆ ಹಿಂಗಾರು ಮುಗಿದಿದೆ. ಮುಂಗಾರು ಮಳೆ ಕೊರತೆ ಅನುಭವಿಸಿದ್ದ ರಾಜ್ಯದಲ್ಲಿ ಹಿಂಗಾರು ಮಳೆಯಾದರೂ ಉತ್ತಮವಾಗಿ ಸುರಿಯಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಇದೂ ಕೈಕೊಟ್ಟಿತ್ತು. ಅ.1ರಿಂದ ಡಿ.31ರವರೆಗೆ 181 ಮಿ.ಮೀ. ಮಳೆಗೆ ಬದಲಾಗಿ 114 ಮಿ.ಮೀ. ಸುರಿದಿದ್ದು (ಶೇ.38 ಕೊರತೆ) ಬಹುತೇಕ ಜಿಲ್ಲೆಗಳಲ್ಲಿ ಕೊರತೆಯಾಗಿತ್ತು. 97 ಜಿಲ್ಲೆಗಳಲ್ಲಿ ತೀವ್ರ ಮಳೆ ಅಭಾವ ಎದುರಾಯಿತು. ವಾತಾವರಣದಲ್ಲಿ ತೇವಾಂಶ ಕೊರತೆಯಿಂದ ಚಳಿಯ ತೀವ್ರತೆಯೂ ಕಂಡುಬಂದಿಲ್ಲ. ಉತ್ತರದಿಂದ ದಕ್ಷಿಣದತ್ತ ಗಾಳಿ ಬೀಸುತ್ತಿರುವ ಪರಿಣಾಮ ಉತ್ತರ ಕರ್ನಾಟಕದ ಕೆಲ ಭಾಗಗಳಲ್ಲಿ ಸ್ವಲ್ಪ ಮಟ್ಟಿಗೆ ಚಳಿ ಕಾಣಿಸಿಕೊಂಡಿದೆ.

    ನಗರ-ಗ್ರಾಮೀಣರೆಂಬ ವಿಭಜನೆ ಹುನ್ನಾರ: ಕೆಪಿಸಿಸಿ ಮುಖಂಡ ಮುರಳಿಧರ್ ಹಾಲಪ್ಪ ಆಕ್ರೋಶ

    ಜ.3ರಿಂದ ಸಾಧಾರಣ ಮಳೆ
    ರಾಜ್ಯದಲ್ಲಿ ಜ.3ರಿಂದ ನಾಲ್ಕು ದಿನ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಬೆಂಗಳೂರು, ಬೆಂ. ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ, ಹಾಸನ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗದಲ್ಲಿ ಜ.3ರಿಂದ ಜ.7ರವರೆಗೆ ಹಾಗೂ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಳಗಾವಿ, ಬೀದರ್, ಬಾಗಲಕೋಟೆ, ಹಾವೇರಿಯಲ್ಲಿ ಜ.5ರಿಂದ ಮುಂದಿನ ಎರಡು ದಿನ ಹಗುರದಿಂದ ಕೂಡಿದ ಸಾಧಾರಣ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts