More

    ಭಾರತದಲ್ಲೇ ನಡೆಯಲಿದೆ 2021ರ ಐಪಿಎಲ್, ಐದೇ ತಿಂಗಳ ಅಂತರದಲ್ಲಿ ಮತ್ತೆ ಟಿ20 ಹಬ್ಬ!

    ನವದೆಹಲಿ: ಮುಂದಿನ ವರ್ಷದ ಐಪಿಎಲ್ ಟೂರ್ನಿ ಏಪ್ರಿಲ್‌ನಿಂದ ಭಾರತದಲ್ಲೇ ನಡೆಯಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ಅಲ್ಲದೆ 2021ರ ಐಪಿಎಲ್ ಟೂರ್ನಿಗೆ ಪೂರ್ವಭಾವಿಯಾಗ ಭಾರತ ತಂಡ ಫೆಬ್ರವರಿಯಿಂದ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಪೂರ್ಣಪ್ರಮಾಣದ ಸರಣಿಯನ್ನು ಆಡಲಿದೆ ಎಂದೂ ಗಂಗೂಲಿ ತಿಳಿಸಿದ್ದಾರೆ.

    ಈ ವರ್ಷದ ಐಪಿಎಲ್ ಟೂರ್ನಿ ನವೆಂಬರ್ 10ರಂದು ಯುಎಇಯಲ್ಲಿ ಮುಕ್ತಾಯಗೊಂಡ ಐದೇ ತಿಂಗಳಲ್ಲಿ ಮತ್ತೊಂದು ಐಪಿಎಲ್ ಟೂರ್ನಿ ಆಯೋಜನೆಯಾಗಲಿದೆ ಎಂದೂ ಗಂಗೂಲಿ ಮಾಹಿತಿ ನೀಡಿದ್ದಾರೆ. ಅಲ್ಲದೆ 2021ರ ಟಿ20 ವಿಶ್ವಕಪ್ ಮತ್ತು 2023ರ ಏಕದಿನ ವಿಶ್ವಕಪ್ ಆಯೋಜನೆಗೂ ಭಾರತ ಸನ್ನದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.

    ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡ ಮುಂದಿನ ವರ್ಷ ಅಲ್ಲಿಂದ ಮರಳಿದ ಬಳಿಕ ಫೆಬ್ರವರಿಯಿಂದ ಟೆಸ್ಟ್, ಏಕದಿನ, ಟಿ20 ಸರಣಿಗಳನ್ನು ಆಡಲಿದೆ. ಭಾರತ ಮಹಿಳಾ ಕ್ರಿಕೆಟ್ ತಂಡದ ಪ್ರವಾಸಗಳ ಬಗ್ಗೆಯೂ ಚರ್ಚೆ ನಡೆಯುತ್ತಿದೆ ಎಂದು ಗಂಗೂಲಿ ತಿಳಿಸಿದ್ದಾರೆ.

    ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್‌ನಲ್ಲಿ 600 ವಿಕೆಟ್ ಸಾಧನೆ ಸನಿಹ ಜೇಮ್ಸ್ ಆಂಡರ್‌ಸನ್

    ಪರಿಸ್ಥಿತಿ ಅವಕಾಶ ಮಾಡಿಕೊಟ್ಟಾಗ ದೇಶೀಯ ಕ್ರಿಕೆಟ್
    ಕರೊನಾ ವೈರಸ್ ಹಾವಳಿ ನಿಯಂತ್ರಣಕ್ಕೆ ಬಂದು ಪರಿಸ್ಥಿತಿ ಅವಕಾಶ ಮಾಡಿಕೊಟ್ಟಾಗ ದೇಶೀಯ ಕ್ರಿಕೆಟ್ ಋತು ಆರಂಭಗೊಳ್ಳಲಿದೆ ಎಂದೂ ಗಂಗೂಲಿ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಭರವಸೆ ನೀಡಿದ್ದಾರೆ. ದೇಶೀಯ ಕ್ರಿಕೆಟ್ ಬಿಸಿಸಿಐನ ಅಗ್ರ ಆದ್ಯತೆಯಾಗಿದ್ದು, ಎಲ್ಲ ಆಯಾಮಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದಿದ್ದಾರೆ. ಸಾಮಾನ್ಯವಾಗಿ ಆಗಸ್ಟ್‌ನಲ್ಲಿ ಆರಂಭವಾಗುತ್ತಿದ್ದ ದೇಶೀಯ ಕ್ರಿಕೆಟ್ ಋತು ಈ ಬಾರಿ ನವೆಂಬರ್ 3ನೇ ವಾರದಲ್ಲಿ ಸಯ್ಯದ್ ಮುಸ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯ ಮೂಲಕ ಆರಂಭಗೊಳ್ಳುವ ನಿರೀಕ್ಷೆ ಇಡಲಾಗಿದೆ.

    ಅರ್ಜುನ ಪ್ರಶಸ್ತಿ ಪಡೆಯಲು ಯಾವ ಪದಕ ಗೆಲ್ಲಬೇಕು, ಪ್ರಧಾನಿಗೆ ಸಾಕ್ಷಿ ಮಲಿಕ್ ಪ್ರಶ್ನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts