More

    ಸರ್ಕಾರಕ್ಕೆ ಹತ್ತೇ ದಿನಗಳಲ್ಲಿ 1200 ಕೋಟಿ ರೂ. ‘ಕೊಡುಗೆ’ ಕೊಟ್ಟ ಕುಡುಕರು!

    ಬೆಂಗಳೂರು: ‘‘ಮದ್ಯಪಾನ ಮಾಡಿ ಕುಡುಕರು ಬೀಳುವಾಗ ಯಾರೂ ಎತ್ತಲು ಬರೋಲ್ಲ, ಆದರೆ ಕರೊನಾದಿಂದ ಆರ್ಥಿಕತೆ ಬೀಳುವಾಗ ಅದನ್ನು ಎತ್ತಲು ಕುಡುಕರೇ ಬರಬೇಕು…’’ ಎಂಬ ಜೋಕನ್ನು ನೀವು ಈಗಾಗಲೇ ವಾಟ್ಸಾೃಪ್‌ನಲ್ಲಿ ಓದಿ ನಕ್ಕಿರಬಹುದು. ಅದು ಬರೀ ಜೋಕಲ್ಲ, ವಾಸ್ತವವೂ ಹೌದು ಎಂಬುದು ಅಬಕಾರಿ ಇಲಾಖೆ ಗುರುವಾರ ಬಿಡುಗಡೆ ಮಾಡಿರುವ ಅಂಕಿಅಂಶಗಳಿಂದ ದೃಢಪಟ್ಟಿದೆ.

    ಸರ್ಕಾರದ ರಾಜಸ್ವಕ್ಕೆ ಕಳೆದ ಹತ್ತೇ ದಿನಗಳಲ್ಲಿ ಆಂದಾಜು 1,200 ಕೋಟಿ ರೂ. ಅಬಕಾರಿ ಆದಾಯ ಹರಿದು ಬಂದಿದೆ. ಲಾಕ್‌ಡೌನ್ ತೆರವಾದ ಬಳಿಕ ಮೇ 4ರಿಂದ ಮೇ 13ರವರೆಗೆ ನಡೆದ ಮದ್ಯವಹಿವಾಟಿನಲ್ಲಿ ಈ ಆದಾಯ ಬಂದಿದೆ.

    ಮೊದಲ ದಿನ 45 ಕೋಟಿ ರೂ., ಎರಡನೇ ದಿನ 242 ಕೋಟಿ ರೂ., ಮೂರನೇ ದಿನ 231.6 ಕೋಟಿ ರೂ. ಹಾಗೂ ನಾಲ್ಕನೇ ದಿನ 165 ಕೋಟಿ ರೂ. ವಹಿವಾಟು ನಡೆದಿದ್ದರೆ, ನಂತರ ಪ್ರತಿದಿನ ಸರಾಸರಿ 100 ಕೋಟಿ ರೂ.ವರೆಗೆ ವ್ಯಾಪಾರವಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ದನ್ನೂ ಓದಿ  ರಂಜಾನ್ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಬೇಡ ಎಂದ ಮಂತ್ರಿಗಳು: ಸಿಎಂ ಏನು ಮಾಡ್ತಾರೆ?

    ಈ ನಡುವೆ, ಲಾಕ್‌ಡೌನ್ ಸಂದರ್ಭ ಅಬಕಾರಿ ನಿಯಮ ಉಲ್ಲಂಸಿದ್ದ ಆರೋಪದ ಮೇರೆಗೆ ರಾಜ್ಯಾದ್ಯಂತ 113 ಮದ್ಯದಂಗಡಿಗಳ ಪರವಾನಗಿ ಅಮಾನತು ಮಾಡಲಾಗಿದ್ದು, 4 ಮದ್ಯದಂಗಡಿಗಳ ಪರವಾನಗಿ ರದ್ದುಗೊಳಿಸಲಾಗಿದೆ.

    ರಾಜ್ಯದಲ್ಲಿ ಅಕ್ರಮವಾಗಿ ಮದ್ಯ ಮಾರುತ್ತಿದ್ದ 21 ಸಾವಿರ ಕಡೆ ನಡೆದ ದಾಳಿಯಲ್ಲಿ 1,989 ಪ್ರಕರಣಗಳನ್ನು ದಾಖಲಿಸಿದ್ದು, 471 ಮಂದಿ ಬಂಧಿಸಿ, 56,941 ಲೀಟರ್ ಐಎಂಎಲ್ ಲಿಕ್ಕರ್, 38, 966 ಲೀಟರ್ ಬಿಯರ್, ವಿವಿಧ ಮದ್ಯ ರಾಸಾಯನಿಕ ವಸ್ತುಗಳು ಸೇರಿ 1,47,307 ಲೀಟರ್ ಮದ್ಯ ಜಪ್ತಿ ಮಾಡಲಾಗಿದೆ.

    ಇದೇ ವೇಳೆ 610 ದ್ವಿಚಕ್ರ, 29 ನಾಲ್ಕು ಚಕ್ರ, 17 ಹೆಚ್ಚು ಹೆವಿ ವಾಹನಗಳು ಸೇರಿ ಒಟ್ಟು 656 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಾ 23ರಿಂದ ಮೇ 5ರವರೆಗೆ ರಾಜ್ಯಾದ್ಯಂತ ದಾಳಿ ನಡೆಸಿ ಈ ಮೇಲಿನ ಕ್ರಮಕೈಗೊಳ್ಳಲಾಗಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ದೇವೇಗೌಡ ವಿರೋಧ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts