More

    10 ಸಾವಿರ ಸನಿಹಕ್ಕೆ ಕರೊನಾ ಸೋಂಕು

    ಧಾರವಾಡ: ಜಿಲ್ಲೆಯಲ್ಲಿ ಬುಧವಾರ 255 ಕರೊನಾ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ಒಟ್ಟು ಪ್ರಕರಣಗಳ ಸಂಖ್ಯೆ 9921ಕ್ಕೇರಿದೆ. ಕಾಣದ ವೈರಸ್ ಕಾಟಕ್ಕೀಡಾದವರ ಸಂಖ್ಯೆ 10 ಸಾವಿರದ ಗಡಿ ದಾಟುವುದು ಖಾತ್ರಿಯಾಗಿದೆ.

    ತುಸು ಸಮಾಧಾನದ ಸಂಗತಿ ಎಂದರೆ, ಚೇತರಿಸಿಕೊಂಡವರ ಸಂಖ್ಯೆಯೇ ದೊಡ್ಡದಾಗಿದೆ. ಬುಧವಾರ 135 ಜನರಿಗೆ ಗುಣವಾಗಿದೆ. ಇದರಿಂದಾಗಿ, ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ 7113ಕ್ಕೆ ಏರಿದೆ. ಹೀಗಾಗಿ, ಚೇತರಿಕೆ ಪ್ರಮಾಣ ಶೇ. 75ರ ಸಮೀಪಕ್ಕೆ ತಲುಪಿದೆ. 2519 ಪ್ರಕರಣಗಳು ಸಕ್ರಿಯವಾಗಿವೆ. 68 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕರೊನಾದಿಂದ ಮತ್ತೆ 8 ಜನ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 289ಕ್ಕೆ ಜಿಗಿದಿರುವುದು ಅತ್ಯಂತ ಬೇಸರದ ಸಂಗತಿಯಾಗಿದೆ.

    ಬುಧವಾರ ಪತ್ತೆಯಾದ ಪ್ರಕರಣಗಳಲ್ಲಿ ಧಾರವಾಡ ತಾಲೂಕಿನಲ್ಲೇ ಹೆಚ್ಚು ಪ್ರಕರಣಗಳಿವೆ. ಧಾರವಾಡ ನಗರ, ಗ್ರಾಮೀಣ ಸೇರಿ ಅಂದಾಜು 55 ಪ್ರದೇಶಗಳಲ್ಲಿ ಪ್ರಕರಣಗಳು ಪತ್ತೆಯಾಗಿದ್ದರೆ, ಹುಬ್ಬಳ್ಳಿ ನಗರ, ಗ್ರಾಮೀಣ ಸೇರಿ ಅಂದಾಜು 50 ಪ್ರದೇಶಗಳಲ್ಲಿ ಪ್ರಕರಣಗಳು ಪತ್ತೆಯಾಗಿವೆ.

    ಕಲಘಟಗಿ ತಾಲೂಕಿನ ಗಂಜಿಗಟ್ಟಿ, ವಿವೇಕಾನಂದ ನಗರ ಹತ್ತಿರ; ನವಲಗುಂದದ ಗುಡಿಸಾಗರ, ಅಳಗವಾಡಿ, ನವಲಗುಂದ ಓಣಿ, ಶಲವಡಿ ಹುಡೇದಗಡ್ಡಿ ಓಣಿ, ವಗ್ಗರ ಓಣಿ, ಅಂಬೇಡ್ಕರ್ ಓಣಿ; ಕುಂದಗೋಳದ ಕಮಡೊಳ್ಳಿ, ಗುರುವಿನ ಹಳ್ಳಿ, ಹಿರೇಬೂದಿಹಾಳ, ಶಿರೂರ ಗ್ರಾಮದ ರಾಗಿಯವರ ಓಣಿ, ಬು. ಕೊಪ್ಪ, ಮಸಾರಿ ಪ್ಲಾಟ್, ಗುಡಗೇರಿ ಪರ್ವತೇಶ್ವರ ಓಣಿ, ಇಂಗಳಗಿ, ವಾಲ್ಮೀಕಿ ಓಣಿ, ಜನತಾ ಪ್ಲಾಟ್, ಯರಗುಪ್ಪಿ ಗ್ರಾಮದ ಕುಂಬಾರ ಓಣಿ, ಮಾರುಕಟ್ಟೆ ರಸ್ತೆ, ತರ್ಲಘಟ್ಟ ಪ್ಲಾಟ್, ದ್ಯಾವನೂರು ಪೂಜಾರ ಓಣಿ; ಅಣ್ಣಿಗೇರಿಯ ಗಾಂಧಿನಗರ, ಗಣೇಶ ನಗರ, ದ್ಯಾಮವ್ವನ ಗುಡಿ ಓಣಿ, ನಲವಡಿ ಬೀರಪ್ಪ ದೇವಸ್ಥಾನ ಹತ್ತಿರ ಪ್ರಕರಣಗಳು ಪತ್ತೆಯಾಗಿವೆ. ಸುತ್ತಲಿನ ಜಿಲ್ಲೆಗಳ ಹತ್ತಾರು ಪ್ರಕರಣಗಳೂ ಧಾರವಾಡ ಜಿಲ್ಲೆಯ ಆಸ್ಪತ್ರೆಗಳಿಗೆ ದಾಖಲಾಗಿವೆ.

    ಮಾಜಿ ಸಚಿವರಿಗೂ ಕೋವಿಡ್
    ಜಿಲ್ಲೆಯ ಶಾಸಕರು, ಪಾಲಿಕೆ ಮಾಜಿ ಸದಸ್ಯರನ್ನು ಕಾಡಿರುವ ಕರೊನಾ ಇದೀಗ ಹಿಂದಿನ ಸಚಿವರಿಗೂ ಕಾಡಿದೆ. ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೆ ಕರೊನಾ ಸೋಂಕು ತಗುಲಿರುವುದು ಬುಧವಾರ ದೃಢಪಟ್ಟಿದೆ. ಅವರಿಗೆ ಪಾಸಿಟಿವ್ ಬಂದಿದ್ದರೂ ರೋಗ ಲಕ್ಷಣಗಳು ಇಲ್ಲದ ಕಾರಣಕ್ಕೆ ಹೋಮ್ ಐಸೋಲೇಷನ್ ಪಡೆದಿದ್ದಾರೆ ಎನ್ನಲಾಗಿದೆ.

    ಕರೊನಾ ನಿಮೂಲನೆಗೆ ಪ್ರಾರ್ಥನೆ
    ಹುಬ್ಬಳ್ಳಿ:
    ಅಕ್ಕಲಕೋಟೆ ಶ್ರೀ ರೇವಣಸಿದ್ಧೇಶ್ವರ ತೀರ್ಥಕ್ಷೇತ್ರದ ಶಾಖಾಮಠವಾದ ಹಳೇಹುಬ್ಬಳ್ಳಿ ರೇವಣಸಿದ್ಧೇಶ್ವರ ಮಠದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನು ಬುಧವಾರ ವಿಸರ್ಜನೆ ಮಾಡಲಾಯಿತು. ಕುಮಾರಸ್ವಾಮಿ ಹಿರೇಮಠ ಹಾಗೂ ವೀರಸಂಗಪ್ಪ ಸತ್ತಿಗೇರಿ ಪೂಜೆ ನೆರವೇರಿಸಿ, ಕರೊನಾ ನಿಮೂಲನೆ ಯಾಗಲಿ ಎಂದು ಪ್ರಾರ್ಥಿಸಿದರು. ನಾಗೇಶ ದೊಡ್ಮನಿ, ವೀರಣ್ಣ ಮುನ್ನೋಳಿ, ಅನಿಲ ಜಾಧವ, ಸಿದ್ದಪ್ಪ ತೆಗ್ಗಿ, ಮಂಜುನಾಥ ಢಾಲಾಯತರ, ಶ್ರೀದೇವಿ ಮುನ್ನೋಳಿ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts