More

    17ರ ಬಾಲೆಯ ಹೊಟ್ಟೆಯೊಳಗಿತ್ತು 2 ಕೆ.ಜಿ. ಕೂದಲು; ಕೃಶವಾಗುತ್ತಲೇ ಇದ್ದವಳ ಕಾಡುತ್ತಿದೆ ವಿಚಿತ್ರ ರೋಗ

    ನವದೆಹಲಿ: ಬರೀ ಹದಿನೇಳು ವಯಸ್ಸಿನ ಈ ಹುಡುಗಿಯ ಹೊಟ್ಟೆಯಲ್ಲಿ 2 ಕೆ.ಜಿ. ತೂಕದ ತಲೆಗೂದಲ ಉಂಡೆ ಕಾಣಿಸಿಕೊಂಡಿದ್ದು, ಬಳಿಕ ವೈದ್ಯರು ಅದನ್ನು ಶಸ್ತ್ರಚಿಕಿತ್ಸೆ ಮಾಡಿ ತೆಗೆಯುವ ಮೂಲಕ ಬಾಲಕಿಯನ್ನು ಹೆಚ್ಚಿನ ಅಪಾಯದಿಂದ ಪಾರು ಮಾಡಿದ್ದಾರೆ.

    ಅಪ್ರಾಪ್ತ ವಯಸ್ಸಿನ ಈಕೆ ಕಳೆದೆರಡು ವರ್ಷಗಳಿಂದ ಕೃಶವಾಗುತ್ತಲೇ ಇದ್ದು, ಪಾಲಕರ ಪಾಲಿಗೆ ಇವಳ ಈ ಸಮಸ್ಯೆ ತಲೆನೋವಾಗಿ ಪರಿಣಮಿಸಿತ್ತು. ಅಲ್ಲದೆ ಕಳೆದ ಹತ್ತು ದಿನಗಳಿಂದ ಹುಡುಗಿಯ ತಲೆಯಿಂದ ಗಣನೀಯ ಪ್ರಮಾಣದಲ್ಲಿ ಕೂದಲು ಉದುರಿರುವುದನ್ನೂ ಗಮನಿಸಿದ ಪಾಲಕರು, ಬಾಲಕಿ ಇತ್ತೀಚೆಗೆ ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದುದನ್ನು ನೋಡಿ ವೈದ್ಯರಲ್ಲಿ ಕರೆದೊಯ್ದಿದ್ದರು.

    ಇದನ್ನೂ ಓದಿ: ‘ರಾಣಿ’ಯನ್ನು ಕೊಂದು ಹೂತಿಟ್ಟ ಭೂಪ; ದೇವಸ್ಥಾನದಲ್ಲೂ ಕದ್ದು ಸಿಕ್ಕಿಬಿದ್ದ; ಇಂದು ಆಕೆಯ ಶವ ಹೊರತೆಗೆದ ಪೊಲೀಸರು..

    ಉತ್ತರಪ್ರದೇಶದ ಲಕ್ನೋದಲ್ಲಿನ ಬಲರಾಮ್​ಪುರ ಆಸ್ಪತ್ರೆಯಲ್ಲಿ ಪರಿಶೀಲಿಸಿದಾಗ, ಅಲ್ಲಿನ ಡಾ.ಎಸ್​.ಆರ್. ಸಮ್ದಾರ್ ಬಾಲಕಿಯನ್ನು ಅಲ್ಟ್ರಾಸೌಂಡ್​ ಪರೀಕ್ಷೆಗೆ ಒಳಪಡಿಸಿದ್ದರು. ಆಗ ಹೊಟ್ಟೆಯಲ್ಲಿ ಒಂದು ರೀತಿಯ ಗಂಟಿನಂಥ ರಚನೆ ಕಾಣಿಸಿಕೊಂಡಿದ್ದು, ನಂತರ ಸಿಟಿ ಸ್ಕ್ಯಾನ್​ಗೆ ಒಳಪಡಿಸಿದಾಗ ಕೂದಲಿನ ಉಂಡೆ ಇರುವುದು ಕಾಣಿಸಿತ್ತು. ಸುಮಾರು ಒಂದೂವರೆ ಗಂಟೆ ಕಾಲ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು, 2 ಕೆ.ಜಿ. ತೂಕದ ಕೂದಲುಂಡೆಯನ್ನು ಹೊಟ್ಟೆಯಿಂದ ತೆಗೆದಿದ್ದಾರೆ.

    ಇದನ್ನೂ ಓದಿ: ಕರೊನಾ ಲಸಿಕೆ ಹಾಕಿಸಿಕೊಳ್ಳದಿದ್ದರೆ ಪಿಂಚಣಿ-ಪಡಿತರವಿಲ್ಲ; ಈ ಕುರಿತ ಸತ್ಯಾಂಶವೇನು?

    ಈ ಬಾಲಕಿ ಹುಟ್ಟಿದ ಸಮಯದಿಂದಲೇ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಕೂದಲು ತಿನ್ನುವಂಥ ವಿಚಿತ್ರ ರೋಗದಿಂದ ಬಳಲುತ್ತಿದ್ದಳು. ಟ್ರೈಕೋಬೆಜೋವರ್ ಎನ್ನುವ ಈ ವಿಚಿತ್ರ ರೋಗದಿಂದ ಬಳಲುವವರು ತಮ್ಮದೇ ತಲೆಗೂದಲನ್ನು ಕಿತ್ತು ತಿನ್ನುತ್ತಿರುತ್ತಾರೆ. ಕೂದಲು ಜೀರ್ಣವಾಗದ ಹಿನ್ನೆಲೆಯಲ್ಲಿ ಹೊಟ್ಟೆಯಲ್ಲಿ ಗಂಟುಕಟ್ಟಿಕೊಂಡು ಸಮಸ್ಯೆ ಉಂಟಾಗಿದ್ದು, ಅದನ್ನು ಶಸ್ತ್ರಚಿಕಿತ್ಸೆ ಮಾಡಿ ತೆಗೆಯಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಪತ್ನಿಗೆ ಭಯೋತ್ಪಾದಕರ ಸಂಪರ್ಕ?!; ಪತಿಯಿಂದಲೇ ಪೊಲೀಸರಿಗೆ ದೂರು, ಈ ಮಧ್ಯೆ ಪತ್ನಿ ನಾಪತ್ತೆ!

    ನಾವೇನನ್ನು ತಿನ್ನುತ್ತಿದ್ದೇವೆ? ಅವೆಷ್ಟು ಸರಿ? ಅಷ್ಟಕ್ಕೂ ರೋಗಗಳು ಏಕೆ ಬರುತ್ತವೆ?; ಎಲ್ಲವನ್ನೂ ಇಲ್ಲಿ ವಿವರಿಸಿದ್ದಾರೆ ಡಾ.ಖಾದರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts