More

    ನಾಲ್ಕೂವರೆ ತಿಂಗಳಲ್ಲಿ ಇಂದು ಅತ್ಯಧಿಕ ಸೋಂಕು!; ಮಂಗಳವಾರವೊಂದೇ ದಿನ ರಾಜ್ಯದಲ್ಲಿ 2,010 ಕರೊನಾ ಪ್ರಕರಣಗಳು

    ಬೆಂಗಳೂರು: ಕೋವಿಡ್ ಪ್ರಕರಣಗಳ ಸಂಖ್ಯೆ ಮಂಗಳವಾರ ಮತ್ತಷ್ಟು ಏರಿಕೆ ಕಂಡಿದ್ದು, 2,010 ಪ್ರಕರಣಗಳು ವರದಿಯಾಗಿವೆ. ಕಳೆದ ನಾಲ್ಕೂವರೆ ತಿಂಗಳಿನಲ್ಲಿ ವರದಿಯಾಗಿರುವ ಅತಿ ಹೆಚ್ಚು ಸೋಂಕು ಪ್ರಕರಣಗಳು ಇವಾಗಿವೆ. ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 15,595ಕ್ಕೆ ಏರಿಕೆಯಾಗಿದೆ.

    ಕಳೆದ 7 ದಿನಗಳ ಅವಧಿಯಲ್ಲಿ 11,318 ಮಂದಿಯಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ಈ ಅವಧಿಯಲ್ಲಿ ಪ್ರತಿನಿತ್ಯ ಸರಾಸರಿ 1,617 ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಈವರೆಗೆ ಸೋಂಕಿಗೆ ಒಳಗಾದವರ ಸಂಖ್ಯೆ 9.73 ಲಕ್ಷ ದಾಟಿದೆ. ಸೋಂಕಿತರಲ್ಲಿ ಬೆಂಗಳೂರಿನಲ್ಲಿ ಮೂವರು ಹಾಗೂ ಹಾಸನ ಮತ್ತು ಕಲಬುರಗಿಯಲ್ಲಿ ತಲಾ ಒಬ್ಬರು ಸೇರಿ ಐವರು ಸಾವಿಗೀಡಾಗಿದ್ದು, ಮೃತರ ಸಂಖ್ಯೆ 12,449ಕ್ಕೆ ತಲುಪಿದೆ. ಸೋಂಕಿತರಲ್ಲಿ 677 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಗುಣಮುಖರ ಸಂಖ್ಯೆ 9.45 ಲಕ್ಷ ಮೀರಿದೆ. ಸೋಂಕಿತರಲ್ಲಿ 136 ಮಂದಿ ಗಂಭೀರ ಸಮಸ್ಯೆಯಿಂದ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಬೆಂಗಳೂರಿನಲ್ಲಿ 1,280 ಹೊಸ ಸೋಂಕು ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 4.19 ಲಕ್ಷ ದಾಟಿದೆ. ಕಲಬುರಗಿ 129, ಮೈಸೂರು 100, ಬೀದರ್ 76, ದಕ್ಷಿಣ ಕನ್ನಡ 74, ತುಮಕೂರು 40, ಬಳ್ಳಾರಿ39, ಬೆಂಗಳೂರು ಗ್ರಾಮಾಂತರ 36, ಉಡುಪಿ 28, ಹಾಸನ 24, ಶಿವಮೊಗ್ಗ 23, ಕೊಡಗು 19, ಬೆಳಗಾವಿ 16 ಹೊಸ ಪ್ರಕರಣಗಳು ವರದಿಯಾಗಿವೆ.

    ನೀವು ಸಿಎಂ ಆಗೋದಾದ್ರೆ ಜೆಡಿಎಸ್‌ ಶಾಸಕರೆಲ್ಲ ಜೈ ಅಂತೀವಿ: ಶಾಸಕ ಎಚ್‌.ಡಿ. ರೇವಣ್ಣ ಕೊಟ್ರು ಆಫರ್‌

    ಕಳ್ಳನ ಲವರ್‌ಗೂ ಚಿನ್ನದ ವ್ಯಾಪಾರಿಯ ಲವರ್‌ಗೂ ಇತ್ತು ಪರಿಚಯ; ಆಕೆ ಕೊಟ್ಟ ಮಾಹಿತಿ ಮೇರೆಗೆ ಚಿನ್ನ ದೋಚಿದ್ದ ಮೂವರ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts