More

    ಇಸ್ರೇಲ್​ ವಾಯುದಾಳಿಗೆ ಗಾಜಾದಲ್ಲಿ ಅಲ್​ ಜಜೀರಾ ಉದ್ಯೋಗಿಯ 19 ಕುಟುಂಬ ಸದಸ್ಯರು ಬಲಿ: ತೀವ್ರ ಖಂಡನೆ

    ಜೆರುಸಲೇಂ: ಗಾಜಾದ ಜನನಿಬಿಡ ಜಬಲಿಯಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್​ ಪಡೆ ಮಂಗಳವಾರ ನಡೆಸಿದ ವಾಯುದಾಳಿಯಲ್ಲಿ ಅಲ್ ಜಜೀರಾ ಮಾಧ್ಯಮದ ಉದ್ಯೋಗಿಯು ತನ್ನ 19 ಕುಟುಂಬ ಸದಸ್ಯರನ್ನು ಕಳೆದುಕೊಂಡಿದ್ದು, ಈ ದಾಳಿಯನ್ನು ಅಲ್ ಜಜೀರಾ ಕಟುವಾಗಿ ಖಂಡಿಸಿದೆ.

    ಇದೇ ದಾಳಿಯಲ್ಲಿ ಒಟ್ಟು 50 ಪ್ಯಾಲೆಸ್ತೀನಿಯರು ಮತ್ತು ಓರ್ವ ಹಮಾಸ್​ ಕಮಾಂಡರ್​ ಮೃತಪಟ್ಟಿದ್ದಾನೆ.

    ದಾಳಿ ನಡೆದ ಒಂದು ದಿನದ ಬಳಿಕ ಅಲ್ ಜಜೀರಾ ಮಾಧ್ಯಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದು, ನಮ್ಮ ಎಸ್​ಎನ್​ಜಿ ಇಂಜಿನಿಯರ್ ಮೊಹಮದ್ ಅಬು ಅಲ್-ಕುಮ್ಸಾನ್ ಅವರ 19 ಕುಟುಂಬ ಸದಸ್ಯರ ಹತ್ಯೆಗೆ ಕಾರಣವಾದ ಹೇಯ ಮತ್ತು ವಿವೇಚನಾರಹಿತ ಇಸ್ರೇಲಿ ಬಾಂಬ್ ದಾಳಿಯನ್ನು ಅಲ್ ಜಜೀರಾ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದೆ. ಅಲ್ಲದೆ, ಜಬಾಲಿಯಾ ಹತ್ಯಾಕಾಂಡ ಮೊಹಮ್ಮದ್​ ಅವರ ತಂದೆ, ಇಬ್ಬರು ಸಹೋದರಿಯರು, 10 ಸೋದರ ಸಂಬಂಧಿಗಳು, ಸಹೋದರ ಮತ್ತು ಸಹೋದರನ ಪತ್ನಿ ಮತ್ತು ಅವರ 4 ಮಕ್ಕಳು, ಅತ್ತಿಗೆ ಮತ್ತು ಒಬ್ಬ ಚಿಕ್ಕಪ್ಪನನ್ನು ಬಲಿ ಪಡೆದುಕೊಂಡಿದೆ ಎಂದು ಮಾಹಿತಿ ನೀಡಿದೆ.

    ಮೊಹಮ್ಮದ್​ ಮತ್ತು ಆತನ ಕುಟುಂಬದಕ್ಕೆ ನಾವು ನಮ್ಮ ಪ್ರಾಮಾಣಿಕ ಸಂತಾಪವನ್ನು ವ್ಯಕ್ತಪಡಿಸುತ್ತೇವೆ. ಈ ದುಃಖದ ಸಮಯದಲ್ಲಿ ನಾವು ಅವರ ಕುಟುಂಬದ ಪರವಾಗಿ ನಿಲ್ಲುತ್ತೇವೆ ಮತ್ತು ಅಮಾಯಕ ಜೀವಗಳ ಅವಿವೇಕದ ಹತ್ಯೆಗೆ ನ್ಯಾಯವನ್ನು ಬೇಡುತ್ತೇವೆ ಎಂದು ಅಲ್ ಜಜೀರಾ ಮಾಧ್ಯಮ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ಗಾಜಾದಲ್ಲಿ ನಾಗರಿಕರ ವಿರುದ್ಧದ ಅಪರಾಧಗಳಿಗೆ ಇಸ್ರೇಲ್ ಸಂಪೂರ್ಣ ಜವಾಬ್ದಾರನಾಗಿರಬೇಕು ಮತ್ತು ಅಂತಾರಾಷ್ಟ್ರೀಯ ನ್ಯಾಯಾಲಯವನ್ನು ಎದುರಿಸಬೇಕಾಗುತ್ತದೆ ಎಂದಿರುವ ಅಲ್ ಜಜೀರಾ, ಮೊಹಮ್ಮದ್ ಅಬು ಅಲ್-ಕುಮ್ಸಾನ್ ಅವರ ಕುಟುಂಬಗಳಿಗೆ ಮತ್ತು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಅಸಂಖ್ಯಾತ ಇತರ ಮುಗ್ಧ ಗಾಜಾ ನಾಗರಿಕರ ನ್ಯಾಯಕ್ಕಾಗಿ ಅತ್ಯಂತ ತುರ್ತಾಗಿ ಈ ಗಂಭೀರ ಅನ್ಯಾಯವನ್ನು ಪರಿಹರಿಸಲು ನಾವು ಅಂತಾರಾಷ್ಟ್ರೀಯ ಸಮುದಾಯವನ್ನು ಒತ್ತಾಯಿಸುತ್ತೇವೆ ಎಂದು ಹೇಳಿದೆ.

    ಇಸ್ರೇಲ್​ ವಾಯುದಾಳಿಗೆ ಗಾಜಾದಲ್ಲಿ ಅಲ್​ ಜಜೀರಾ ಉದ್ಯೋಗಿಯ 19 ಕುಟುಂಬ ಸದಸ್ಯರು ಬಲಿ: ತೀವ್ರ ಖಂಡನೆ

    ದಾಳಿಯ ಬಗ್ಗೆ ಇಸ್ರೇಲ್​ ರಕ್ಷಣಾ ಪಡೆ (IDF) ಸಹ ಸ್ಪಷ್ಟನೆ ನೀಡಿದೆ. ಗಾಜಾದ ಅತಿದೊಡ್ಡ ನಿರಾಶ್ರಿತರ ಶಿಬಿರವಾದ ಜಬಾಲಿಯಾ ಮೇಲಿನ ದಾಳಿಗೆ ಹಮಾಸ್ ಕಮಾಂಡರ್ ಇಬ್ರಾಹಿಂ ಬಿಯಾರಿ ಕಾರಣ. ಆತ ಹಮಾಸ್ ಯೋಧರೊಂದಿಗೆ ಭೂಗತ ಸುರಂಗ ಸಂಕೀರ್ಣದಲ್ಲಿದ್ದರು. ಬಿಯಾರಿಯೊಂದಿಗೆ ಹತ್ತಾರು ಯೋಧರು ಸಹ ಹತರಾಗಿದ್ದಾರೆ ಎಂದು ಐಡಿಎಫ್​ ತಿಳಿಸಿದೆ.

    ಇದೇ ಸಂದರ್ಭದಲ್ಲಿ ಹಮಾಸ್​ ಸಹ ಹೇಳಿಕೆ ನೀಡಿದ್ದು, ಇಸ್ರೇಲ್​ ಸೇನೆ ಜಬಾಲಿಯಾದಲ್ಲಿ ನಡೆಸಿದ ದಾಳಿಯಲ್ಲಿ ಸುಮಾರು 400 ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಿದೆ. ಈ ಜಬಾಲಿಯಾವು 1948ರ ಹಿಂದೆ ಇಸ್ರೇಲ್‌ನೊಂದಿಗಿನ ಯುದ್ಧಗಳಿಂದ ನಿರಾಶ್ರಿತರಾದ ಕುಟುಂಬಗಳನ್ನು ಹೊಂದಿದೆ ಎಂದು ಹಮಾಸ್​ ತಿಳಿಸಿದೆ. ಗಾಜಾದ ಉತ್ತರ ಪ್ರದೇಶಗಳನ್ನು ಸ್ಥಳಾಂತರಿಸುವಂತೆ ಇಸ್ರೇಲ್ ಗಾಜಾ ನಿವಾಸಿಗಳಿಗೆ ಎಚ್ಚರಿಕೆ ನೀಡಿದೆ, ಆದರೆ ಕೆಲವು ಕುಟುಂಬಗಳು ಉಳಿದುಕೊಂಡಿವೆ ಎಂದು ಅಂದಾಜಿಸಲಾಗಿದೆ. (ಏಜೆನ್ಸೀಸ್​)

    ಪ್ರಾಚೀನ ಆವಿಷ್ಕಾರ, ಆಧುನಿಕ ಉದ್ಯಮದ ತೊಟ್ಟಿಲು ಕರ್ನಾಟಕ: ರಾಜ್ಯೋತ್ಸವಕ್ಕೆ ಪ್ರಧಾನಿ ಮೋದಿ ಶುಭಾಶಯ

    ಮೈಸೂರಿನ ತಾಯಿ ಭುವನೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಕನ್ನಡಾಂಬೆ ದೇಗುಲದ ವಿಶೇಷತೆಗಳಿವು

    ಕನ್ನಡ ರಾಜ್ಯೋತ್ಸವ: ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಗಣ್ಯರಿಂದ ಶುಭಾಶಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts