More

    ಬೆಂಗಳೂರಿನಲ್ಲಿ ಇದ್ದುಕೊಂಡೇ ಮಧ್ಯಪ್ರದೇಶ ವಿಧಾನಸಭೆ ಸ್ಪೀಕರ್​ಗೆ ರಾಜೀನಾಮೆ ಪತ್ರ ರವಾನಿಸಿದ 19 ಕಾಂಗ್ರೆಸ್ ಶಾಸಕರು

    ಬೆಂಗಳೂರು: ಮಧ್ಯಪ್ರದೇಶದ ಕಮಲನಾಥ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿರುವ ಕಾಂಗ್ರೆಸ್​ ಪಕ್ಷದ 19 ಶಾಸಕರು ಬೆಂಗಳೂರಿನಲ್ಲಿದ್ದು, ಅವರು ಮಂಗಳವಾರ ತಮ್ಮ ರಾಜೀನಾಮೆ ಪತ್ರವನ್ನು ಮಧ್ಯಪ್ರದೇಶ ವಿಧಾನಸಭೆಯ ಸ್ಪೀಕರ್​ಗೆ ರವಾನಿಸಿದ್ದಾರೆ.

    ಈ 19 ಶಾಸಕರು ಮಾಜಿ ಸಂಸದ ಜ್ಯೋತಿರಾದಿತ್ಯ ಸಿಂಧ್ಯಾ ಅವರ ಬೆಂಬಲಿಗರು. ಜ್ಯೋತಿರಾದಿತ್ಯ ಸಿಂಧ್ಯಾ ಸದ್ಯ ದೆಹಲಿಯಲ್ಲಿದ್ದು, ಪಕ್ಷಕ್ಕೆ ತಮ್ಮ ರಾಜೀನಾಮೆ ಸಲ್ಲಿಕೆಯ ವಿಚಾರವನ್ನು ಟ್ವೀಟ್ ಮೂಲಕ ಬಹಿರಂಗ ಪಡಿಸಿದ ಬೆನ್ನಲ್ಲೇ ಈ ಶಾಸಕರು ಕೂಡ ತಮ್ಮ ಶಾಸಕತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ 19 ಶಾಸಕರ ಪೈಕಿ ಆರು ರಾಜ್ಯಸಚಿವರೂ ಇದ್ದಾರೆ.

    ಶಾಸಕರ ಈ ನಡೆಯೊಂದಿಗೆ ಕಮಲನಾಥ ಸರ್ಕಾರದ ಬಹುಮತ ಕುಸಿದಿದೆ. ಮಧ್ಯಪ್ರದೇಶ ವಿಧಾನಸಭೆಯಲ್ಲಿ 228 ಶಾಸಕರಿದ್ದು, ಈ ಪೈಕಿ ಬಿಜೆಪಿಗೆ 109, ಬಿಎಸ್​ಪಿ 2, ಸಮಾಜವಾದಿ ಪಕ್ಷ 1, ಪಕ್ಷೇತರ 4 ಸದಸ್ಯರಿದ್ದಾರೆ. ಆಡಳಿತ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್​ಗೆ 114 ಸದಸ್ಯಬಲ ಇತ್ತು. ಈಗ 19 ಶಾಸಕರ ರಾಜೀನಾಮೆಯೊಂದಿಗೆ ಕಾಂಗ್ರೆಸ್ ಸದಸ್ಯ ಬಲ 95ಕ್ಕೆ ಕುಸಿದಿದೆ. (ಏಜೆನ್ಸೀಸ್​)

    ಫ್ಲೋರ್​ಟೆಸ್ಟ್​ಗೂ ಮೊದಲೇ ಕಮಲನಾಥ್ ಸರ್ಕಾರ ಪತನವಾಗತ್ತ?: ಬಿಜೆಪಿ ಸೇರಲಿದ್ದಾರೆ ಸಿಂಧ್ಯಾ, ರಾಜ್ಯಸಭೆ ಅಭ್ಯರ್ಥಿಯಾಗೋದು ಖಚಿತ

    ಮೋದಿ, ಷಾ ಭೇಟಿ ಬಳಿಕ ಕಾಂಗ್ರೆಸ್​ಗೆ ರಾಜೀನಾಮೆ ನೀಡಿದ ಜ್ಯೋತಿರಾದಿತ್ಯ ಸಿಂಧ್ಯಾ; ಸೋನಿಯಾ ಗಾಂಧಿಗೆ ಪತ್ರ ರವಾನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts