More

    2019ರ ಪುಲ್ವಾಮಾ ದಾಳಿಯ ಇನ್ನೋರ್ವ ಆರೋಪಿಯನ್ನು ಬಂಧಿಸಿದ ಎನ್​ಐಎ

    ಶ್ರೀನಗರ: 2019ರ ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ಸಿಆರ್​ಪಿಎಫ್​ ಯೋಧರ ಮೇಲೆ ನಡೆದ ದಾಳಿಯ ಮತ್ತೋರ್ವ ಪ್ರಮುಖ ಆರೋಪಿಯನ್ನು ಇಂದು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬಂಧಿಸಿದ್ದಾರೆ.
    ಅಂದು ಪುಲ್ವಾಮಾದಲ್ಲಿ ಜೈಷ್​ ಎ ಮೊಹಮ್ಮದ್​ ಉಗ್ರ ಸಂಘಟನೆ ನಡೆಸಿದ್ದ ಐಇಡಿ ದಾಳಿಯಲ್ಲಿ ಸಿಆರ್​ಪಿಎಫ್​ನ 40 ಯೋಧರು ಹುತಾತ್ಮರಾಗಿದ್ದರು.

    ಈ ದಾಳಿಗೆ ಸಂಬಂಧಪಟ್ಟಂತೆ ಇದುವರೆಗೆ ಒಟ್ಟು ಐವರು ಆರೋಪಿಗಳನ್ನು ಬಂಧಿಸಲಾಗಿತ್ತು. ಇದೀಗ ದಾಳಿಯ ಪ್ರಮುಖ ಸಂಚುಕೋರ ಮೊಹಮದ್​ ಉಮರ್ ಫಾರೂಕ್​ಗೆ ಸಹಾಯ ಮಾಡಿದ ಆರೋಪದಡಿ ಆರನೇ ಆರೋಪಿ ಮೊಹಮದ್​ ಇಕ್ಬಾಲ್​ ರಾಥರ್​ (25)ಎಂಬಾತನನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿದೆ. ​

    ಈತ ಜಮ್ಮುಕಾಶ್ಮೀರದ ಬುಡ್ಗಮ್​​ನ ಚರಾರ್​-ಎ-ಶರೀಫ್​ನಲ್ಲಿರುವ ಫುಟ್ಲಿಪುರ ನಿವಾಸಿಯಾಗಿದ್ದು, ಪುಲ್ವಾಮಾ ದಾಳಿಯಲ್ಲಿ ಈತನ ಪಾತ್ರವೂ ಇರುವುದು ಸಾಬೀತಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರಿದ ಕರೊನಾ ‘ಸಾವಿರ’ದ ಓಟ; ಡಿಸ್​ಚಾರ್ಜ್​ ಆಗುತ್ತಿರುವವರ ಸಂಖ್ಯೆ ಕಡಿಮೆ

    ಈತ ಜೈಷ್​ ಎ ಮೊಹಮ್ಮದ್​ ಉಗ್ರಸಂಘಟನೆಯ ಇನ್ನೊಂದು ದಾಳಿಗೆ ಸಂಬಂಧಪಟ್ಟ ಪ್ರಕರಣದಡಿ 2018ರ ಸೆಪ್ಟೆಂಬರ್​ನಿಂದಲೂ ನ್ಯಾಯಾಂಗ ಬಂಧನದಲ್ಲಿಯೇ ಇದ್ದ. ಜೈಲು ಅಧಿಕಾರಿಗಳು ಅವನನ್ನು ಎನ್​ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್​ ಏಳು ದಿನಗಳ ಕಾಲ ಆತನನ್ನು ಎನ್​ಐಎ ಕಸ್ಟಡಿಗೆ ನೀಡಿದೆ. (ಏಜೆನ್ಸೀಸ್)

    ಅನ್​ಲಾಕ್​-2ಹಂತದಲ್ಲಿ ಪ್ರವಾಸೋದ್ಯಮಕ್ಕೆ ಒತ್ತು; ಜು.6ರಿಂದ ಐತಿಹಾಸಿಕ ಸ್ಮಾರಕ ತಾಣಗಳು ಓಪನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts