More

    ಕಿರಿಯರ ವಿಶ್ವಕಪ್ ವಿಜೇತ ನಾಯಕ ಉನ್ಮುಕ್ತ್ ಚಂದ್ 28ನೇ ವಯಸ್ಸಲ್ಲೇ ನಿವೃತ್ತಿ

    ಮುಂಬೈ: 2012ರ 19 ವಯೋಮಿತಿ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಉನ್ಮುಕ್ತ್ ಚಂದ್, 28ನೇ ವಯಸ್ಸಿನಲ್ಲೇ ಭಾರತೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದರು. ಜೂನಿಯರ್ ಹಂತದಲ್ಲಿ ಉತ್ತಮ ಹೆಸರು ಮಾಡಿದ್ದ ದೆಹಲಿಯ ಬ್ಯಾಟ್ಸ್‌ಮನ್ ಉನ್ಮುಕ್ತ್ ಚಂದ್, ಸೀನಿಯರ್ ಮಟ್ಟದಲ್ಲಿ ಅದೇ ಲಯ ಉಳಿಸಿಕೊಳ್ಳಲು ವಿಫಲರಾಗಿದ್ದರು. ವಿರಾಟ್ ಕೊಹ್ಲಿ 2008ರಲ್ಲಿ ಕಿರಿಯರ ವಿಶ್ವಕಪ್ ಗೆಲ್ಲಿಸಿಕೊಟ್ಟ ಬೆನ್ನಲ್ಲೇ ಟೀಮ್ ಇಂಡಿಯಾ ಪ್ರವೇಶಿಸಿದಂತೆ ಉನ್ಮುಕ್ತ್ ಚಂದ್ ಕೂಡ ಅದೇ ದಾರಿಯಲ್ಲಿ ಸಾಗುತ್ತಾರೆ ಎಂಬ ಬಗ್ಗೆ ಅಪಾರ ನಿರೀಕ್ಷೆಗಳಿದ್ದವು. ಆದರೆ, ದೇಶೀಯ ಕ್ರಿಕೆಟ್ ಮತ್ತು ಐಪಿಎಲ್‌ನಲ್ಲಿ ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳದ ಉನ್ಮುಕ್ತ್ ನಿರಾಸೆ ಮೂಡಿಸಿದ್ದರು. ಅವರು ಇನ್ನು ಅಮೆರಿಕಕ್ಕೆ ವಲಸೆ ಹೋಗಿ ಅಲ್ಲಿನ ಟಿ20 ಲೀಗ್‌ನಲ್ಲಿ ಆಡುವ ಸಾಧ್ಯತೆಗಳಿವೆ. ಕಿರಿಯರ ತಂಡದಲ್ಲಿ ಉನ್ಮುಕ್ತ್ ಸಹ ಆಟಗಾರನಾಗಿದ್ದ ಸಮಿತ್ ಪಟೇಲ್ ಈಗಾಗಲೆ ಅಮೆರಿಕ ಟಿ20 ಲೀಗ್ ಆಡುತ್ತಿದ್ದಾರೆ.

    ಇದನ್ನೂ ಓದಿ: ಯುಎಇಗೆ ತೆರಳಿದ ಮುಂಬೈ ಇಂಡಿಯನ್ಸ್ , ಸಿಎಸ್‌ಕೆ ತಂಡದ ಆಟಗಾರರು,

    ಭಾರತೀಯರು ನಿವೃತ್ತಿಯಾದ ಬಳಿಕವಷ್ಟೇ ವಿದೇಶಿ ಲೀಗ್‌ಗಳಲ್ಲಿ ಆಡುವ ಅವಕಾಶವಿದೆ. ಹೀಗಾಗಿಯೇ ಉನ್ಮುಕ್ತ್ ಭಾರತೀಯ ಕ್ರಿಕೆಟ್‌ಗಷ್ಟೇ ಗುಡ್‌ಬೈ ಹೇಳುತ್ತಿದ್ದು, ಕ್ರಿಕೆಟ್‌ನಿಂದ ಸಂಪೂರ್ಣ ದೂರವಾಗುತ್ತಿಲ್ಲ. ‘ಕೆಲ ವರ್ಷಗಳಿಂದ ನನ್ನ ಯೋಜನೆಗಳು ಕೈಗೂಡಲಿಲ್ಲ. ಹಲವು ಸುಂದರ ನೆನಪುಗಳೊಂದಿಗೆ ಬಿಸಿಸಿಐಗೆ ವಿದಾಯ ಹೇಳಲು ಬಯಸುತ್ತೇನೆ. ವಿದೇಶದಲ್ಲಿ ಉತ್ತಮ ಅವಕಾಶಗಳ ನಿರೀಕ್ಷೆಯಲ್ಲಿರುವೆ’ ಎಂದು ಉನ್ಮುಕ್ತ್ ಚಂದ್ ಟ್ವೀಟ್ ಮಾಡಿದ್ದಾರೆ.

    ಇದನ್ನೂ ಓದಿ: VIDEO: ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಂನಲ್ಲಿ ರಾಹುಲ್ ಶತಕದ ಸಂಭ್ರಮ ಹೇಗಿತ್ತು ಗೊತ್ತ?, 

    2012ರಲ್ಲಿ ಕಿರಿಯರ ವಿಶ್ವಕಪ್ ಜಯಿಸಿದ ಬೆನ್ನಲ್ಲೇ ಚಂದ್ ಮನೆಮಾತಾಗಿದ್ದರು. ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಅಜೇಯ 111 ರನ್ ಬಾರಿಸುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ದೆಹಲಿ ತಂಡದಲ್ಲಿ ಕೆಲ ವರ್ಷ ಆಡಿದ ಬಳಿಕ ಉತ್ತರಾಖಂಡ ತಂಡಕ್ಕೆ ನಾಯಕರಾಗಿದ್ದರು. ಇದೇ ವೇಳೆ ಭಾರತ ಎ ತಂಡದ ಪರ ಆಡಿದ್ದರು. ಉನ್ಮುಕ್ತ್ 67 ಪ್ರಥಮ ದರ್ಜೆ ಪಂದ್ಯಗಳಿಂದ 8 ಶತಕ, 16 ಅರ್ಧಶತಕ ಸೇರಿದಂತೆ 3,379 ರನ್ ಬಾರಿಸಿದ್ದಾರೆ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್, ಡೆಲ್ಲಿ ತಂಡಗಳ ಭಾಗವಾಗಿದ್ದರೂ, ಹೆಚ್ಚಿನ ಅವಕಾಶ ಲಭಿಸಿರಲಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts