More

    ಕರೊನಾ ಸೋಂಕನ್ನು ಗೆದ್ದ ಶತಾಯುಷಿ ದಂಪತಿ; ಹೂವಿನ ಹಾರ ಹಾಕಿ ಸ್ವಾಗತಿಸಿದ ಗ್ರಾಮಸ್ಥರು

    ಬಳ್ಳಾರಿ: ಕೋವಿಡ್ ಸೋಂಕು ವಯಸ್ಸಾದವರನ್ನು ಗಂಭೀರವಾಗಿ ಬಾಧಿಸಲಿದ್ದು, ಅವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಅವರಿಗೆ ಪ್ರಾಣಾಪಾಯ ಹೆಚ್ಚು ಎಂಬುದು ಕರೊನಾ ಮೊದಲನೆಯ ಅಲೆಯ ಕಾಲದಿಂದಲೂ ಹೇಳಿಕೊಂಡು ಬರಲಾಗುತ್ತಿದೆ. ಆದರೆ ಕರೊನಾ ಎರಡನೆ ಅಲೆ ವಯಸ್ಸಾದವರು, ಯುವಕರು ಎಂಬ ಭೇದವಿಲ್ಲದೆ ಎಲ್ಲರನ್ನೂ ಬಲಿ ತೆಗೆದುಕೊಳ್ಳುತ್ತಿದೆ. ಈ ನಡುವೆ ಶತಾಯುಷಿ ದಂಪತಿ ಕರೊನಾ ಸೋಂಕನ್ನು ಮಣಿಸಿ ಮನೆಗೆ ಮರಳಿ ಅಚ್ಚರಿ ಮೂಡಿಸಿದ್ದು ಮಾತ್ರವಲ್ಲದೆ, ಉಳಿದವರಲ್ಲಿ ಒಂದು ಆಶಾಭಾವನೆ ಉಂಟಾಗುವಂತೆಯೂ ಮಾಡಿದ್ದಾರೆ.

    ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ತುಂಬರಗುದ್ದಿ ಗ್ರಾಮದ ದಂಪತಿ ಈರಣ್ಣ-ಈರಮ್ಮ ಇಬ್ಬರೂ ಕರೊನಾ ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಪತಿ ಈರಣ್ಣಗೆ 103 ಹಾಗೂ ಪತ್ನಿ ಈರಮ್ಮಗೆ 101 ವಯಸ್ಸಾಗಿರುವುದರಿಂದ ಇಬ್ಬರ ಬಗ್ಗೆಯೂ ಸಂಬಂಧಿಕರಿಗೆ ಆಪ್ತರಿಗೆ ಒಂದು ಆತಂಕವಿತ್ತು.

    ಇದನ್ನೂ ಓದಿ: ಒಂದೇ ಮನೆಯ ನಾಲ್ವರು ಕರೊನಾಗೆ ಬಲಿ; 2- 3 ದಿನಗಳ ಅಂತರದಲ್ಲಿ ಇಬ್ಬಿಬ್ಬರ ಸಾವು!

    ಆದರೆ ಈ ಶತಾಯುಷಿ ಜೋಡಿ ಕರೊನಾ ಸೋಂಕಿನ ವಿರುದ್ಧ ಹೋರಾಡಿ ಚೇತರಿಸಿಕೊಂಡು ಮನೆಗೆ ಮರಳುವ ಮೂಲಕ ಸಂಬಂಧಿಕರು ಮಾತ್ರವಲ್ಲದೆ ಊರವರು ಕೂಡ ನಿಬ್ಬೆರಗಾಗುವಂತೆ ಮಾಡಿದ್ದಾರೆ. ಹೀಗೆ ವಯಸ್ಸು ನೂರು ದಾಟಿದ್ದರೂ ಕರೊನಾ ಸೋಂಕನ್ನು ಹಿಮ್ಮೆಟ್ಟಿಸಿ ಬಂದಿರುವ ಈ ಜೋಡಿಯನ್ನು ಕಂಡು ಖುಷಿಯಾಗಿರುವ ಗ್ರಾಮಸ್ಥರು ಇವರಿಗೆ ಹೂವಿನ ಹಾರ ಹಾಕಿ ಸ್ವಾಗತಿಸಿ ಸಂತೋಷ ವ್ಯಕ್ತಪಡಿಸಿದ್ದಾರೆ.

    ಮದ್ವೆಯಾಗಿ ನಾಲ್ಕೇ ದಿನಗಳಲ್ಲಿ ಕರೊನಾಗೆ ಬಲಿಯಾದ ಯುವತಿ; ಸೋಂಕಿರುವುದು ಆಕೆಯ ಮರಣದ ಬಳಿಕ ಗೊತ್ತಾಯಿತು..!

    ಸತ್ಯ ತಿಳಿಯುವುದು ಹೇಗೆ?; ಫ್ಯಾಕ್ಟ್​ಚೆಕ್​ಗೆ ಇಲ್ಲಿವೆ ಸುಲಭದ ಮಾರ್ಗಗಳು…

    ಟ್ವಿಟರ್​ನಲ್ಲಿ ಉಪೇಂದ್ರಗೆ 1 ಮಿಲಿಯನ್ ಫಾಲೋವರ್ಸ್; ಸ್ಯಾಂಡಲ್​ವುಡ್​​ನಲ್ಲಿ ಗರಿಷ್ಠ ಫಾಲೋವರ್ಸ್​ ಹೊಂದಿರುವ 2ನೇ ನಟ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts