More

    ತಬ್ಲಿಘಿಗಳ ವಿರುದ್ಧ ದಾಖಲಾಯ್ತು ಕೊಲೆಯತ್ನದ ಕೇಸ್​, ಇಂಡೋನೇಷ್ಯಾದಿಂದ ಇಲ್ಲಿಗೆ ಬಂದು ಮಾಡಿದ್ದೇನು?

    ಮುಂಬೈ: ದೇಶದ ಒಟ್ಟು ಸೋಂಕಿತರ ಪೈಕಿ 4,500ಕ್ಕೂ ಅಧಿಕ ಜನರಿಗೆ ದೆಹಲಿ ನಿಜಾಮುದ್ದೀನ್​ ಮರ್ಕಜ್​ನಲ್ಲಿ ನಡೆದ ತಬ್ಲಿಘಿ ಜಮಾತ್​ನ ನಂಟಿದೆ ಅಥವಾ ಅಲ್ಲಿನ ಸೋಂಕಿತರಿಂದ ವೈರಸ್​ ಅಂಟಿಸಿಕೊಂಡವರಾಗಿದ್ದಾರೆ. ವಿಶೇಷವೆಂದರೆ ಇವರಲ್ಲಿ ವಿದೇಶಿಯರು ಸೇರಿದ್ದಾರೆ.

    ಇವರಿಂದಲೇ 17 ರಾಜ್ಯಗಳಿಗೆ ಸೋಂಕು ಪಸರಿಸುವಂತಾಯ್ತು. ಆರಂಭದಲ್ಲಿ ಇವರನ್ನು ನಿಯಂತ್ರಿಸುವುದು ಆಯಾ ರಾಜ್ಯಗಳಿಗೆ ಸವಾಲಾಗಿಯೇ ಪರಿಣಮಿಸಿತು. ಜತೆಗೆ, ದೆಹಲಿ ಕ್ವಾರಂಟೈನ್​ ಕೇಂದ್ರಗಳಲ್ಲಿದ್ದವರು ಮೆರೆದ ವಿಕೃತಿಗಳಿಂದಾಗಿ ಇವರಿಗೆ ಚಿಕಿತ್ಸೆ ನೀಡಲು ವೈದ್ಯರೇ ಅಂಜಿಕೊಳ್ಳಬೇಕಾಯ್ತು.

    ವಿವಿಧೆಡೆ ಕ್ವಾರಂಟೈನ್​ಗಳಲ್ಲಿದ್ದು, ಸೋಂಕಿತರಾಗಿ ಗುಣಮುಖರಾದರಿಗೆ ಇದೀಗ ಕಾನೂನು ಕ್ರಮದ ಬಿಸಿ ತಟ್ಟುತ್ತಿದೆ. ಅದರಲ್ಲೂ ಮುಂಬೈ ಪೊಲೀಸರು ಇಂಡೋನೇಷ್ಯಾದ 10 ತಬ್ಲಿಘಿಗಳನ್ನು ಬಂಧಿಸಿ ಅವರ ವಿರುದ್ಧ ಕೊಲೆಯತ್ನದ ಕೇಸ್​ ದಾಖಲಿಸಿದ್ದಾರೆ.

    ದೆಹಲಿಯಿಂದ ಮಾ23ರಂದು ಮುಂಬೈಗೆ ಆಗಮಿಸಿದ್ದ ಈ ತಬ್ಲಿಘಿಗಳು ಲಾಕ್​​ಡೌನ್​ ಆದೇಶ ಬಾಂದ್ರಾ ಹಾಗೂ ಧಾರಾವಿಯ ಮಸೀದಿಗಳಿಗೆ ಭೇಟಿ ನೀಡಿದ್ದರು. ಇವರನ್ನು ಬಾಂದ್ರಾದ ಕಟ್ಟಡವೊಂದರಲ್ಲಿ ಪತ್ತೆ ಹಚ್ಚಿ ಕ್ವಾರಂಟೈನ್​ಗೆ ಗುರಿಪಡಿಸಲಾಗಿತ್ತು. ಇವರಲ್ಲಿ ಇಬ್ಬರು ಪುರುಷರಿಗೆ ಸೋಂಕು ಖಚಿತವಾಗಿತ್ತು. ಸೋಂಕು ಇಲ್ಲದ ಆರು ಮಹಿಳೆಯರು ಸೇರಿ 10 ಮಂದಿಯನ್ನು ವಶಕ್ಕೆ ಪಡೆದಿದ್ದರು.

    ಬಾಂದ್ರಾದ ಪ್ಲ್ಯಾಟ್​ನಲ್ಲಿ ಆಶ್ರಯ ಪಡೆಯುವುದಕ್ಕೂ ಮುಂಬೈನ ಮೂರು ಸ್ಥಳಗಳಿಗೆ ತೆರಳಿ ಧರ್ಮ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಇದೀಗ ಇವರಿಗೆ ಆಶ್ರಯ ಕಲ್ಪಿಸಿದ್ದ ವ್ಯಕ್ತಿಗಾಗಿ ಹುಡುಕಾಟ ನಡೆದಿದೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್​ 304, 307, 188 ಹಾಗೂ ಸಾಂಕ್ರಾಮಿಕ ರೋಗ ತಡೆ ಕಾಯ್ದೆ ಅನ್ವಯ ಪ್ರಕರಣ ದಾಖಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಹಬ್ಬಕ್ಕೆ ಎನ್ನುವಂತೆ ಪ್ರತಿವರ್ಷವೂ ಬರುತ್ತಂತೆ ಕರೊನಾ; ಚೀನಾದಿಂದಲೇ ಬಂದಿದೆ ವಾರ್ನಿಂಗ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts