More

    ತರಬೇತಿ ವಿಮಾನ ಪತನ: ಇಬ್ಬರು ಭಾರತೀಯ ಟ್ರೈನಿ ಪೈಲಟ್‌ಗಳು ಸೇರಿದಂತೆ ಮೂವರು ಸಾವು

    ನವದೆಹಲಿ: ತರಬೇತಿ ವಿಮಾನವೊಂದು ಕೆನಡಾದಲ್ಲಿ ಪತನವಾಗಿದ್ದು, ಇಬ್ಬರು ಭಾರತೀಯ ಟ್ರೈನಿ ಪೈಲಟ್‌ಗಳು ಸೇರಿದಂತೆ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.

    ಮುಂಬೈ ಮೂಲದ ಟ್ರೈನಿ ಪೈಲಟ್‌ಗಳಾದ ಅಭಯ್ ಗದ್ರು ಮತ್ತು ಆಶ್ ರಾಮುಗಡೆ ಅವರು ಶನಿವಾರ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಕೆನಡಾದಲ್ಲಿ ವಿಮಾನ ಅಪಘಾತ ಸಂಭವಿಸಿದೆ. ತರಬೇತಿ ವಿಮಾನ ಪತನಗೊಂಡು ಭಾರತದ ಇಬ್ಬರು ಟ್ರೈನಿ ಪೈಲಟ್‌ಗಳು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. 

    ಮೃತ ಪೈಲೆಟ್​ಗಳಿಬ್ಬರೂ ಮುಂಬೈ ನಿವಾಸಿಗಳಾಗಿದ್ದಾರೆ. ವಿಮಾನವು ಮರಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅದರ ನಂತರ, ಅಪಘಾತಕ್ಕೀಡಾದ ವಿಮಾನವು ಹೋಟೆಲ್ ಕಟ್ಟಡದ ಹಿಂದೆ ಪತನಗೊಂಡಿತು. ಈ ಅಪಘಾತದಲ್ಲಿ ಅಭಯ್ ಗದ್ರು ಮತ್ತು ಯಶ್ ವಿಜಯ್ ರಾಮುಗಡೆ ಎಂಬ ಇಬ್ಬರು ಭಾರತೀಯ ಟ್ರೈನಿ ಪೈಲಟ್‌ಗಳು ಪ್ರಾಣ ಕಳೆದುಕೊಂಡಿದ್ದಾರೆ. ಈ ಇಬ್ಬರೂ ಭಾರತೀಯರು ಮುಂಬೈ ನಿವಾಸಿಗಳು . ಸ್ಥಳೀಯ ಆಡಳಿತ ಸ್ಥಳಕ್ಕೆ ಧಾವಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದೆ.

    ಪೈಪರ್ ಪಿಎ -34 ವಿಮಾನವನ್ನು 1972 ರಲ್ಲಿ ತಯಾರಿಸಲಾಯಿತು ಮತ್ತು 2019 ರಲ್ಲಿ ನೋಂದಾಯಿಸಲಾಗಿದೆ. ಮೃತರ ಕುಟುಂಬದವರನ್ನು ಸಂಪರ್ಕಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಈ ಅಪಘಾತಕ್ಕೆ ಕಾರಣಗಳು ತಿಳಿದುಬಂದಿಲ್ಲ. ಅಪಘಾತದಲ್ಲಿ ಮತ್ತೊಬ್ಬ ಪೈಲಟ್ ಕೂಡ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆನಡಾದ ಸಾರಿಗೆ ಸುರಕ್ಷತಾ ಮಂಡಳಿಯು ಅಪಘಾತದ ಬಗ್ಗೆ ತನಿಖೆ ನಡೆಸುತ್ತಿದೆ.

    Success Story; ಟಾಯ್ಲೆಟ್ ಕ್ಲೀನ್ ಮಾಡಿದ್ದ ವ್ಯಕ್ತಿ ಈಗ ಚಿತ್ರವೊಂದಕ್ಕೆ 100 ಕೋಟಿ ರೂ. ಸಂಭಾವನೆ ಪಡೆಯುವ ಸೂಪರ್‌ಸ್ಟಾರ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts