More

    Success Story; ಟಾಯ್ಲೆಟ್ ಕ್ಲೀನ್ ಮಾಡಿದ್ದ ವ್ಯಕ್ತಿ ಈಗ ಚಿತ್ರವೊಂದಕ್ಕೆ 100 ಕೋಟಿ ರೂ. ಸಂಭಾವನೆ ಪಡೆಯುವ ಸೂಪರ್‌ಸ್ಟಾರ್‌

    ಮುಂಬೈ: ತೆರೆ  ಮೇಲೆ ಮಿಂಚುವ  ಸಿನಿಮಾ ನಟ, ನಟಿಯರ ಹಿಂದೆ ನೋವಿನ ಕಥೆಗಳಿವೆ. ಅವರು ನಡದು ಬಂದ ಹಾದಿ ಯುವ ಪೀಳಿಗೆಗೆ ಒಂದು ಮಾದರಿಯಾಗುತ್ತದೆ. ಒಂದೊಂದೆ ಮೆಟ್ಟಿಲನ್ನು ಏರುತ್ತಾ ಯಶಸ್ಸಿನತ್ತ ದಾಪುಗಾಲು ಇಟ್ಟಿರುವ ಬಾಲಿವುಡ್​ನ​ ಸ್ಟಾರ್​​ ನಟರೊಬ್ಬರು ಈ ಹಿಂದೆ ಟಾಯ್ಲೆಟ್​​ ಕ್ಲೀನ್​​ ಮಾಡಿದ್ದರು. ಈ ಭಾರತೀಯ ನಟ  100 ಕೋಟಿ ರೂ. ಮೊತ್ತವನ್ನು ಸಂಭಾವನೆಯಾಗಿ ಪಡೆದ ಮೊದಲ ನಟ ಆಗಿದ್ದಾರೆ.

    ಹಲವಾರು ಭಾರತೀಯ ನಟರು ಇಂದು ಚಲನಚಿತ್ರದಲ್ಲಿನ ತಮ್ಮ ಪಾತ್ರಗಳಿಗೆ ಭಾರಿ ಮೊತ್ತ ಸಂಭಾವನೆಯನ್ನು ಪಡೆಯುತ್ತಾರೆ. ಶಾರುಖ್ ಖಾನ್‌ನಿಂದ ಹಿಡಿದು ರಜನಿಕಾಂತ್‌ವರೆಗೆ ಎಲ್ಲಾ ಸೂಪರ್‌ಸ್ಟಾರ್‌ಗಳು ಒಂದು ಚಿತ್ರಕ್ಕೆ 100 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ನಟ ಸಲ್ಮಾನ್ ಖಾನ್‌ ಒಂದು ಸಿನಿಮಾಕ್ಕೆ 100 ಕೋಟಿ ಚಾರ್ಜ್ ಮಾಡಿದ ಮೊದಲ ಭಾರತೀಯ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ತಮ್ಮ ಚೊಚ್ಚಲ ಚಿತ್ರಕ್ಕೆ ಮೊದಲ ಸಂಭಾವನೆಯಾಗಿ 11,000 ರೂ. ಪಡೆದರು. ಅದಕ್ಕಿಂತಲೂ ಮೊದಲು ಅವರು ಟಾಯ್ಲೆಟ್‌ ಕ್ಲೀನ್ ಮಾಡಿದ್ದೂ ಇದೆ ಎಂಬುದನ್ನು ರಿಯಾಲಿಟಿ ಶೋ ಒಂದರಲ್ಲಿ ಹೇಳಿಕೊಂಡಿದ್ದರು.

    2016ರಲ್ಲಿ ಸಲ್ಮಾನ್ ಖಾನ್ ಅವರು ಸುಲ್ತಾನ್ ಚಿತ್ರಕ್ಕಾಗಿ 100 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ. ಅಲಿ ಅಬ್ಬಾಸ್ ಜಾಫರ್ ಅವರು ನಿರ್ದೇಶಿಸಿದ ಈ ಚಿತ್ರವನ್ನು ಆದಿತ್ಯ ಚೋಪ್ರಾ ನಿರ್ಮಿಸಿದ್ದಾರೆ ಮತ್ತು ಅನುಷ್ಕಾ ಶರ್ಮಾ ಕೂಡ ನಟಿಸಿದ್ದಾರೆ. ಚಿತ್ರವು ಬ್ಲಾಕ್‌ಬಾಸ್ಟರ್ ಆಗಿ ಹೊರಹೊಮ್ಮಿತು. ಬಾಕ್ಸ್ ಆಫೀಸ್‌ನಲ್ಲಿ 421.25 ಕೋಟಿ ರೂಪಾಯಿಗಳನ್ನು ಗಳಿಕೆ ಮಾಡಿತ್ತು. ಕತ್ರಿನಾ ಕೈಫ್ ನಟಿಸಿರುವ ಅವರ ಮುಂದಿನ ಚಿತ್ರ ಟೈಗರ್ ಜಿಂದಾ ಹೈಗಾಗಿ ಅವರು 130 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ.

    ಆದರೆ  ಈ ಸ್ಟಾರ್ ನಟ ಒಮ್ಮೆ ಶೌಚಾಲಯವನ್ನು ಸ್ವಚ್ಛಗೊಳಿಸುತ್ತಿದ್ದರು ಎಂದು ನಿಮಗೆ ತಿಳಿದಿದೆಯೇ? ಸಲ್ಮಾನ್ ಖಾನ್ ಬಿಗ್ ಬಾಸ್ ಒಟಿಟಿ 2 ರ ಅಂತಿಮ ಹಂತದಲ್ಲಿ ಬಿಗ್ ಬಾಸ್ ಮನೆಯಲ್ಲಿ ಶೌಚಾಲಯಗಳನ್ನು ಸ್ವಚ್ಛವಾಗಿಟ್ಟಿದ್ದಕ್ಕಾಗಿ ಪೂಜಾ ಭಟ್ ಅವರನ್ನು ಶ್ಲಾಘಿಸುವಾಗ ಅವರು, ಯಾವುದೇ ಕೆಲಸ ಚಿಕ್ಕದಲ್ಲ.  ತಮ್ಮ ಬೋರ್ಡಿಂಗ್ ಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದಾಗ ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತಿದ್ದರು ಎಂದು ಬಹಿರಂಗಪಡಿಸಿದ್ದರು. ಅಂದು ಟಾಯ್ಲೆಟ್​​ ಸ್ವಚ್ಛ ಗೊಳಿಸಿದ್ದೆ ಎಂದು ಸಾರ್ವಜನಿಕವಾಗಿ ತಾನೋಬ್ಬ ಸ್ಟಾರ್​​ ನಟ ಎನ್ನುವ ಯಾವುದೇ ಅಹಂಕಾರ ಇಲ್ಲದೆ ನಟ ಹೇಳಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

    ಸಲ್ಮಾನ್ ಖಾನ್ ಈಗ ತನ್ನ ಮುಂಬರುವ ಚಿತ್ರ ಟೈಗರ್ 3 ನೊಂದಿಗೆ ಪ್ರೇಕ್ಷಕರನ್ನು ರಂಜಿಸಲು ಸಿದ್ಧರಾಗಿದ್ದಾರೆ. ಮನೀಶ್ ಶರ್ಮಾ ಅವರ ಹೆಲ್ಮೆಡ್, ಈ ಚಿತ್ರದಲ್ಲಿ ಕತ್ರಿನಾ ಕೈಫ್ ಮತ್ತು ಇಮ್ರಾನ್ ಹಶ್ಮಿ ಕೂಡ ನಟಿಸಿದ್ದಾರೆ ಮತ್ತು ನವೆಂಬರ್ 12 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.  

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts