More

    13ರಂದು ಬೆಳಗ್ಗೆ 8 ರಿಂದ ಮತಎಣಿಕೆ ಆರಂಭ


    ಯಾದಗಿರಿ: ರಾಜ್ಯ ವಿಧಾನಸಭಾ ಚುನಾವಣೆ ಮತಎಣಿಕೆ ಕಾರ್ಯ ಮೇ.13ರಂದು ಬೆಳಗ್ಗೆ 8ಗಂಟೆಗೆ ನಗರದ ಸಕರ್ಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಕಾರಿಯೂ ಆದ ಜಿಲ್ಲಾಕಾರಿ ಸ್ನೇಹಲ್ ಆರ್., ತಿಳಿಸಿದರು.
    2018ರ ಚುನಾವಣೆಯಲ್ಲಿ ಶೇ.65.87 ಮತದಾನವಾಗಿದ್ದು, ಈ ಬಾರಿ 68.79 ರಷ್ಟಾಗಿದ್ದು, ಶೇ.3ರಷ್ಟು ಹೆಚ್ಚಳವಾಗಿದೆ. ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳ ಮತಎಣಿಕೆ ಕಾಲೇಜಿನ ಆವರಣದಲ್ಲಿ ಏಕಕಾಲಕ್ಕೆ ಆರಂಭಿಸಲಾಗುತ್ತಿದೆ. ಈ ಕಾರ್ಯಕ್ಕೆ ಜಿಲ್ಲಾಡಳಿತದಿಂದ 64 ಜನ ಎಣಿಕೆ ಮೇಲ್ವಿಚಾರಕರು, 64 ಜನ ಸಹಾಯಕರನ್ನು ನಿಯೋಜಿಸಲಾಗಿದ್ದು, 72 ಜನ ಮೈಕ್ರೋ ಆಬ್ಜರ್ವರ್ಗಳನ್ನು ಕೇಂದ್ರಗಳಿಗೆ ನಿಯೋಜಿಸಲಾಗಿದೆ. ಈ ಬಗ್ಗೆ ಎಲ್ಲರಿಗೂ ಈಗಾಗಲೇ ತರಬೇತಿ ಸಹ ನೀಡಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
    ಮತಎಣಿಕೆ ಸಿಬ್ಬಂದಿ ರ್ಯಾಂಡಮೈಜೇಷನ್ ಮಾಡಲಾಗಿದ್ದು, 8 ಭದ್ರತಾ ಕೊಣೆಗಳನ್ನು ಸ್ಥಾಪಿಸಲಾಗಿದೆ. 4 ಎಣಿಕೆ ವೀಕ್ಷಕರ ಕೊಠಡಿಗಳು ಇರಲಿವೆ. ಅಲ್ಲದೆ ಮತಎಣಿಕೆಗಾಗಿ 7 ಕೋಣೆಗಳನ್ನು ಗುರುತಿಸಲಾಗಿದ್ದು, ಪ್ರತಿ ಕೋಣೆಯಲ್ಲಿ 16 ಟೇಬಲ್ಗಳನ್ನು ಹಾಕಲಾಗಿದೆ. ಕಾಲೇಜಿನ ಆವರಣದಲ್ಲಿ ಮಾಧ್ಯಮ ಕೇಂದ್ರ ನಿಮರ್ಿಸಲಾಗಿದೆ. ಎಣಿಕೆ ಕೇಂದ್ರದಲ್ಲಿ ಸಿಸಿ ಟಿವಿ ಅಳವಡಿಸಲಾಗಿದ್ದು, ಕ್ಷಣಕ್ಷಣದ ಫಲಿತಾಂಶವನ್ನು ತಿಳಿಸಲು ಅಚ್ಚುಕಟ್ಟಾದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.
    ಬೇಸಿಗೆ ಹಿನ್ನೆಲೆಯಲ್ಲಿ ಮತಎಣಿಕೆ ಕೇಂದ್ರದಲ್ಲಿ ಶುದ್ಧ ಕುಡಿಯುವ ನೀರು, ಶೌಚಗೃಹ, ನಿರಂತರ ವಿದ್ಯುತ್, ಅಗ್ನಿಶಾಮಕ ದಳ ಹಾಗೂ 500 ಮತಎಣಿಕೆ ಸಿಬ್ಬಂದಿಗೆ 1ರಂತೆ ಮೆಡಿಕಲ್ ಕ್ಯಾಂಪ್ ವ್ಯವಸ್ಥೆ ಅಲ್ಲದೆ, ಅಕಾರಿ, ಸಿಬ್ಬಂದಿಗೆ ಊಟದ ವ್ಯವಸ್ಥೆ ಸಹ ಇರಲಿದೆ ಎಂದು ಹೇಳಿದರು.

    ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಡಾ.ಸಿ.ಬಿ.ವೇದಮೂತರ್ಿ, ಚುನಾವಣಾ ತಹಸೀಲ್ದಾರ್ ಸಂತೋಷಿರಾಣಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts