More

    12 ಕಡೆ ಕಳ್ಳತನ, ಮೂವರು ಕಳ್ಳರ ಸೆರೆ

    ಬೆಳಗಾವಿ: ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ 12 ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶನಿವಾರ ಮೂವರನ್ನು ಬಂಧಿಸಿದ್ದು, ಅವರಿಂದ 17 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

    ಮಹಾರಾಷ್ಟ್ರ ಕೊಲ್ಲಾಪುರದ ಜವಾಹರ ನಗರದ ನಿವಾಸಿ ವಿಶಾಲ ನರಸಿಂಗ್ ಶೇರಖಾನೆ, ಸಂಬಾಜಿ ನಗರದ ಗಿರೀಶ ಚಂದ್ರಕಾಂತ ಪೋತದಾರ ಹಾಗೂ ಅರಬಾವಿಯ ಸಂತೋಷ ಗಂಗಾರಾಮ ವಡ್ಡರ (46) ಬಂಧಿತ. ಬಂಧಿತರಿಂದ 17,24,355 ರೂ.ಮೌಲ್ಯದ 361.05 ಗ್ರಾಂ ಚಿನ್ನಾಭರಣ 5,542 ರೂ.ಮೌಲ್ಯದ 785 ಗ್ರಾಂ ಬೆಳ್ಳಿ ಆಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ 80 ಸಾವಿರ ರೂ.ಮೌಲ್ಯದ ಕಾರು ವಶಪಡಿಸಿಕೊಂಡಿದ್ದು, ಬಂಧಿತರನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.

    ತನಿಖೆಗೆ ತಂಡ ರಚನೆ: ಯಮಕನಮರಡಿ ಠಾಣೆ ವ್ಯಾಪ್ತಿಯ ಪಾಶ್ಚಾಪುರದ ದೇವಸ್ಥಾನದಲ್ಲಿ ಕಳ್ಳತನ ನಡೆದಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಕುರಿತು ಎಸ್ಪಿ ಲಕ್ಷ್ಮಣ ನಿಂಬರಗಿ ಅವರು, ಪಿಎಸ್‌ಐ ರಮೇಶ ಪಾಟೀಲ ನೇತೃತ್ವದಲ್ಲಿ ತಂಡ ರಚಿಸಿ ತನಿಖೆಗೆ ಆದೇಶಿಸಿದ್ದರು. ಕಾರ್ಯಪ್ರವೃತ್ತರಾದ ತಂಡವು ಫೆ.19ರಂದು ಬೆಳಗಿನ ಜಾವ ಜಿನರಾಳ ಕ್ರಾಸ್ ಹತ್ತಿರ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಸಂತೋಷ ವಡ್ಡರ ಎಂಬಾತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ತನ್ನ ಸ್ನೇಹಿತ ವಿಶಾಲ ಶೇರಖಾನೆ ಜತೆ ಕಳ್ಳತನ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದನು. ಆ ನಂತರ ಗಿರೀಶ ಪೋತದಾರನನ್ನು ಬಂಧಿಸಿ ಆತನಿಂದ ಮೊಬೈಲ್ ಹಾಗೂ ಚಿನ್ನದ ಸರ ವಶಪಡಿಸಿಕೊಂಡಿದ್ದರು. ತಲೆಮರೆಸಿಕೊಂಡಿದ್ದ ವಿಶಾಲ ಶೇರಖಾನೆಯನ್ನು ಹಿಡಕಲ್ ಡ್ಯಾಂ ಹತ್ತಿರ ಶುಕ್ರವಾರ ಕಾರ್ಯಾಚರಣೆ ನಡೆಸಿ, ಬಂಧಿಸಿದ್ದಾರೆ. ಪೇದೆಗಳಾದ ಬಿ.ವಿ. ನೆರ್ಲಿ, ವಿಠ್ಠಲ ನಾಯಕ, ಎಲ್.ವೈ. ಕಿಲಾಗರಿ, ಮಹೇಶ ಕರಗುಪ್ಪಿ, ಆರ್.ಆರ್. ಗಿಡ್ಡಪ್ಪಗೋಳ,
    ಎಸ್.ಎ. ಶೇಖ್ ಹಾಗೂ ಮೈಲಾರ ಬೆಣ್ಣಿ ಕಾರ್ಯಾಚರಣೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts