More

    12,514 ಹೊಸ ಪ್ರಕರಣಗಳು; ಭಾರತದಲ್ಲಿ ಇಳಿಯುತ್ತಿದೆ ಕರೊನಾ ಸೋಂಕು

    ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 12,514 ಹೊಸ ಕರೊನಾ ಪ್ರಕರಣಗಳು ವರದಿಯಾಗಿದ್ದು, 251 ಜನರು ಕರೊನಾದಿಂದಾಗಿ ಸಾವಪ್ಪಿದ್ದಾರೆ. ನಿತ್ಯಪ್ರಕರಣಗಳ ಸಂಖ್ಯೆ ಕ್ರಮೇಣ ಇಳಿಮುಖವಾಗುತ್ತಿದ್ದು, ನಿನ್ನೆಯ ಸಂಖ್ಯೆಗಿಂತ ಇಂದು ಶೇಕಡ 2.4 ರಷ್ಟು ಇಳಿಕೆ ಕಂಡುಬಂದಿದೆ.

    ಮತ್ತೊಂದು ಸಕಾರಾತ್ಮಕ ಅಂಶವೆಂದರೆ ನಿನ್ನೆಯ ದಿನ ಸೋಂಕಿನ ಸಂಖ್ಯೆಗಿಂತ ಚೇತರಿಕೆಯ ಸಂಖ್ಯೆ ಹೆಚ್ಚಾಗಿದೆ. ಒಟ್ಟು 12,718 ಜನ ಸೋಂಕಿತರು ಒಂದೇ ದಿನದಲ್ಲಿ ಗುಣಮುಖರಾಗಿದ್ದಾರೆ. ದೇಶದ ಸಕ್ರಿಯ ಪ್ರಕರಣಗಳ ಸಂಖ್ಯೆ 1,58,817 ಆಗಿದ್ದು, 8 ತಿಂಗಳಲ್ಲಿ(248 ದಿನಗಳಲ್ಲಿ) ಇದು ಅತ್ಯಂತ ಕಡಿಮೆ ಮಟ್ಟದಲ್ಲಿದೆ.

    ಇದನ್ನೂ ಓದಿ: ಗುಬ್ಬಿ ಮೇಲೆ ‘ಸಿದ್ದಾಸ್ತ್ರ’: ತುಮಕೂರು ಜಿಲ್ಲಾ ರಾಜಕೀಯದಲ್ಲಿ ಕುತೂಹಲ

    ಭಾರತದ ಡೈಲಿ ಪಾಸಿಟಿವಿಟಿ ರೇಟ್​ ಶೇಕಡ 1.42 ರಷ್ಟಿದೆ. ಮಾರ್ಚ್​ 2020 ರಿಂದ ಈವರೆಗೆ ದೇಶಾದ್ಯಂತ 3,42,85,814 ಕರೊನಾ ಸೋಂಕು ಪ್ರಕರಣಗಳು ದಾಖಲಾಗಿದ್ದು, ಒಟ್ಟು ಕರೊನಾ ಸಾವುಗಳ ಸಂಖ್ಯೆ 4,58,437 ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯದ ವರದಿ ತಿಳಿಸಿದೆ. (ಏಜೆನ್ಸೀಸ್)

    ರಾಜ್ಯದ 11 ಜನ ಪೊಲೀಸರಿಗೆ ‘ಸ್ಪೆಷಲ್ ಆಪರೇಷನ್ ಅವಾರ್ಡ್’; ಉಗ್ರರ ಬಂಧನಕ್ಕೆ ವಿಶೇಷ ಪದಕ

    ಜಿಮ್​, ಫಿಟ್ನೆಸ್​ ಸೆಂಟರ್​ಗಳಿಗೆ ಮಾರ್ಗಸೂಚಿ ರಚನೆ: ಆರೋಗ್ಯ ಸಚಿವ ಸುಧಾಕರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts