More

    ಅನವಶ್ಯಕ ಅಲೆದಾಟಕ್ಕೆ ಲಾಠಿ ಬ್ರೇಕ್

    ವಿಜಯವಾಣಿ ಸುದ್ದಿಜಾಲ ಸವಣೂರ

    ಲಾಕ್​ಡೌನ್ ದಿಕ್ಕರಿಸಿ ಅನವಶ್ಯಕವಾಗಿ ಅಲೆದಾಡು ತ್ತಿದ್ದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿ 150ಕ್ಕೂ ಹೆಚ್ಚು ಬೈಕ್​ಗಳನ್ನು ಸೀಜ್ ಮಾಡಿದ್ದಾರೆ.

    ಪಟ್ಟಣದಲ್ಲಿ ಲಾಕ್​ಡೌನ್ ಮತ್ತಷ್ಟು ಬಿಗಿಗೊಳಿಸಿರುವ ಪೊಲೀಸ್ ಇಲಾಖೆ ಶುಕ್ರವಾರ ಹಾಗೂ ಶನಿವಾರ ಜನರು ಬೀದಿಗೆ ಬರದಂತೆ ಕಟ್ಟಪ್ಪಣೆ ಹೊರಡಿಸಿದ್ದಾರೆ. ಆದೇಶ ಮೀರಿ ಹೊರ ಬಂದವರಿಗೆ ಲಾಠಿ ಏಟು ನೀಡಿ ಬೈಕ್ ಸೀಜ್ ಮಾಡುತ್ತಿದ್ದಾರೆ.

    ಬೆಳಗ್ಗೆ 10ರವರೆಗೆ ಮಾತ್ರ ದಿನಸಿ ಖರೀದಿಗೆ ಅವಕಾಶ ಕಲ್ಪಿಸಿರುವ ತಾಲೂಕು ಆಡಳಿತ ಹಾಗೂ ಪೊಲೀಸರು ನಿಯಮ ಉಲ್ಲಂಘಿಸುವವರ ಮೇಲೆ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.

    ಸೀಜ್ ಮಾಡಿರುವ ವಾಹನಗಳನ್ನು ಲಾಕ್​ಡೌನ್ ನಂತರ ದಂಡ ಕಟ್ಟಿಸಿಕೊಂಡು ಬಿಡುಗಡೆಗೊಳಿಸಲಾಗುವುದು ಎಂದು ಸಿಪಿಐ ಶಶಿಧರ ಜಿ.ಎಂ. ತಿಳಿಸಿದ್ದಾರೆ.

    ವಾಹನ ಬಿಡುಗಡೆಗೆ ನಾಯಕರ ದುಂಬಾಲು: ಅನವಶ್ಯಕವಾಗಿ ಅಲೆದಾಡುತ್ತಿದ್ದವರ ಬೈಕ್ ಸೀಜ್ ಮಾಡಿರುವ ಹಿನ್ನೆಲೆಯಲ್ಲಿ ರಾಜಕೀಯ ನಾಯಕರು ಫೋನ್ ಕರೆ ಮಾಡಿ ತಮ್ಮ ಹುಡುಗರ ಬೈಕ್ ಬಿಟ್ಟುಕಳುಹಿಸಿ ಎಂದು ದುಂಬಾಲು ಬಿದ್ದಿರುವುದು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಆದರೆ, ಸಿಪಿಐ ಶಶಿಧರ ಜಿ.ಎಂ. ಇದ್ಯಾವುದಕ್ಕೂ ತಲೆ ಕೆಡಸಿಕೊಳ್ಳದೆ, ಲಾಕ್​ಡೌನ್ ನಂತರ ದಂಡ ಕಟ್ಟಿಸಿಕೊಂಡು ಬಿಡುವುದಾಗಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

    ಬೈಕ್​ಗಳ ಹಾವಳಿ ಬಂದ್: ಪಟ್ಟಣದಲ್ಲಿ ಬೈಕ್ ಸೀಜ್ ಮಾಡುತ್ತಿರುವ ವಿಷಯ ಹರಡುತ್ತಿದ್ದಂತೆ ಅನವಶ್ಯಕವಾಗಿ ಬೈಕ್​ನಲ್ಲಿ ರಸ್ತೆಗಿಳಿಯುವ ಪಡ್ಡೆ ಯುವಕರು ತಣ್ಣಗಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts