More

    ಆಹಾರ ಪೊಟ್ಟಣದಲ್ಲಿ ಇನ್ಸ್​ಪೆಕ್ಟರ್​ಗೆ ಸಿಕ್ಕ 100 ರೂ. ನೋಟಿನ ಬೆಲೆ ಕೋಟಿಯಂತೆ: ಹೇಗೆಂದು ನೀವೇ ನೋಡಿ!

    ಎರ್ನಾಕುಲಂ (ಕೇರಳ): ಇಲ್ಲಿನ ಥೋಪ್ಪುಂಪಡಿ ಪ್ರದೇಶದಲ್ಲಿನ ಸಮುದ್ರದ ಹೊಡೆತದಿಂದ ನಲುಗಿರುವ ಕರಾವಳಿ ಪ್ರದೇಶದ ಜನರಿಗೆ ಆಹಾರ ಪೊಟ್ಟಣಗಳನ್ನು ವಿತರಣೆ ಮಾಡಿದ ಬಳಿಕ ಉಳಿದ ಪೊಟ್ಟಣಗಳನ್ನು ತೆರೆದ ಕನ್ನಮಲಿ ಠಾಣಾ ಇನ್ಸ್​ಪೆಕ್ಟರ್​ ಶಿಜು ಎಂಬುವರಿಗೆ ಅಚ್ಚರಿಯೊಂದು ಕಾದಿತ್ತು.

    ಕಷ್ಟದಲ್ಲಿರುವ ಜನರಿಗೆ ತಮ್ಮ ಪೊಲೀಸ್​ ಠಾಣೆಯ ಕಡೆಯಿಂದ ನೆರವಿನ ಹಸ್ತ ಚಾಚಿದ ಬಳಿಕ ಇನ್​ಪೆಕ್ಟರ್​ ಶಿಜು ಅವರು ತಮ್ಮ ಠಾಣೆಯಲ್ಲಿ ಉಳಿದ ಆಹಾರ ಪೊಟ್ಟಣಗಳಲ್ಲಿ ಏನಿರಬಹುದೆಂದು ಕುತೂಹಲದಿಂದ ವೀಕ್ಷಿಸಿಸುತ್ತಾರೆ. ಪೊಟ್ಟಣದ ಒಳಗಡೆ ಕವರ್​ನಿಂದ ಸುತ್ತಲ್ಪಟ್ಟ 100 ರೂ. ನೋಟು ನೋಡಿ ಅಚ್ಚರಿಗೊಳ್ಳುತ್ತಾರೆ.

    ಅಂದಹಾಗೆ ಕನ್ನಮಲಿ ಠಾಣಾ ವ್ಯಾಪ್ತಿಯಲ್ಲಿ ಬರುವ ಕುಂಬಲಂಗಿ ಕರಾವಳಿ ಪ್ರದೇಶದ ಜನರು ಭಾರಿ ಮಳೆಯಿಂದ ಸಮುದ್ರ ಅಲೆಯ ಹೊಡೆತಕ್ಕೆ ಸಿಲುಕಿ ಸದ್ಯ ನಿರಾಶ್ರಿತರಾಗಿದ್ದಾರೆ. ತುತ್ತ ಅನ್ನಕ್ಕಾಗಿಯೂ ಪರದಾಡುತ್ತಿರುವ ಅವರಿಗೆ ಠಾಣಾ ವತಿಯಿಂದ ಆಹಾರ ತಯಾರಿಸಿ, ಪ್ಯಾಕ್​ ಮಾಡಿ ಶಿಜು ಹಾಗೂ ಇತರೆ ಸಾರ್ವಜನಿಕ ಅಧಿಕಾರಿಗಳು ಹಂಚಿದ್ದಾರೆ.

    ವಿತರಣೆಯೆಲ್ಲ ಮುಗಿದ ಬಳಿಕ ಕೆಲವು ಪೊಟ್ಟಣಗಳು ಉಳಿದುಕೊಂಡಿದ್ದವು. ಅದರಲ್ಲಿ ಒಂದು ಪೊಟ್ಟಣ ತೆಗೆದು ಶಿಜು ಅವರಿಗೆ ಕವರ್​ನಲ್ಲಿ ಸುರಕ್ಷಿತವಾಗಿ ಸುತ್ತಿಡಲಾಗಿದ್ದ 100 ರೂ. ನೋಟು ಪತ್ತೆಯಾಗುತ್ತದೆ. ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಶಿಜು, “ಈ 100 ರೂ. ನೋಟು ಇದೀಗ ಕೋಟಿ ರೂ. ಮೌಲ್ಯದ್ದಾಗಿದೆ” ಎಂದಿದ್ದಾರೆ.

    ಇನ್ನು ಕರಾವಳಿ ಪ್ರದೇಶದ ಜನರು ಸಮುದ್ರ ಭೀಕರತೆಯಿಂದ ಮನೆ ಬಿಟ್ಟು ಹೊರಬಂದಿದ್ದಾರೆ. ಅಲ್ಲದೆ, ತಮಗೆ ಸಂಬಂಧಿಸಿದ ವಸ್ತುಗಳೆಲ್ಲ ಇದೀಗ ಸಮುದ್ರ ಪಾಲಾಗಿದೆ. ಅನೇಕರನ್ನು ನಿರಾಶ್ರಿತರ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ. ಅವರಿಗಾಗಿ ಸುಮಾರು 3000 ಆಹಾರ ಪೊಟ್ಟಣಗಳಲ್ಲಿ ವಿತರಿಸಲಾಗಿದೆ. ಆದರೆ, ಒಂದು ಪೊಟ್ಟಣದಲ್ಲಿ 100 ರೂ. ನೋಟು ಪತ್ತೆಯಾಗಿದೆ.

    ಪ್ಲಾಸ್ಟಿಕ್​ ಸಮೇತ ನೂರು ರೂಪಾಯಿ ನೋಟಿನ ಫೋಟೋ ಕ್ಲಿಕ್ಕಿಸಿಕೊಂಡ ಶಿಜು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಂಡು ಈ 100 ರೂ. ನೋಟು ಇದೀಗ ಕೋಟಿ ರೂ. ಮೌಲ್ಯದ್ದಾಗಿದೆ ಎಂದು ಬರೆದುಕೊಂಡಿದ್ದಾರೆ. ಈ ಫೋಟೋ ಇದೀಗ ವೈರಲ್​ ಆಗಿದೆ. (ಏಜೆನ್ಸೀಸ್​)

    ಪಡುಬಿದ್ರಿ ಕಡಲ್ಕೊರೆತ, ಪ್ರಾಣಾಪಾಯದಿಂದ ಸಚಿವ ಪಾರು !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts