More

    ಯೋಗಿ ಸರ್ಕಾರದಲ್ಲಿ 6,126 ಎನ್‌ಕೌಂಟರ್‌: ಸತ್ತ ಕ್ರಿಮಿನಲ್ಸ್‌, ಬಲಿಯಾದ ಪೊಲೀಸರೆಷ್ಟು ಗೊತ್ತಾ?

    ಲಖನೌ: ಪೊಲೀಸ್‌ ಇಲಾಖೆಯ ಮಾಹಿತಿ ಪ್ರಕಾರ, ಕಳೆದ ಮೂರು ವರ್ಷಗಳಲ್ಲಿ ಉತ್ತರ ಪ್ರದೇಶ 6,126 ಎನ್‌ಕೌಂಟರ್‌ಗಳು ನಡೆದಿವೆ.
    ಈ ಎನ್‌ಕೌಂಟರ್‌ಗಳಲ್ಲಿ 122 ಅಪರಾಧಿಗಳು ಹತರಾಗಿದ್ದರೆ, 13 ಮಂದಿ ಪೊಲೀಸರು ಪ್ರಾಣ ಕಳೆದುಕೊಂಡಿದ್ದಾರೆ.

    ಉತ್ತರ ಪ್ರದೇಶ ಪೊಲೀಸ್‌ ಇಲಾಖೆಯ ಕಾನೂನು ಸುವ್ಯವಸ್ಥೆಯ ಡಿ.ಜಿ. ಪ್ರಶಾಂತ್‌ ಕುಮಾರ್ ಮಾಧ್ಯಮವೊಂದಕ್ಕೆ ಈ ಮಾಹಿತಿಯನ್ನು ನೀಡಿದ್ದಾರೆ. ರಾಜ್ಯದಲ್ಲಿ 2017ರ ಮಾರ್ಚ್‌ 20ರಿಂದ‌ 2020ರ ಜುಲೈ 10ರ ನಡುವಿನ ಅವಧಿಯಲ್ಲಿ ನಡೆದಿರುವ ಎನ್‌ಕೌಂಟರ್‌ಗಳು ಇವು. ಇದರಲ್ಲಿ 2,296 ಆರೋಪಿಗಳು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

    ಈ ಅವಧಿಯಲ್ಲಿ 13,361 ಮಂದಿಯನ್ನು ಬಂಧಿಸಲಾಗಿದ್ದು, ಎನ್‌ಕೌಂಟರ್‌ಗಳಲ್ಲಿ 909 ಪೊಲೀಸರು ಗಾಯಗೊಂಡಿದ್ದಾರೆ ಎಂಬ ಮಾಹಿತಿಯನ್ನು ಪ್ರಶಾಂತ್‌ಕುಮಾರ್‌ ನೀಡಿದ್ದಾರೆ.

    ಇದನ್ನೂ ಓದಿ: ಕೇಸರಿ ಬಟ್ಟೆ, ತಿಲಕ ವಿರೋಧಿಸಿ ಮುಸ್ಲಿಂ ವ್ಯಕ್ತಿಯಿಂದ ಥಳಿತ; ಸನ್ಯಾಸಿಯ ಸಾವು!

    ಎಂಟು ಪೊಲೀಸರನ್ನು ಹತ್ಯೆ ಮಾಡಿದ ಕುಖ್ಯಾತ ರೌಡಿ ವಿಕಾಸ್‌ ದುಬೆ ಎನ್‌ಕೌಂಟರ್‌ನಲ್ಲಿ ಮೃತಪಟ್ಟ ನಂತರ ಮಾಧ್ಯಮಗಳು ಕೇಳಿರುವ ಪ್ರಶ್ನೆಗೆ ಅವರು ಈ ಮಾಹಿತಿ ನೀಡಿದ್ದಾರೆ. ಈ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಪ್ರಶಾಂತ್‌ ಕುಮಾರ್‌ ಹೇಳಿದ್ದಾರೆ.

    ಕರೊನಾ: ಭಾರತೀಯ ವಿಜ್ಞಾನ ಸಂಸ್ಥೆಯಿಂದ ಬಂದಿದೆ ಭಯಾನಕ ಮಾಹಿತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts