More

    ಮುಂಬೈ ಮಳೆಗೆ ಬಲಿಯಾದವರ ಸಂಖ್ಯೆ 164ಕ್ಕೆ ಏರಿಕೆ; ಇನ್ನೂ ಸಿಕ್ಕಿಲ್ಲ 100 ಮಂದಿಯ ಸುಳಿವು

    ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ಮಳೆಯ ಆರ್ಭಟಕ್ಕೆ ಸಿಲುಕಿ ಸಾವನ್ನಪ್ಪಿದವರ ಸಂಖ್ಯೆ ಸೋಮವಾರದಂದು 264ಕ್ಕೆ ಏರಿಕೆಯಾಗಿದೆ. ಇನ್ನೂ ನೂರಕ್ಕೂ ಅಧಿಕ ಮಂದಿಯ ಸುಳಿವು ಸಿಕ್ಕಿಲ್ಲ ಎನ್ನಲಾಗಿದೆ.

    ಇಂದು ರಾಯಗಢದಲ್ಲಿ 11 ಹಾಗೂ ವಾರ್ಧಾ ಹಾಗೂ ಅಕೋಲಾದಲ್ಲಿ ತಲಾ ಎರಡು ಶವಗಳು ಸಿಕ್ಕಿವೆ. ನಗರದಲ್ಲಿ ಈವರೆಗೆ 2,29,074 ಜನರನ್ನು ಸುರಕ್ಚಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಇದುವರೆಗೆ ರಾಯಗಢ ಜಿಲ್ಲೆಯಲ್ಲಿ 71, ಸತಾರದಲ್ಲಿ 41, ರತ್ನಾಗಿರಿಯಲ್ಲಿ 21, ಥಾಣೆಯಲ್ಲಿ 12, ಕೊಲ್ಹಾಪುರದಲ್ಲಿ ಏಳು, ಮುಂಬೈನಲ್ಲಿ ನಾಲ್ಕು, ಸಿಂಧುದುರ್ಗ್, ಪುಣೆ, ವಾರ್ಧಾ ಮತ್ತು ಅಕೋಲಾದಲ್ಲಿ ತಲಾ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಸರ್ಕಾರವು ತಿಳಿಸಿದೆ.

    ಅಲ್ಲದೆ 56 ಮಂದಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ರಾಯಗಢದಲ್ಲಿ 53, ಸತಾರಾದಲ್ಲಿ 27, ರತ್ನಗಿರಿಯಲ್ಲಿ 14, ಥಾಣೆಯಲ್ಲಿ ನಾಲ್ಕು, ಸಿಂಧುದುರ್ಗ್ ಮತ್ತು ಕೊಲ್ಹಾಪುರಗಳಲ್ಲಿ ತಲಾ ಒಬ್ಬರು ಕಾಣೆಯಾಗಿರುವುದಾಗಿ ಹೇಳಲಾಗಿದೆ.

    ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೋಮವಾರ ಸಾಂಗ್ಲಿ ಜಿಲ್ಲೆಯ ವಿವಿಧ ಹಳ್ಳಿಗಳಿಗೆ ಪ್ರವಾಸ ಬೆಳೆಸಿ, ಪ್ರವಾಹ ಪೀಡಿತ ಜನರೊಂದಿಗೆ ಸಂವಹನ ನಡೆಸಿದರು ಮತ್ತು ಅವರಿಗೆ ಪುನರ್ವಸತಿ ಮತ್ತು ರಾಜ್ಯ ಸರ್ಕಾರದ ಎಲ್ಲ ಸಹಾಯದ ಭರವಸೆ ನೀಡಿದರು.
    ಕೊಂಕಣ ಪ್ರದೇಶದ ರತ್ನಾಗಿರಿ ಜಿಲ್ಲೆಯಲ್ಲಿ ತೀವ್ರ ಪ್ರವಾಹದ ಸ್ಥಳವಾದ ಚಿಪ್ಲುನ್‌ಗೆ ಭಾನುವಾರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭೇಟಿ ನೀಡಿ, ಅಲ್ಲಿನ ನಿವಾಸಿಗಳು, ಉದ್ಯಮಿಗಳು ಮತ್ತು ಅಂಗಡಿಯವರೊಂದಿಗೆ ಸಂವಾದ ನಡೆಸಿದರು. ಈ ಪ್ರದೇಶದಲ್ಲಿ ಸಾಮಾನ್ಯ ಸ್ಥಿತಿಯನ್ನು ಪುನಃಸ್ಥಾಪಿಸಲು ರಾಜ್ಯ ಸರ್ಕಾರದಿಂದ ಎಲ್ಲ ಸಹಾಯವನ್ನು ಮಾಡುವ ಅವರು ಭರವಸೆಯನ್ನು ಅವರು ನೀಡಿದರು. (ಏಜೆನ್ಸೀಸ್)

    ಮಗನ ಬೆಡ್ ಕ್ಲೀನ್ ಮಾಡಲು ಬಂದ ಅಮ್ಮನಿಗೆ ಶಾಕ್! ಅಯ್ಯಯ್ಯೋ ಇಲ್ಲಿ ನೋಡಿ ಎಂದು ವಿಡಿಯೋ ಹಂಚಿಕೊಂಡ ಮಹಿಳೆ

    ಇದು ಶಿವಮೊಗ್ಗ ಕೌತುಕ! ಅತಿ ಹೆಚ್ಚು ಸಿಎಂ ಕೊಟ್ರೂ ಎಲ್ಲರ ಅಧಿಕಾರವೂ ಅರ್ಧಚಂದ್ರ, ಇದೆಂಥ ಕಂಟಕ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts