More

    ಭದ್ರತೆಗೆ ಅರೆಸೇನಾ ಪಡೆ ನಿಯೋಜನೆ

    ಲಿಂಗಸುಗೂರು: ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಸ್ಟರಿಂಗ್ ಕಾರ್ಯ ನಡೆಯಿತು.

    ಸಿಬ್ಬಂದಿ ಕಂಟ್ರೋಲ್ ಯೂನಿಟ್, ಬ್ಯಾಲೆಟ್ ಯೂನಿಟ್, ವಿವಿ ಪ್ಯಾಟ್, ಆರೋಗ್ಯ ಕಿಟ್ ಸೇರಿ ಇತರ ಸಲಕರಣೆಗಳನ್ನು ತೆಗೆದುಕೊಂದು ಮತಗಟ್ಟೆಗೆ ತೆರಳಿದರು. ಮತಗಟ್ಟೆಗಳಿಗೆ ತೆರಳಲು 42 ಬಸ್, ಏಳು ಶಾಲಾ ವಾಹನಗಳು, 26 ಕ್ರೂಸರ್ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸ್ ಭದ್ರತೆಯೊಂದಿಗೆ ಸಿಬ್ಬಂದಿ ಮತಗಟ್ಟೆಗೆ ತೆರಳಿದರು.

    ತಾಲೂಕಿನಲ್ಲಿ 285 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಈ ಪೈಕಿ 59 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಲಿಂಗಸುಗೂರು ವಿಧಾನಸಭಾ ಕ್ಷೇತ್ರದಲ್ಲಿ 1,30,718 ಪುರುಷ, 1,33,633 ಮಹಿಳಾ ಮತದಾರರು, ಇತರ ಒಂಬತ್ತು ಸೇರಿ ಒಟ್ಟು 2,64,360 ಮತದಾರರಿದ್ದಾರೆ. ಪ್ರತಿ ಬೂತ್‌ಗೆ ತಲಾ ಒಬ್ಬ ಪಿಆರ್‌ಒ, ಎಪಿಆರ್‌ಒ, ಇಬ್ಬರು ಪಿಒ ಮತ್ತು ಒಬ್ಬರು ಡಿ ದರ್ಜೆಸಿಬ್ಬಂದಿ ನಿಯೋಜಿಸಲಾಗಿದೆ.

    ಒಬ್ಬ ಡಿವೈಎಸ್‌ಪಿ, ನಾಲ್ವರು ಸಿಪಿಐ, 15 ಪಿಎಸ್‌ಐ, 332 ಸಿವಿಲ್ ಕಾನ್‌ಸ್ಟೇಬಲ್ ಹಾಗೂ ಹೋಮ್ ಗಾರ್ಡ್, 40 ಸಿಆರ್‌ಪಿಎಫ್ ಸಿಬ್ಬಂದಿ ನಿಯೋಜಿಸಲಾಗಿದೆ. ಕೆಎಸ್‌ಆರ್‌ಪಿ ಮತ್ತು ಡಿಎಆರ್ ಸಿಬ್ಬಂದಿಯನ್ನೂ ಭದ್ರತೆ ನಿಯೋಜಿಸಲಾಗಿದೆ. ಸೂಕ್ಷ್ಮ ಮತಗಟ್ಟೆಗಳಲ್ಲಿ ಸಿಆರ್‌ಪಿಎಫ್ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts