More

    ಕೆಲಸ ಕಳೆದುಕೊಳ್ಳಲಿದ್ದಾರೆ ಒಂದೇ ಕಂಪನಿಯ 18 ಸಾವಿರ ಇಂಜಿನಿಯರ್‌ಗಳು!

    ಬೆಂಗಳೂರು: ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ, ಭಾರತದ ದೊಡ್ಡ ಐಟಿ ಹಬ್​ ಆಗಿರುವ ಅಮೆರಿಕದ ಕಂಪನಿ ಕಾಗ್ನಿಜೆಂಟ್ ಭಾರತದಾದ್ಯಂತ ಸುಮಾರು 18 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾಗಿದೆ.

    ಕಳೆದ ವರ್ಷವೇ ಸುಮಾರು 12 ಸಾವಿರ ಉದ್ಯೋಗಿಗಳನ್ನು ವಜಾ ಮಾಡುವ ಸಂಬಂಧ ಆದೇಶ ಹೊರಡಿಸಿದ್ದ ಕಂಪನಿ ಇದೀಗ ಮತ್ತೆ 18 ಸಾವಿರ ಉದ್ಯೋಗಿಗಳ ವಜಾಕ್ಕೆ ಮುಂದಾಗಿದೆ. ಮಧ್ಯಮ ಶ್ರೇಣಿಯಿಂದ ಆರಂಭಗೊಂಡು ಹಿರಿಯ ಶ್ರೇಣಿ ಹೊಂದಿರುವ ಉದ್ಯೋಗಿಗಳನ್ನು ಸಂಸ್ಥೆಯಿಂದ ತೆಗೆದು ಹಾಕಲು ಮುಂದಾಗುತ್ತಿದ್ದೇವೆ ಎಂಬುದಾಗಿ ಕಾಗ್ನಿಜೆಂಟ್ ಕಂಪೆನಿ ಸಿಇಒ ಘೋಷಿಸಿದ್ದಾರೆ.

    ಕಂಪನಿಯ ಈ ನಡವಳಿಕೆ ವಿರುದ್ದ ಬೇಸತ್ತಿರುವ ಕರ್ನಾಟಕ ಮತ್ತು ಚೆನ್ನೈನಲ್ಲಿರುವ ರಾಜ್ಯ ಐಟಿ ನೌಕರರ ಸಂಘಗಳು ಸರ್ಕಾರಕ್ಕೆ ತಮ್ಮ ಮನವಿ ಸಲ್ಲಿಸುವುದಕ್ಕೆ ಮುಂದಾಗಿವೆ ಎಂದು ವರದಿಯಾಗಿದೆ. ನಿಯಮದ ಪ್ರಕಾರ, 100ಕ್ಕಿಂತ ಹೆಚ್ಚಿನ ಉದ್ಯೋಗಿಗಳು ಇದ್ದ ಸಂದರ್ಭದಲ್ಲಿ ಸಾಮೂಹಿಕವಾಗಿ ಅವರನ್ನು ತೆಗೆದುಹಾಕುವಾಗ ಕಾರ್ಮಿಕ ಇಲಾಖೆಯ ಅನುಮತಿ ಬೇಕು. ಅದರೆ ಕಾಗ್ನಿಜೆಂಟ್‌ ಹಾಗೆ ಮಾಡಿಲ್ಲ ಎನ್ನುವುದು ಸಂಘಗಳ ಆರೋಪ.

    ಇದನ್ನೂ ಓದಿ: ನಾಲ್ಕು ಸಾವಿರ ರೂ. ನೀಡದ್ದಕ್ಕೆ ಆಸ್ಪತ್ರೆ ಸಿಬ್ಬಂದಿಯಿಂದ ಹಲ್ಲೆ: ವಿಡಿಯೋದಲ್ಲಿ ಸೆರೆ

    ಕಾಗ್ನಿಜೆಂಟ್‌ನ ಆಡಳಿತವು ತೆಗೆದುಕೊಂಡ ಈ ನಿಲುವು ಅಕ್ರಮ ಮತ್ತು ಅಮಾನವೀಯ ಎಂದಿರುವ ಕರ್ನಾಟಕ ರಾಜ್ಯ ಐಟಿ / ಐಟಿಎಸ್ ನೌಕರರ ಒಕ್ಕೂಟ ಇದನ್ನು ತೀವ್ರವಾಗಿ ಖಂಡಿಸಿದೆ. ಕಾರ್ಮಿಕ ಕಾನೂನುಗಳನ್ನು ಉಲ್ಲಂಘಿಸಿ ಸಾಮೂಹಿಕ ರಾಜೀನಾಮೆಯನ್ನು ಕಂಪನಿ ಪಡೆದುಕೊಳ್ಳುತ್ತಿರುವುದಾಗಿ ದೂರು ದಾಖಲು ಮಾಡಲಾಗುವುದು.; ಈ ಕುರಿತು ರಾಜ್ಯ ಕಾರ್ಮಿಕ ಇಲಾಖೆಯಲ್ಲಿ ದೂರು ದಾಖಲಿಸುತ್ತೇವೆ ಎಂದು ಕಾರ್ಮಿಕ ಮುಖಂಡರು ಹೇಳಿದ್ದಾರೆ.

    ಕಾಗ್ನಿಜೆಂಟ್ ಕಂಪನಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರೇ ಉದ್ಯೋಗದಲ್ಲಿದ್ದಾರೆ. 2 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಉದ್ಯೋಗಿಗಳನ್ನು ಹೊಂದಿರುವ ಕಾಂಗ್ನಿಜೆಂಟ್ ದೇಶದ ಎರಡನೇ ಅತಿ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಟಾಟಾ ಕನ್ಸಲ್ಟೆಂಟೆನ್ಸಿ ಸರ್ವಿಸಸ್ 4 ಲಕ್ಷ ಉದ್ಯೋಗಿಗಳನ್ನು ಹೊಂದುವ ಮೂಲಕ ಅತಿ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಕಂಪನಿಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. (ಏಜೆನ್ಸೀಸ್‌)

    ತಲೆನೋವಾಗಿರುವ ಶಶಿಕಲಾ ಬಿಡುಗಡೆ- ಫೋನ್‌ಕಾಲ್‌ಗಳಿಗೆ ಪೊಲೀಸರು ಸುಸ್ತೋ ಸುಸ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts