More

    ಕೋಳಿಶೆಡ್​ನಲ್ಲಿ ಬಚ್ಚಿಟ್ಟಿದ್ರು 1,352 ಕೆಜಿ ಗಾಂಜಾ, ಇದರ ಬೆಲೆ ಕೇಳಿದ್ರೆ ಶಾಕ್​ ಆಗ್ತೀರಿ!

    ಬೆಂಗಳೂರು: ಶೇಷಾದ್ರಿಪುರಂ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕೋಳಿಶೆಡ್​ನ ಅಂಡರ್​ಗ್ರೌಂಡ್​ನಲ್ಲಿ ಬಚ್ಚಿಟ್ಟಿದ್ದ ಬರೋಬ್ಬರಿ 1,352 ಕೆಜಿ ಗಾಂಜಾವನ್ನು ಜಪ್ತಿ ಮಾಡಿದ್ದಾರೆ.

    ಗಾಂಜಾ ವಶಪಡಿಸಿಕೊಂಡ ಪ್ರಕರಣದಲ್ಲಿ ರಾಜ್ಯದ ಇತಿಹಾಸದಲ್ಲೇ ಇದು ಬಹುದೊಡ್ಡ ಬೇಟೆ ಎನ್ನಲಾಗುತ್ತಿದ್ದು, ಇಡೀ ರಾಜ್ಯಕ್ಕೆ ಈ ಕೋಳಿಶೆಡ್​ನಿಂದಲೇ ಗಾಂಜಾ ಸರಬರಾಜು ಆಗುತ್ತಿತ್ತು ಎಂಬ ಆತಂಕಕಾರಿ ವಿಷಯವೂ ಬಯಲಾಗಿದೆ.

    ಇದನ್ನೂ ಓದಿರಿ ನಾನು ಚೆಂಡು ಹೂವಿನ ಗಿಡವನ್ನೇ ಗಾಂಜಾ ಎಂದುಕೊಂಡಿದ್ದೆ; ಸಿ.ಟಿ.ರವಿ

    1,352ಕ್ಕೂ ಹೆಚ್ಚು ಕೆಜಿ ಗಾಂಜಾ ಸಿಕ್ಕಿದ್ದು ಕಲಬುರಗಿಯ ಲಕ್ಷ್ಮಣ್​ ನಾಯಕ್​ ತಾಂಡಾದಲ್ಲಿನ ಕೋಳಿಶಡ್​ನಲ್ಲಿ. ಒಡಿಶಾ ಮೂಲಕ ಕಲಬುರಗಿಗೆ ಗಾಂಜಾ ಸರಬರಾಜು ಆಗುತ್ತಿತ್ತು.

    ಕೋಳಿಶೆಡ್​ನಲ್ಲಿ ಬಚ್ಚಿಟ್ಟಿದ್ರು 1,352 ಕೆಜಿ ಗಾಂಜಾ, ಇದರ ಬೆಲೆ ಕೇಳಿದ್ರೆ ಶಾಕ್​ ಆಗ್ತೀರಿ!
    ಕೋಳಿಶೆಡ್​ನಲ್ಲಿ ಸಿಕ್ಕ ಗಾಂಜಾ

    ಡ್ರಗ್ಸ್​ ವಿರುದ್ಧ ಸಮರದಲ್ಲಿ ಕಾರ್ಯಾಚರಣೆ ಮುಂದುವರಿಸಿರುವ ಪೊಲೀಸರು ಬೆಂಗಳೂರಿನಲ್ಲಿ ಗಾಂಜಾ ಮಾರುತ್ತಿದ್ದ ಆಟೋ ಚಾಲಕನ ಮಾಹಿತಿ ಆಧರಿಸಿ ಕಾರ್ಯಾಚರಣೆ ಕೈಗೊಂಡಿದ್ದ ಕೇಂದ್ರ ವಿಭಾಗದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ, 13 ಕ್ವಿಂಟಾಲ್ ಗಾಂಜಾ ಪತ್ತೆಹಚ್ಚಿದ್ದಾರೆ.

    ಬೆಂಗಳೂರಿನ ಗಾಯತ್ರಿನಗರದ ಆಟೋಚಾಲಕ ಜ್ಞಾನಶೇಖರ್, ವಿಜಯಪುರದ ಸಿದ್ದುನಾಥ್, ಬೀದರ್ ಮೂಲದ ನಾಗನಾಥ್, ಕಲಬುರಗಿಯ ಚಂದ್ರಕಾಂತ್ ಬಂಧಿತರು.
    ಖಚಿತ ಮಾಹಿತಿ ಮೇರೆಗೆ ಕಲಬುರಗಿಯ ಕೋಳಿಶಡ್​ ಮೇಲೆ ದಾಳಿ ನಡೆಸಿದಾಗ ಸುಮಾರು 6 ಕೋಟಿ ರೂ. ಮೌಲ್ಯದ ಗಾಂಜಾ ಪತ್ತೆಯಾಗಿದೆ.

    ರಾಜ್ಯದ ಇತಿಹಾಸದಲ್ಲೇ ಅತೀದೊಡ್ಡ ಗಾಂಜಾ ಬೇಟೆ!

    ರಾಜ್ಯದ ಇತಿಹಾಸದಲ್ಲೇ ಅತೀದೊಡ್ಡ ಗಾಂಜಾ ಬೇಟೆ!ಕಲಬುರಗಿ ಜಿಲ್ಲೆಯ ಕೋಳಿಶೆಡ್​ನಲ್ಲಿ ಅಡಗಿಸಿಟ್ಟಿದ್ದ ಬರೋಬ್ಬರಿ 1,200 ಕೆಜಿ ಗಾಂಜಾ ಜತೆಗೆ ಈ ಕೇಸ್​ನಲ್ಲಿ ಒಟ್ಟು 1352 ಕೆಜಿ ಗಾಂಜಾವನ್ನು ಬೆಂಗಳೂರು ಪೊಲೀಸರು ಪತ್ತೆಹಚ್ಚಿದ್ದು, ಈ ಸಂಬಂಧ ನಾಲ್ವರು ಆರೋಗಳನ್ನು ಬಂಧಿಸಿದ್ದಾರೆ. ಜಪ್ತಿಯಾದ ಗಾಂಜಾ ಸುಮಾರು 6 ಕೋಟಿ ರೂ.ಮೌಲ್ಯದ್ದು. (ಹೆಚ್ಚಿನ ಮಾಹಿತಿಗೆ ಕೆಳಗಿನ ಲಿಂಕ್​ ಒತ್ತಿ)https://bit.ly/3bM1IPT#Cannabis #Kalaburgi #Poultry #352kg #Seized

    Posted by Vijayavani on Thursday, September 10, 2020

    video/ ಕೋಳಿ ಶೆಡ್​ಗೆ ಒಳಹೊಕ್ಕ ಪೊಲೀಸರೇ ದಂಗಾದ್ರು… 1,352 ಕೆಜಿ ಗಾಂಜಾ ರಹಸ್ಯ ಇಲ್ಲಿದೆ

    ರೈತನ ಜಮೀನು ಪಡೆದು ಬರೋಬ್ಬರಿ ನಾಲ್ಕೂವರೆ ಎಕರೆಯಲ್ಲಿ ಗಾಂಜಾ ಬೆಳೆದ ದುಷ್ಕರ್ಮಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts