More

    ಟಿಎಂಸಿ, ಕಾಂಗ್ರೆಸ್​, ಕಮ್ಯುನಿಷ್ಟರ 11 ಶಾಸಕರು ಸೇರಿ 13 ನಾಯಕರು ಬಿಜೆಪಿ ಸೇರ್ಪಡೆ; ಇದಿನ್ನೂ ಶುರು ಎಂದ ಅಮಿತ್​ ಷಾ!

    ಕೋಲ್ಕತ: ಪಶ್ಚಿಮ ಬಂಗಾಳದಲ್ಲಿ ಚುನಾವಣೆಯ ಕಾವು ಹೆಚ್ಚುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರು ಇಂದು ರಾಜ್ಯಕ್ಕೆ ಭೇಟಿ ನೀಡಿದ್ದು, ಮಮತಾ ಬ್ಯಾನರ್ಜಿ ಅವರ ಸರ್ಕಾರಕ್ಕೆ ಬಿಗ್​ ಶಾಕ್​ ಎದುರಾಗಿದೆ. ಟಿಎಂಸಿ, ಕಾಂಗ್ರೆಸ್​ ಮತ್ತು ಕಮ್ಯುನಿಷ್ಟ್​ ಪಕ್ಷದ 11 ಶಾಸಕರು, ಓರ್ವ ಸಂಸದ ಪಕ್ಷ ತ್ಯಜಿಸಿ, ಬಿಜೆಪಿ ಸೇರಿಕೊಂಡಿದ್ದಾರೆ.

    ಇದನ್ನೂ ಓದಿ: ಮದುವೆಯಾಗಿ ಎರಡೇ ತಿಂಗಳಲ್ಲಿ ಗರ್ಭಿಣಿಯಾಗಿದ್ದು ಹೇಗೆ? ಹೊಟ್ಟೆ ಹಿಂದಿನ ಸತ್ಯ ಬಿಚ್ಚಿಟ್ಟ ಗಾಯಕಿ!

    ಟಿಎಂಸಿಯ ಅತ್ಯಂತ ಪ್ರಭಾವಿ ನಾಯಕ ಸುವೇಂದು ಅಧಿಕಾರಿಯನ್ನು ಅಮಿತ್​ ಷಾ ಅವರು ಪಕ್ಷಕ್ಕೆ ಬರ ಮಾಡಿಕೊಂಡರು. ಅವರ ಜತೆ ಶಾಸಕರಾದ ತಪಸಿ ಮೊಂಡಾಲ್​, ಅಶೋಕ್ ದಿಂಡಾ, ಸುದೀಪ್ ಮುಖರ್ಜಿ, ಸೈಕತ್ ಪಂಜ, ಶಿಲ್ಭದ್ರ ದತ್ತ, ದೀಪಾಲಿ ಬಿಸ್ವಾಸ್, ಸುಕ್ರಾ ಮುಂಡಾ, ಶ್ಯಾಮಪ್ಡಾ ಮುಖರ್ಜಿ, ಬಿಸ್ವಾಜಿತ್ ಕುಂದು ಮತ್ತು ಬನಸ್ರಿ ಮೈಟಿ ಬಿಜೆಪಿ ಸೇರಿದ್ದಾರೆ. 11 ಶಾಸಕರ ಜತೆ ಪುರ್ಬಾ ಬುರ್ದ್ವಾನ್‌ನ ಟಿಎಂಸಿ ಸಂಸದ ಸುನಿಲ್ ಮೊಂಡಾಲ್ ಮತ್ತು ಮಾಜಿ ಸಂಸದ ದಸರಥ್ ಟಿರ್ಕಿ ಬಿಜೆಪಿ ಸೇರಿದ್ದಾರೆ.

    ನಾಯಕರುಗಳನ್ನು ಬಿಜೆಪಿಗೆ ಬರಮಾಡಿಕೊಂಡು ಮಾತನಾಡಿದ ಅಮಿತ್​ ಷಾ ಅವರು, ‘ದೀದೀ, ನೀವು ಬೇರೆಯವರು ಪಕ್ಷಾಂತರ ಆಗುವ ಬಗ್ಗೆ ಮಾತನಾಡುತ್ತೀರಿ, ಆದರೆ ನೀವೂ ಕೂಡ ಕಾಂಗ್ರೆಸ್​ನ್ನು ತ್ಯಜಿಸಿ ಬಂದವರು ಎನ್ನುವುದನ್ನೇ ಮರೆತಿದ್ದೀರಿ. ಇವರಷ್ಟೇ ಅಲ್ಲ, ಬಿಜೆಪಿ ಸೇರಲು ಸಾವಿರಾರು ಜನರು ಕಾಯುತ್ತಿದ್ದಾರೆ. ಇದು ಕೇವಲ ಆರಂಭ ಮಾತ್ರ. ರಾಜ್ಯದಲ್ಲಿ ಉದ್ಯೋಗ ಇಲ್ಲದೆ ಒದ್ದಾಡುತ್ತಿರುವ ಸಾವಿರಾರು ಯುವಕರ ಕಡೆ ಗಮನ ಹರಿಸಲು ನೀವು ಸಿದ್ಧರಿಲ್ಲ. ನೀವು ಕೇವಲ ನಿಮ್ಮ ಅಳಿಯನ ಕಡೆ ಮಾತ್ರ ಗಮನ ಹರಿಸುತ್ತಿದ್ದೀರಿ’ ಎಂದು ಹೇಳಿದ್ದಾರೆ.

    ಇದನ್ನೂ ಓದಿ: 21 ವರ್ಷ ರೇಪ್​ ಮಾಡಿ ಕೊನೆಗೂ ಕೊಂದೇ ಬಿಟ್ಟ ಪಾಗಲ್​ ಪ್ರೇಮಿ! ಅಮ್ಮನ ಬಾಯಿಯಿಂದಲೇ ಹೊರಬಿತ್ತು ಮಗಳ ನೋವಿನ ಕಥೆ

    ಟಿಎಂಸಿ ಮುಂದಿನ ಚುನಾವಣೆಯಲ್ಲಿ ನಂಬರ್​ ಒನ್​ ಆಗಿರುವುದಿಲ್ಲ, ನಂಬರ್​ ಎರಡಕ್ಕೆ ಇಳಿಯುತ್ತದೆ. ಬಿಜೆಪಿ ನಂಬರ್​ ಒನ್​ ಸ್ಥಾನಕ್ಕೆ ಏರಲಿದೆ ಎಂದು ಬಿಜೆಪಿ ಸೇರಿರುವ ಸುವೇಂದು ಅಧಿಕಾರಿ ಹೇಳಿದ್ದಾರೆ. (ಏಜೆನ್ಸೀಸ್​)

    ವಿಡಿಯೋ ಕಾಲ್ ಮೂಲಕವೇ ಯುವಕನ ಬಟ್ಟೆ ಬಿಚ್ಚಿಸಿದ ಚಾಲಾಕಿ ಹುಡುಗಿಯರು!

    ಹಸೆಮಣೆ ಏರಬೇಕಾದವಳು ಆಸ್ಪತ್ರೆ ಸೇರಿದಳು! ಆಸ್ಪತ್ರೆಯ ಹಾಸಿಗೆಯಲ್ಲೇ ನಡೆಯಿತು ಮದುವೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts