More

    ನಾಲ್ಕು ಸಾವಿರ ರೂ. ನೀಡದ್ದಕ್ಕೆ ಬಿತ್ತು ಹೆಣ: ಆಸ್ಪತ್ರೆ ಸಿಬ್ಬಂದಿಯಿಂದಲೇ ಹಲ್ಲೆ!

    ಅಲಿಘರ್‌ (ಉತ್ತರ ಪ್ರದೇಶ): ಇಲ್ಲಿಯ ಆಸ್ಪತ್ರೆಯೊಂದರ ಶುಲ್ಕ ಭರಿಸದ ಹಿನ್ನೆಲೆಯಲ್ಲಿ ಆಸ್ಪತ್ರೆಯ ಸಿಬ್ಬಂದಿಯೇ ವ್ಯಕ್ತಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಇದರಿಂದ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ!

    ನಾಲ್ಕು ಸಾವಿರ ರೂಪಾಯಿ ಬಿಲ್‌ ಪಾವತಿಸದ ಹಿನ್ನೆಲೆಯಲ್ಲಿ 44 ವರ್ಷದ ಕಾರ್ಮಿಕನನ್ನು ಖಾಸಗಿ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಮನಸೋಇಚ್ಛೆ ಥಳಿಸಿದ್ದಾರೆ. ಈ ಘಟನೆ ಅಲ್ಲಿಯೇ ಇರುವ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಇದೀಗ ವೈರಲ್‌ ಆಗಿದೆ.

    ಹಲ್ಲೆಗೊಳಗಾದ ಸಂತ್ರಸ್ತನನ್ನು ಸುಲ್ತಾನ್ ಖಾನ್ ಎಂದು ಗುರುತಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಮೂತ್ರ ವಿಸರ್ಜನೆಯಲ್ಲಿ ತೊಂದರೆ ಎದುರಿಸುತ್ತಿದ್ದರಿಂದ ಖಾನ್ ಅವರ ಸೋದರಳಿಯ ಚಮನ್ ಅವರೊಂದಿಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬಂದಿದ್ದರು. ನಂತರ ಆಸ್ಪತ್ರೆಯ ಬಿಲ್‌ ಕಟ್ಟಿಲ್ಲದ ಕಾರಣ, ಥಳಿಸಲಾಗಿದೆ.

    ಇದನ್ನೂ ಓದಿ: ಗಣ್ಯರ ಹತ್ಯೆಗೂ ಸ್ಕೆಚ್ ಹಾಕಿದ್ದ ದುಬೆ!

    ‘ನಾವು ಚಿಕಿತ್ಸೆಯ ವೆಚ್ಚವನ್ನು ಕೇಳಿದ್ದೆವು, ಅಲ್ಟ್ರಾಸೌಂಡ್ ಮಾಡಿದ ನಂತರವಷ್ಟೇ ಶುಲ್ಕದ ಬಗ್ಗೆ ತಿಳಿಸುವುದಾಗಿ ವೈದ್ಯರು ಹೇಳಿದ್ದರು. ಆದರೆ ಅವರು, ಅಲ್ಟ್ರಾಸೌಂಡ್ ನಡೆಸಲಿಲ್ಲ. ಆದರೆ ಐದು ಸಾವಿರ ರೂಪಾಯಿಗಳ ಶುಲ್ಕ ವಿಧಿಸಿದರು. ಅದನ್ನು ನಾವು ಪಾವತಿಸಿದ್ದೇವೆ. ಇದಾದ ಮೇಲೆ ಹಾಸಿಗೆಯ ವೆಚ್ಚವಾಗಿ ನಾಲ್ಕು ಸಾವಿರ ರೂಪಾಯಿ ಕೇಳಿದರು.

    ಆದರೆ ನಮ್ಮ ಬಳಿ ಅಷ್ಟೊಂದು ಹಣವಿರಲಿಲ್ಲ. ಅದನ್ನು ಕೊಡಲು ನಮ್ಮಿಂದ ಸಾಧ್ಯವಿಲ್ಲ ಎಂದಾಗ ಸಿಬ್ಬಂದಿ ನಮ್ಮನ್ನು ಥಳಿಸಿದ್ದಾರೆ ಎಂದು ಖಾನ್‌ ಆರೋಪಿಸಿದ್ದಾರೆ. ಆದರೆ ಶುಲ್ಕ ವಿಧಿಸುವಂತೆ ಕೇಳಿದಾಗ ಅವರೇ ನಮ್ಮ ಮೇಲೆ ಹಲ್ಲೆ ನಡೆಸಿರುವುದಾಗಿ ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ.
    ಸದ್ಯ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ. (ಏಜೆನ್ಸೀಸ್‌)

    ತಲೆನೋವಾಗಿರುವ ಶಶಿಕಲಾ ಬಿಡುಗಡೆ- ಫೋನ್‌ಕಾಲ್‌ಗಳಿಗೆ ಪೊಲೀಸರು ಸುಸ್ತೋ ಸುಸ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts