More

    ಬೇಲಿ ಹಾರಿ ರಸ್ತೆಗೆ ಬಂದ ಮೇಕೆಗಳು… ಮುಂದೇನಾಯಿತು?

    ನವದೆಹಲಿ: ನೂರಾರು ಮೇಕೆಗಳು ಒಮ್ಮಿಂದೊಮ್ಮೆಲೇ ರಸ್ತೆಗಿಳಿದಿದ್ದವು. ಲಾಕ್​ಡೌನ್​ ವೇಳೆ, ದೈಹಿಕ ಅಂತರವನ್ನೂ ಕಾಯ್ದುಕೊಳ್ಳದೆ ರಸ್ತೆಗಿಳಿದಿದ್ದರೂ ಶಿಸ್ತುಬದ್ಧವಾಗಿ ನಡೆಯುತ್ತಾ, ಅಲ್ಲಲ್ಲಿ ಕಾಣುತ್ತಿದ್ದ ಹಸಿರನ್ನು ತಿನ್ನುತ್ತಾ ಮುಂದೆ ಸಾಗುತ್ತಿದ್ದವು.

    ಇದು ಭಾರತದಲ್ಲಿ ಕಂಡು ಬಂದ ದೃಶ್ಯವಲ್ಲ. ಬದಲಿಗೆ ಅಮೆರಿಕದ ಕ್ಯಾಲಿಫೋರ್ನಿಯಾದ ಬಡಾವಣೆಯಲ್ಲಿ ಕಂಡಬಂದ ದೃಶ್ಯ. ಈ ಇದನ್ನು ಮೊಬೈಲ್​ನಲ್ಲಿ ವಿಡಿಯೋ ಮಾಡಿಕೊಂಡಿರುವ ಝಾಕ್​ ಎಂಬುವರು ಸಾಮಾಜಿಕ ಜಾಲತಾಣದಲ್ಲಿ ಮಂಗಳವಾರ ಹರಿಬಿಟ್ಟಿದ್ದು, ಭಾರಿ ವೈರಲ್​ ಆಗಿದೆ.

    ಕ್ಯಾಲಿಫೋರ್ನಿಯಾದ ಸುತ್ತಮುತ್ತ ಹೊಲಗದ್ದೆಗಳು ಹಾಗೂ ಕಾಡು ಇದೆ. ಕಾಡ್ಗಿಚ್ಚು ಹರಡದಂತೆ ತಡೆಯಲು ಕಾಡಿನ ತುದಿ ಹಾಗೂ ಹೊಲಗದ್ದೆಗಳ ಅಂಚಿನಲ್ಲಿ ಬೆಳೆದಿರುವ ಹುಲ್ಲನ್ನು ತಿನ್ನಿಸಲು ಕುರಿ-ಮೇಕೆಗಳನ್ನು ಬಳಸಲಾಗುತ್ತದೆ. ಇದಕ್ಕಾಗಿ ಆ ಪ್ರದೇಶದಲ್ಲಿ ಸಾಕಷ್ಟು ಜನರು ಕುರಿ-ಮೇಕೆಗಳನ್ನು ಸಾಕಿಕೊಂಡಿದ್ದಾರೆ. ಅವರ ಪೈಕಿ ಒಬ್ಬ ಕುರಿಗಾಹಿ, ತನ್ನ ಕುರಿಗಳನ್ನು ಮಂಗಳವಾರ ಮೇಯಲು ಬಿಟ್ಟಿದ್ದ.

    ಬೇಲಿ ಹಾರಿ ರಸ್ತೆಗೆ ಬಂದ ಮೇಕೆಗಳು... ಮುಂದೇನಾಯಿತು?

    ಇದನ್ನೂ ಓದಿ: 700 ಕಿ.ಮೀ. ದೂರದ ಸ್ವಗ್ರಾಮಕ್ಕೆ ಗರ್ಭಿಣಿ ಪತ್ನಿ, ಮಗಳ ಹೊತ್ತು ಸಾಗಿದ್ದೇ ರೋಚಕ ಕಥೆ!

    ಆದರೆ ಅದೇಗೋ ಒಂದು ಕುರಿ ಬೇಲಿ ಹಾರಿ ಹೊರಹೋಗುವಲ್ಲಿ ಯಶಸ್ವಿಯಾಯಿತು. ಇದನ್ನು ಕಂಡ ಇತರೆ ಕುರಿಗಳು ಕೂಡ ಪೈಪೋಟಿ ಮೇಲೆ ಬೇಲಿ ಹಾರಿ ಹೊರಬಂದವು. ಹೀಗೆ ಹೊರಬಂದ 200ಕ್ಕೂ ಹೆಚ್ಚು ಕುರಿಗಳು ರಸ್ತೆಯ ಅಕ್ಕಪಕ್ಕದಲ್ಲಿದ್ದ ಕೈತೋಟದ ಮೇಲೆ ದಾಳಿ ಮಾಡಿ, ಧ್ವಂಸಗೊಳಿಸಿದವು.

    ಇದನ್ನು ಕಂಡ ಝಾಕ್​ ಎಂಬುವರು ತಮ್ಮ ಮೊಬೈಲ್​ನಲ್ಲಿ ಈ ದೃಶ್ಯವನ್ನು ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಲಾಕ್​ಡೌನ್​ ಇದ್ದುದರಿಂದ ಅಗತ್ಯ ವಸ್ತುಗಳ ಖರೀದಿಗಾಗಿ ಅಂಗಡಿ ಹೋಗಿದ್ದು, ಮನೆಗೆ ಮರಳುತ್ತಿದ್ದೆ. ಆಗ 200ಕ್ಕೂ ಹೆಚ್ಚು ಕುರಿಗಳು ರಸ್ತೆ ಮೇಲೆ ದಾಳಿ ಮಾಡಿರುವುದು ಕಾಣಿಸಿತು. ತಕ್ಷಣವೇ ಅದನ್ನು ವಿಡಿಯೋ ಮಾಡಿಕೊಂಡೆ ಎಂದು ಹೇಳಿಕೊಂಡಿದ್ದಾನೆ.

    ತನ್ನ ಕುರಿ-ಮೇಕೆಗಳು ಬೇಲಿ ಹಾರಿದ್ದು ಗೊತ್ತಾಗಿ ತಕ್ಷಣವೇ ಬಂದ ಕುರಿಗಾಹಿ, ತನ್ನೆಲ್ಲ ಕುರಿಗಳನ್ನು ಹಿಡಿದುಕೊಂಡು ಕೊಟ್ಟಿಗೆಗೆ ಸಾಗಿಸುವಲ್ಲಿ ಯಶಸ್ವಿಯಾದ ಎನ್ನಲಾಗಿದೆ.

    ಕಡ್ಡಾಯ ಕ್ವಾರಂಟೈನ್​ಗೆ ಹೋಗಲು ನಿರಾಕರಣೆ; ಬೆಂಗಳೂರು ರೈಲು ನಿಲ್ದಾಣದಲ್ಲಿ ಪ್ರತಿಭಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts