More

    200 ವಿದ್ಯಾರ್ಥಿಗಳಿಗೆ ಉದ್ಯೋಗ ಭಾಗ್ಯ

    ಕಲಬುರಗಿ: ಇಲ್ಲಿನ ಶರಣಬಸವ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಮೆಗಾ ಉದ್ಯೋಗ ಮೇಳದಲ್ಲಿ ಸುಮಾರು 200 ಉದ್ಯೋಗ ಆಕಾಂಕ್ಷಿಗಳಿಗೆ ಉದ್ಯೋಗ ಭಾಗ್ಯ ಲಭಿಸಿತು.
    ನಗರದ ಶರಣಬಸವ ವಿಶ್ವವಿದ್ಯಾಲಯ ಸೇರಿ ಪದವಿಪೂರ್ವ ಮತ್ತು ಸ್ನಾತಕೋತ್ತರ, ಗುಲ್ಬರ್ಗ ವಿಶ್ವವಿದ್ಯಾಲಯ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ಇತರ ಖಾಸಗಿ ವಿಶ್ವವಿದ್ಯಾಲಯ ಮತ್ತು ಶಿಕ್ಷಣ ಸಂಸ್ಥೆಗಳು ವಿದ್ಯಾಥರ್ಿಗಳು ಮೇಳದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.
    ಮಂಗಳವಾರ ಆಯೋಜಿಸಿದ್ದ ಒಂದು ದಿನದ ಉದ್ಯೋಗ ಮೇಳದಲ್ಲಿ 30 ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಮತ್ತು ಕೈಗಾರಿಕೆಗಳು ಭಾಗವಹಿಸಿದ್ದವು ಮತ್ತು ಉದ್ಯೋಗ ಮೇಳದಲ್ಲಿ ಭಾಗವಹಿಸಿದ ಶರಣಬಸವ ವಿಶ್ವವಿದ್ಯಾಲಯ ಮತ್ತು ಇತರ ಸಂಸ್ಥೆಗಳ 1500 ಕ್ಕೂ ಹೆಚ್ಚು ವಿದ್ಯಾಥರ್ಿಗಳಿಗೆ ವಿವಿಧ ಕಂಪನಿಗಳ ಪ್ರತಿನಿಧಿಗಳು ನಡೆಸಿದ ಆರಂಭಿಕ ಸಂದರ್ಶನಗಳಲ್ಲಿ ಒಟ್ಟು 366 ವಿದ್ಯಾಥರ್ಿಗಳ ಕಿರುಪಟ್ಟಿ ಮಾಡಲಾಯಿತು. ಅಂತಿಮವಾಗಿ 197 ವಿದ್ಯಾಥರ್ಿಗಳನ್ನು ವಿವಿಧ ಕಂಪನಿಗಳು ಮತ್ತು ಕೈಗಾರಿಕೆಗಳಲ್ಲಿ ಹುದ್ದೆಗಳಿಗೆ ಆಯ್ಕೆ ಮಾಡಲಾಯಿತು ಎಂದು ವಿಶ್ವವಿದ್ಯಾಲಯದ ಡೀನ್ ಡಾ.ಲಕ್ಷ್ಮಿ ಪಾಟೀಲ್ ಮಾಕಾ ತಿಳಿಸಿದರು.
    ಈ ಉದ್ಯೋಗ ಮೇಳದಲ್ಲಿ ಭಾಗವಹಿಸಿರುವ ಕೆಲವು ಕಂಪನಿಗಳು ತಮ್ಮ ಫಲಿತಾಂಶಗಳನ್ನು ತಡೆಹಿಡಿದಿರುವುದರಿಂದ ಮುಂದಿನ ಒಂದು ಅಥವಾ ಎರಡು ದಿನಗಳಲ್ಲಿ ಒಟ್ಟಾರೆ ಆಯ್ಕೆಯಾದ ವಿದ್ಯಾಥರ್ಿಗಳ ಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.
    ಕಾವರ್ಿ ಕಂಪನಿಯಲ್ಲಿ ಅತಿ ಹೆಚ್ಚು 33 ವಿದ್ಯಾಥರ್ಿಗಳನ್ನು ಆಯ್ಕೆ ಮಾಡಿದ್ದರೆ, ಉಳಿದ ಫ್ಯೂಚರ್ ಫೋಕಸ್ 27, ಯುರೇಕಾ ಫೋಬ್ಸರ್್ 26, ಆದಿತ್ಯ ಸಲ್ಯೂಸನ್ಸ್ಸ್ 16, ಟೀಮ್ ಲೀಸ್ 17, ಕೆಎಸ್ ಬೇಕಸರ್್ 11, ಶಂಡಿಡರ್ ಎಲೆಕ್ಟ್ರಿಕಲ್ಸ್ 3, ಇನ್ಫೋ ಸೋರ್ಸ್ ಕಾಪರ್ೊರೇಷನ್ 4, ಮತ್ತು ಐಸಿಸಿಎಸ್ 1 ವಿದ್ಯಾಥರ್ಿಗಳಿಗೆ ವಿವಿಧ ಹುದ್ದೆಗಳಿಗೆ ಆಯ್ಕೆ ಮಾಡಿರುತ್ತಾರೆ ಎಂದು ವಿವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts