More

    ಸೌದಿ ಅರೇಬಿಯಾದಲ್ಲಿ ದುರಂತ ಸಾವಿಗೀಡಾದ ಕೇರಳ ಮೂಲದ ಇಬ್ಬರು ನರ್ಸ್​..!

    ಟೈಫ್​: ಮಿನಿಬಸ್​ ಕಂದಕಕ್ಕೆ ಉರುಬಿದ್ದ ಪರಿಣಾಮ ಕೇರಳ ಮೂಲದ ಇಬ್ಬರು ನರ್ಸ್​ ದಾರುಣವಾಗಿ ಮೃತಪಟ್ಟಿರುವ ಘಟನೆ ಸೌದಿ ಅರೇಬಿಯಾದ ತೈಫ್​ನಲ್ಲಿ ನಡೆದಿದೆ.

    ಮೃತರನ್ನು ಕೇರಳದ ವೈಕೊಮ್​ ವಂಚಿಯೂರ್​ ನಿವಾಸಿ ಅಖಿಲಾ (29) ಮತ್ತು ಕೊಲ್ಲಂ ನಿವಾಸಿ ಸುಬಿ (33) ಎಂದು ಗುರುತಿಸಲಾಗಿದೆ. ರಿಯಾದ್​ನಿಂದ ಜೆದ್ದಾಗೆ ಪ್ರಯಾಣ ಬೆಳೆಸಿದ್ದ ಮಿನಿಬಸ್​ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಪಕ್ಕದ ಕಂದಕಕ್ಕೆ ಉರುಳಿ ದುರ್ಘಟನೆ ಸಂಭವಿಸಿದೆ.

    ಇದನ್ನೂ ಓದಿರಿ: ಕಾಲೇಜು ಪ್ರಿಯಕರನ ನಂಬಿ ಗಂಡನಿಂದ ವಿಚ್ಛೇದನ ಪಡೆದ ಮಹಿಳೆಗೆ ಕಾದಿತ್ತು ಬಿಗ್​ ಶಾಕ್​!

    ರಿಯಾದ್​ನಲ್ಲಿ ತಮ್ಮ ಕ್ವಾರಂಟೈನ್​ ಪೂರ್ಣಗೊಳಿಸಿ ಜೆದ್ದಾದಲ್ಲಿರುವ ವಸತಿ ನಿಲಯಕ್ಕೆ ನರ್ಸ್​ಗಳು ತೆರಳುವಾಗ ಅಪಘಾತ ನಡೆದಿದೆ. ಕೇರಳದ ಇನ್ನಿಬ್ಬರು ನರ್ಸ್​ಗಳಾದ ಆ್ಯನ್ಸಿ ಮತ್ತು ಪ್ರಿಯಾಂಕಾ ಗಂಭೀರವಾಗಿ ಗಾಯಗೊಂಡಿದ್ದು, ತೈಫ್​ನ ಕಿಂಗ್​ ಫೈಸಲ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಅಪಘಾತವು ಭಾನುವಾರ ಸಂಜೆ 4.30ರ ಸುಮಾರಿಗೆ ಸಂಭವಿಸಿದೆ. ಮಿನಿಬಸ್​ ಚಾಲಕ ನಿದ್ರೆಗೆ ಜಾರಿದರಿಂದ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. (ದಿಗ್ವಿಜಯ ನ್ಯೂಸ್​)

    ಬಿಗ್​ಬಾಸ್​ ಶೋ ಆರಂಭದಲ್ಲೇ ಕೇಳಿಬಂತು ಅಪಸ್ವರ: ಕಲರ್ಸ್​ ಕನ್ನಡಕ್ಕೆ ಜನರಿಟ್ಟ ಬೇಡಿಕೆ ಏನು?

    ಟಿಕೆಟ್​ ಇಲ್ಲದೆ ರೈಲಲ್ಲಿ ಪ್ರಯಾಣಿಸಿ ಸಿಕ್ಕಿಬಿದ್ದ 20 ಪೊಲೀಸರು: ದಂಡ ಕೇಳಿದ್ರೆ ಏನಂದ್ರು ಗೊತ್ತಾ?

    ಜಾಲಿಲೈಫ್​ಗೆ ಸಾಧು; ನಿರ್ದೇಶನ ಐದು ವರ್ಷದ ಬಳಿಕ ಡೈರೆಕ್ಟರ್ ಕ್ಯಾಪ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts