More

    ನಗರ-ಗ್ರಾಮೀಣರೆಂಬ ವಿಭಜನೆ ಹುನ್ನಾರ: ಕೆಪಿಸಿಸಿ ಮುಖಂಡ ಮುರಳಿಧರ್ ಹಾಲಪ್ಪ ಆಕ್ರೋಶ

    ಬೆಂಗಳೂರು: ಕುಂಚಿಟಿಗ ಸಮುದಾಯಕ್ಕೆ ಕೇಂದ್ರದ ಒಬಿಸಿ ಮೀಸಲಾತಿ ಪಡೆಯಲು ಎಲ್ಲರೂ ಒಟ್ಟಾಗಿ ಹೋರಾಟ ಮಾಡುವ ಅಗತ್ಯವಿದೆ ಎಂದು ರಾಜ್ಯ ಕೌಶಲಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಹಾಗೂ ಕೆಪಿಸಿಸಿ ಮುಖಂಡ ಮುರಳೀಧರ ಹಾಲಪ್ಪ ಸಲಹೆ ನೀಡಿದ್ದಾರೆ.

    ವಿಶ್ವ ಕುಂಚಿಟಿಗರ ಪರಿಷತ್ತು ಬಸವನಗುಡಿಯಲ್ಲಿ ಭಾನುವಾರ ಆಯೋಜಿಸಲಾಗಿದ್ದ ‘ರಾಜ್ಯ ಹಾಗೂ ಕೇಂದ್ರದಲ್ಲಿ ಮೀಸಲಾತಿ ಹಕ್ಕೊತ್ತಾಯ’ ಒಳಗೊಂಡ ಕುಂಚಿಟಿಗರ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.ಪ್ರೀತಿ, ವಿಶ್ವಾಸ, ನಂಬಿಕೆಗೆ ಮತ್ತೊಂದು ಹೆಸರೇ ಕುಂಚಿಟಿಗರು. ಸಹೃದಯಿ, ಸ್ವಾಭಿಮಾನಿಗಳಾದ ಸಮುದಾಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬಡವರು, ಹಿಂದುಳಿದವರು, ಅನಕ್ಷರಸ್ಥರರಿದ್ದಾರೆ. ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂದೆ ಬರಬೇಕಿದೆ. ಹೀಗಿರುವಾಗ, ಕೆಲವರು ಸಮುದಾಯದಲ್ಲಿ ಒಡಕು ಮೂಡಿಸುವ ಕೆಲಸ ಮಾಡುತ್ತಿದ್ದು, ಈ ಬಗ್ಗೆ ನಾವೆಲ್ಲರೂ ಎಚ್ಚರಿಕೆ ವಹಿಸಬೇಕು ಎಂದರು.

    ಸಮುದಾಯದ ಜನರು ಗ್ರಾಮೀಣ ಪ್ರದೇಶದಲ್ಲೇ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಕೆಲವರು ಮಾತ್ರ ನಗರಪ್ರದೇಶಗಳಿದ್ದಾರೆ. ಉದ್ಯೋಗಕ್ಕಾಗಿ, ಸಣ್ಣ ವ್ಯಾಪಾರಕ್ಕಾಗಿ ಹಾಗೂ ವಿದ್ಯಾಭ್ಯಾಸಕ್ಕಾಗಿ ನಗರ ಪ್ರದೇಶಗಳಿಗೆ ತೆರಳಿದರೆ ಇವರೆಲ್ಲರೂ ನಗರವಾಸಿಗಳೆಂದು ಹಣಪಟ್ಟಿ ಕಟ್ಟಲು ಕೆಲವರು ಷಡ್ಯಂತ್ರ ರೂಪಿಸುತ್ತಿದ್ದಾರೆ. ನ್ಯಾಯಯುತ ಮೀಸಲಾತಿ ಪಡೆಯಲು ಇನ್ನಷ್ಟು ಹೋರಾಟ ಮಾಡಬೇಕಿದೆ ಎಂದು ಮುರಳಿಧರ್ ಹಾಲಪ್ಪ ತಿಳಿಸಿದರು. ಇದೇ ವೇಳೆ ಸಮುದಾಯದ ಸಾಧಕರಿಗೆ ಕುಂಚಿಟಿಗ ರತ್ನ, ಕುಂಚಶ್ರೀ, ಕುಂಚಿಟಿಗ ಶಿರೋಮಣಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಾಜ್ಯ ಕುಂಚಿಟಿಗರ ಒಕ್ಕೂಟ ಅಧ್ಯಕ್ಷ ಕಸವನಹಳ್ಳಿ ರಮೇಶ್, ಹಿರಿಯ ರಾಜಕಾರಣಿ ತುಂಗೋಟಿ ರಾಮಣ್ಣ, ಹನುಮಂತಯ್ಯ ಮತ್ತಿತರರಿದ್ದರು.

    ಹೊಸ ವರ್ಷಕ್ಕೆ ಮದ್ಯ ಕಿಕ್: ಎರಡು ದಿನದಲ್ಲಿ 6.40 ಲಕ್ಷ ಬಾಕ್ಸ್ ಐಎಂಎಲ್ ಸೇಲ್

    ಸಮುದಾಯದ ಕುಲಕಸುಬು, ವಾಸ, ಪದ್ಧತಿ, ಸಂಪ್ರದಾಯ ಸೇರಿ ಎಲ್ಲವನ್ನೂ ಕುಂಚಿಟಿಗ ಕುಲಶಾಸೀಯ ಅಧ್ಯಯನ ಮತ್ತು ಸಂಶೋಧನೆ ನಡೆಸಿದ್ದ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಇದರಲ್ಲಿ ನಗರ ಮತ್ತು ಗ್ರಾಮೀಣ ಎಂದು ವಿಭಜಿಸಲಾಗುತ್ತಿದೆ. ಇದರಿಂದಾಗಿ ಸಮುದಾಯದ ಒಟ್ಟು ಜನಸಂಖ್ಯೆಯ ಮುಕ್ಕಾಲು ಜನರಿಗೆ ಅನ್ಯಾಯವಾಗಲಿದ್ದು, ಈ ಬಗ್ಗೆ ಗಟ್ಟಿ ಧ್ವನಿ ಎತ್ತಬೇಕು.
    -ಮುರಳೀಧರ ಹಾಲಪ್ಪ, ಕೆಪಿಸಿಸಿ ಮುಖಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts