More

    ಚುನಾವಣಾ ಫಲಿತಾಂಶದಂದು ಬೆಂಗಳೂರು ನಗರದಾದ್ಯಂತ 144 ಸೆಕ್ಷನ್ ಜಾರಿ

    ಬೆಂಗಳೂರು: ಮೇ13ರಂದು ಚುನಾವಣಾ ಫಲಿತಾಂಶ ಹೊರಬೀಳುವ ಹಿನ್ನೆಲೆ ಬೆಂಗಳೂರು ನಗರದಾದ್ಯಂತ 144 ಸೆಕ್ಷನ್ ಜಾರಿ ಮಾಡಲಾಗಿದೆ. ಶನಿವಾರ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆವರೆಗೂ ನಿಯಮ ಜಾರಿಯಲ್ಲಿರಲಿದೆ.

    ಗುಪ್ತವಾರ್ತೆ ಮಾಹಿತಿ ಹಿನ್ನೆಲೆ ನಗರ ಪೊಲೀಸ್ ಆಯುಕ್ತರು ಕ್ರಮಕ್ಕೆ ಮುಂದಾಗಿದ್ದಾರೆ. ಮತ ಎಣಿಕೆ ಕೇಂದ್ರ ಸೇರಿ ಬೆಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿ ಮಾಡಿಲಾಗುತ್ತಿದೆ. ಮತಗಟ್ಟೆಗಳ ಬಳಿ 5 ಅಥವಾ ಅದಕ್ಕಿಂತ ಹೆಚ್ಚು ಜನರ ಗುಂಪು ಸೇರುವುದನ್ನು ನಿಷೇಧಿಸಲಾಗುತ್ತಿದೆ.

    ಇದನ್ನೂ ಓದಿ: ಸೈಕ್ಲೋನ್‌ ಎಫೆಕ್ಟ್; ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಮಳೆ

    ಮದುವೆ ಹಾಗೂ ಶವಸಂಸ್ಕಾರವನ್ನು ಹೊರತುಪಡಿಸಿ ಉಳಿದೆಲ್ಲ ಕಾರ್ಯಕ್ರಮಕ್ಕೂ ಪ್ರತಿಬಂಧಕಾಜ್ಞೆ ಅನ್ವಯ ಆಗಲಿದೆ. ನಿಯದಂತೆ ಯಾವುದೇ ಮಾರಾಕಾಸ್ತ್ರಗಳನ್ನು ಕೊಂಡೊಯ್ಯುವುದು, ಪಟಾಕಿಯಂತಹ ಸ್ಫೋಟಕ ವಸ್ತುಗಳ ಸಾಗಾಟ, ಪಟಾಕಿ ಹೊಡೆಯುವುದನ್ನು ನಿಷೇಧಿಸಲಾಗಿದೆ. ಜತೆಗೆ ಪ್ರತಿಕೃತಿ ಪ್ರದರ್ಶನ, ದಹನ, ಬಹಿರಂಗ ಘೋಷಣೆ ಕೂಗುವುದು, ಸಂಗೀತ ನುಡಿಸುವುದು, ಸನ್ನೆ ಮಾಡುವುದು, ಭಿತ್ತಿ ಪತ್ರ ಪ್ರದರ್ಶನವನ್ನು ಕೂಡ ನಿಷೇಧ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts