More

    ಸ್ವಾಮೀಜಿಗಳು ಸಿಎಂ ಯೋಗಿ ಆದಿತ್ಯನಾಥರ ಥರ ಆಗಬಾರದು: ಮುಖ್ಯಮಂತ್ರಿ ಚಂದ್ರು

    ಗದಗ: ‘ಸ್ವಾಮೀಜಿಗಳು ರಾಜಕೀಯ ಮಾಡುವುದಾದರೆ ಕಾವಿ ಬಟ್ಟೆ ಹಾಕಿಕೊಳ್ಳಬಾರದು. ಅವರು ಕಾವಿ ಹಾಕಿಕೊಳ್ಳದೆ ರಾಜಕೀಯ ಮಾಡಿದ್ರೆ ಒಳ್ಳೇದು..’
    – ಹೀಗೆ ಸ್ವಾಮೀಜಿಗಳ ಕುರಿತು ಹೇಳಿಕೆ ನೀಡಿದವರು ಬೇರಾರೂ ಅಲ್ಲ, ಆಮ್​ ಆದ್ಮಿ ಪಕ್ಷದ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು. ಗದಗದಲ್ಲಿ ಮಾತನಾಡಿದ ಅವರು ಇಂದು ಈ ಅನಿಸಿಕೆ ಹಂಚಿಕೊಂಡರು.

    ಇದನ್ನೂ ಓದಿ: ಬೇರೆ ಏನನ್ನಾದರೂ ಬರೆದಿರುವ ನೋಟುಗಳನ್ನು ಸ್ವೀಕರಿಸುವಂತಿಲ್ಲವೇ?: ಇಲ್ಲಿದೆ ಸತ್ಯಾಂಶ

    ನನಗೆ ಸ್ವಾಮೀಜಿಗಳ ಬಗ್ಗೆ ಅಪಾರವಾದ ಗೌರವ ಇದೆ. ಆದರೆ ಸ್ವಾಮೀಜಿಗಳು ಕಾವಿ ಬಟ್ಟೆ ಹಾಕಿಕೊಳ್ಳದೆ ಬಂದು ರಾಜಕೀಯ ಮಾಡಿದ್ರೆ ಒಳ್ಳೆಯದು. ಆ ಬಟ್ಟೆ ಹಾಕಿಕೊಂಡು ಅವರು ರಾಜಕೀಯ ಮಾಡಿದರೆ ಗೌರವ ಇರುವುದಿಲ್ಲ. ಆ ಬಟ್ಟೆಯಲ್ಲಿ ಧಾರ್ಮಿಕ ಚಿಂತನೆ ಮಾಡುವ ಲಕ್ಷಣಗಳು ಇರುತ್ತವೆ ಎಂದು ಮುಖ್ಯಮಂತ್ರಿ ಚಂದ್ರು ಅಭಿಪ್ರಾಯಪಟ್ಟರು.

    ಇದನ್ನೂ ಓದಿ: ಮಂಡ್ಯದಲ್ಲಿ ಭೀಕರ ಮರ್ಡರ್​: ರುಂಡ ಕತ್ತರಿಸಿ, ಶವ ಪೀಸ್ ಪೀಸ್ ಮಾಡಿ ನಾಲೆಗೆಸೆದ ಹಂತಕರು

    ಸ್ವಾಮೀಜಿಗಳು ಎಲ್ಲವನ್ನೂ ಬಿಟ್ಟು ಬರುವುದಾದರೆ ಸರಿ. ಆದರೆ ಅದನ್ನೂ ಇಟ್ಟುಕೊಂಡು ಇದನ್ನೂ ಮಾಡುತ್ತೇವೆ ಎಂದರೆ ದುರುಪಯೋಗ ಆಗುತ್ತದೆ ಎಂಬ ಭಯ ನನ್ನದು. ಮೂಲ ಸಿದ್ಧಾಂತ, ಇನ್ನೊಂದು ಸಿದ್ಧಾಂತ ದುರುಪಯೋಗ ಆಗಬಾರದು. ಕಾವಿ ಬಟ್ಟೆ ತೆಗೆದು, ಧಾರ್ಮಿಕ ವಿಚಾರ ಬಿಟ್ಟು ರಾಜಕೀಯಕ್ಕೆ ಬರಲಿ. ಆದರೆ ಸಿಎಂ ಯೋಗಿ ಆದಿತ್ಯನಾಥರ ಹಾಗಾಗಬಾರದು. ಎಡಬಿಡಂಗಿ ಆಗಬಾರದು ಎಂದು ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.

    ಒಂದೇ ಮನೆಯ ನಾಲ್ವರ ಹತ್ಯೆ; ನಾಲ್ಕು ಕೊಲೆಗಳ ಆರೋಪಿಯ ತಾಯಿ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts