More

    ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿ ಎದುರು ಹೈ ಡ್ರಾಮಾ: ಉಪವಾಸ ಸತ್ಯಾಗ್ರಹ ಘೋಷಿಸಿದ ದಿಗ್ವಿಜಯ ಸಿಂಗ್, ಬೆಂಬಲಕ್ಕೆ ನಿಂತ ಡಿಕೆಶಿ

    ಬೆಂಗಳೂರು: ಮಧ್ಯಪ್ರದೇಶದ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಭಿನ್ನಮತೀಯ ಚಟುವಟಿಕೆಯ ಹೈ ಡ್ರಾಮಾ ಲೊಕೇಷನ್​ ಬುಧವಾರ ಮಧ್ಯಾಹ್ನದ ವೇಳೆಗೆ ಬೆಂಗಳೂರಿನ ಪೊಲೀಸ್ ಕಮಿಷನರ್ ಕಚೇರಿ ಎದುರಿಗೆ ಸ್ಥಳಾಂತರಗೊಂಡಿತ್ತು. ಮುಂಜಾಗ್ರತಾ ಬಂಧನದಿಂದ ಬಿಡುಗಡೆಯಾಗುತ್ತಿದ್ದಂತೆ ಮಧ್ಯಪ್ರದೇಶದ ಕಾಂಗ್ರೆಸ್ ನಾಯಕರಾದ ದಿಗ್ವಿಜಯ ಸಿಂಗ್, ಸಜ್ಜನ್ ಸಿಂಗ್ ವರ್ಮಾ, ಕಾಂತಿಲಾಲ್ ಭುರಿಯಾ ಅವರು ನ್ಯಾಯಕೋರಿ ಕಮಿಷನರ್ ಕಚೇರಿಗೆ ಆಗಮಿಸಿದ್ದರು.

    ಹೋಟೆಲ್ ರಮಡಾ ಮುಂಭಾಗದಿಂದ ಈ ನಾಯಕರನ್ನು ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಬಂಧಿಸಿ ಅಮೃತಹಳ್ಳಿ ಪೊಲೀಸ್ ಠಾಣೆಗೆ ಕರೆದೊಯ್ದ ವೇಳೆ ದಿಗ್ವಿಜಯ ಸಿಂಗ್ ಪ್ರತಿಕ್ರಿಯಿಸಿದ್ದು, ಇವರು ನನ್ನನ್ನು ಎಲ್ಲಿಗೆ ಕರೆದೊಯ್ಯುತ್ತಿದ್ದಾರೋ ತಿಳಿಯದು. ನನ್ನ ಶಾಸಕರನ್ನು ಭೇಟಿ ಮಾಡುವುದಕ್ಕೆ ಅವಕಾಶ ಮಾಡಿಕೊಡಬೇಕು. ನಾನು ಕಾನೂನು ಪಾಲನೆ ಮಾಡುವ ಪೌರ. ನಮ್ಮ ಸರ್ಕಾರವನ್ನೂ ರಕ್ಷಿಸುತ್ತೇನೆ. ಶಾಸಕರನ್ನೂ ವಾಪಸ್​ ಕರೆದೊಯ್ಯುತ್ತೇನೆ. ಇನ್ನೂ ತೊಂದರೆ ಕೊಟ್ಟರೆ ಉಪವಾಸ ಸತ್ಯಾಗ್ರಹ ಕೂರುವೆ ಎಂಬ ಎಚ್ಚರಿಕೆಯನ್ನು ವಿಶ್ವಾಸದ ಮಾತುಗಳೊಂದಿಗೆ ಹೇಳಿದ್ದಾರೆ.

    ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದು, ದಿಗ್ವಿಜಯ ಸಿಂಗ್ ಅವರು ನಮ್ಮ ಪಕ್ಷದ ಶಾಸಕರನ್ನು ಭೇಟಿ ಮಾಡಲು ಆಗಮಿಸಿದ್ದಾರೆ. ಹೋಟೆಲ್​ನಲ್ಲಿ ಇದ್ದ ಶಾಸಕರ ಪೈಕಿ ಒಬ್ಬರು ಅವರಿಗೆ ಟೆಲಿಫೋನ್ ಮೂಲಕ ಕರೆ ಮಾಡಿದ್ದು, ಬಿಡುಗಡೆ ಮಾಡಿಸುವಂತೆ ಕೋರಿದ್ದರು. ಆದರೆ, ಪೊಲೀಸರು ಅವರನ್ನು ತಡೆದಿದ್ದಾರೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಸೆಳೆಯಲು ಪೊಲೀಸ್ ಕಮಿಷನರ್ ಕಚೇರಿಗೆ ಆಗಮಿಸಿದ್ದಾರೆ ಎಂದು ಹೇಳಿದ್ದಾರೆ.

    ಅವರು ಒಂಟಿಯಲ್ಲ, ನಾನೂ ಇದ್ದೇನೆ ಅವರ ಜತೆಗೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸಲ್ಲ ಎಂದು ಅಬ್ಬರಿಸಿದ ಕಾಂಗ್ರೆಸ್ ಟ್ರಬಲ್​ ಶೂಟರ್ ಡಿಕೆಶಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts