More

    ಕಳೆದ ೨೪ ಗಂಟೆಯಲ್ಲಿ ೧೨.೪೪ ಮಿ.ಮೀ. ಮಳೆ

    ಮಡಿಕೇರಿ: ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ೮.೩೦ಕ್ಕೆ ಕೊನೆಗೊಂಡಂತೆ ಕಳೆದ ೨೪ ಗಂಟೆ ಅವಧಿಯಲ್ಲಿ ಸರಾಸರಿ ೧೭.೬೦ ಮಿ.ಮೀ. ಮಳೆಯಾಗಿದೆ.


    ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೨೮.೧೩ ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ ಸರಾಸರಿ ೮.೨೦ ಮಿ.ಮೀ., ಪೊನ್ನಂಪೇಟೆ ತಾಲೂಕಿನಲ್ಲಿ ಸರಾಸರಿ ೨೦.೭೦ ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ ೯.೭೫ ಮಿ.ಮೀ., ಕುಶಾಲನಗರ ತಾಲೂಕಿನಲ್ಲಿ ಸರಾಸರಿ ೨೧.೨೦ ಮಿ.ಮೀ. ಮಳೆಯಾಗಿದೆ.


    ಜಿಲ್ಲೆಯಲ್ಲಿ ಹೋಬಳಿವಾರುಗಳಾದ ಮಡಿಕೇರಿ ಕಸಬಾ ೨೪.೮೦, ನಾಪೋಕ್ಲು ೩೨.೮೦, ಸಂಪಾಜೆ ೨೩.೫೦, ಭಾಗಮಂಡಲ ೩೧.೪೦, ವಿರಾಜಪೇಟೆ ಕಸಬಾ ೧೩.೪೦, ಅಮ್ಮತ್ತಿ ೩, ಹುದಿಕೇರಿ ೧೮, ಶ್ರೀಮಂಗಲ ೨೬.೮೦, ಪೊನ್ನಂಪೇಟೆ ೮, ಬಾಳೆಲೆ ೩೦, ಸೋಮವಾರಪೇಟೆ ಕಸಬಾ ೧೧, ಶನಿವಾರಸಂತೆ ೫, ಶಾಂತಳ್ಳಿ ೯, ಕೊಡ್ಲಿಪೇಟೆ ೧೪, ಕುಶಾಲನಗರ ೧೭.೨೦, ಸುಂಟಿಕೊಪ್ಪ ೨೫.೨೦ ಮಿ.ಮೀ.ಮಳೆಯಾಗಿದೆ.


    ಹಾರಂಗಿ ಜಲಾಶಯದ ನೀರಿನ ಗರಿಷ್ಠ ಮಟ್ಟ ೨,೮೫೯ ಅಡಿಗಳಿದ್ದು, ಬುಧವಾರ ೨೮೨೩.೪೩ ಅಡಿ ನೀರು ಸಂಗ್ರಹವಾಗಿದೆ. ನೀರಿನ ಒಳಹರಿವು ೪೬೦ ಕ್ಯೂಸೆಕ್ ಇದ್ದರೆ, ಹೊರ ಹರಿವು ನದಿಗೆ ೨೦೦ ಕ್ಯೂಸೆಕ್ ನೀರು ಬಿಡಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts