More

    ಚಿತ್ರೀಕರಣ ಮುಗಿಸಿ 16 ಕೆಜಿ ತೂಕದ ಕುಂಬಳಕಾಯಿ ಒಡೆದ ‘ಸಾಲ್ಟ್’ ತಂಡ!

    ಬೆಂಗಳೂರು: ಸಾಮಾನ್ಯವಾಗಿ ಸಿನಿಮಾದ ಚಿತ್ರೀಕರಣದ ಕೊನೆ ದಿನದಂದು ಕುಂಬಳಕಾಯಿ ಒಡೆಯುವ ಪದ್ದತಿ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ. ಇದರಲ್ಲಿ ವಿಶೇಷತೆ ಏನೆಂದು ಕೇಳಬಹುದು. ಹೊಸಬರ ’ಸಾಲ್ಟ್’ ಎನ್ನುವ ಚಿತ್ರತಂಡವು ವಿಶೇಷ ರೀತಿಯ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ. ಅದೇನೆಂದರೆ ಗರಿಷ್ಟ ಸುಮಾರು 16 ಕೆ.ಜಿ ತೂಕದ ಕುಂಬಳಕಾಯಿಯನ್ನು ಇಬ್ಬರು ಸೇರಿಕೊಂಡು ಒಡೆದಿದ್ದಾರೆ.

    ಇದನ್ನೂ ಓದಿ: ಆರ್​ಆರ್​ಆರ್​ ಬಿಡುಗಡೆ: ರಾಜಮೌಳಿ ವಿರುದ್ಧ ಬೇಸರ ವ್ಯಕ್ತಪಡಿಸಿದ ಬೋನಿ …

    ಇದರ ಕುರಿತು ಸಂಭ್ರಮ ಹಂಚಿಕೊಳ್ಳುವ ನಿರ್ಮಾಪಕಿ ಶಾಲಿನಿ.ಎಂ, ನಮ್ಮ ಚಿತ್ರದ ಶೀರ್ಷಿಕೆ ವಿನೂತನವಾಗಿದೆ. ಅದರಂತೆ ಏನಾದರೂ ಹೊಸ ರೀತಿ ಪ್ರಯೋಗ ಮಾಡಬೇಕೆಂಬ ಆಸೆ ಇತ್ತು. ಇಲ್ಲಿಯವರೆವಿಗೂ ಯಾರೂ ನೋಡಿರದ ಬೃಹದಾಕಾರದ ಕುಂಬಳಕಾಯಿ ಒಡೆದರೆ ಹೇಗಿರುತ್ತದೆಂದು ತಂಡದೊಂದಿಗೆ ಚರ್ಚಿಸಲಾಯಿತು. ಎಲ್ಲರೂ ಚೆನ್ನಾಗಿದೆ ಅಂತ ಹುರಿದುಂಬಿಸಿದರು. ಕೊನೆಗೆ ಹುಡುಗು ಹೊಸದುರ್ಗದ ರೈತ ರಾಜು ಅವಳಿಪಾಳ್ಯ ಅವರ ಬಳಿಯಲ್ಲಿದ್ದ ಕುಂಬಳಕಾಯಿಯನ್ನು ತಂದು ಒಡೆಯಲಾಯಿತು ಎನ್ನುತ್ತಾರೆ.

    ಚಿತ್ರೀಕರಣ ಮುಗಿಸಿ 16 ಕೆಜಿ ತೂಕದ ಕುಂಬಳಕಾಯಿ ಒಡೆದ 'ಸಾಲ್ಟ್' ತಂಡ!ಅಡುಗೆಗೆ ಉಪ್ಪು ಎಷ್ಟು ಮುಖ್ಯವೋ, ಜೀವನದಲ್ಲಿ ಸಾಲ್ಟ್ ಅವಶ್ಯಕವೆಂದು ಸಾರುವ ಕತೆ ಇದಾಗಿದೆ. ರಚನೆ, ನಿರ್ದೇಶನ ಮಾಡಿರುವ ಭರತ್‌ನಂದ ಬಣ್ಣ ಹಚ್ಚಿದ್ದು ಅವರೊಂದಿಗೆ ಚೇತನ್‌ಕುಮಾರ್, ಚಂದ್ರು ಛತ್ರಪತಿ, ಸತೀಶ್‌ ಮಳವಳ್ಳಿ ನಾಯಕರುಗಳು. ತಾರಗಣದಲ್ಲಿ ಬಾಲರಾಜ್‌ವಾಡಿ, ಸಂದೀಪ್, ವಿಜಯಶ್ರೀ ಕಲಬುರಗಿ, ಯಶಸ್ವಿನಿ ಶೆಟ್ಟಿ, ರಶ್ಮಿತ ಗೌಡ, ಸುರ್ಯೋದಯ್‌ ಪೆರಂಪಳ್ಳಿ, ಚಕ್ರವರ್ತಿ ದಾವಣಗೆರೆ, ಹರ್ಷ ಮುಂತಾದವರು ಬಣ್ಣ ಹಚ್ಚಿದ್ದಾರೆ.

    ಇದನ್ನೂ ಓದಿ: ಮದುವೆ ಆದ್ಮೇಲೆ ಎಲ್ಲರೂ ದಪ್ಪ ಆಗ್ತಾರೆ, ನಾನು ಬಹಳ ಸಣ್ಣಗಾಗಿದ್ದೀನಿ ಅಲ್ವಾ’

    ರಾಘವೇಂದ್ರ ಕಾಮತ್ ಸಾಹಿತ್ಯದ ನಾಲ್ಕು ಹಾಡುಗಳಿಗೆ ಯಲಸ್ಟಿನ್- ಯಧುನಂದನ್ ಜಂಟಿಯಾಗಿ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಸಂತೋಷ್‌ ದಯಾಲನ್, ಸಂಕಲನ ವಿನಯ್‌ಕುಮಾರ, ನೃತ್ಯ ಮದುಸುಧನ್, ಸಂಭಾಷಣೆ ಸತೀಶ್‌ ಮಳವಳ್ಳಿ ಅವರದಾಗಿದೆ. ಬೆಂಗಳೂರು ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ. ರಾಜರತ್ನ ಸ್ಟುಡಿಯೋ ಮೂಲಕ ಸಿದ್ದಗೊಂಡಿರುವ ಚಿತ್ರವು ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬಿಜಿಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts