More

    1 ಕೋಟಿ ರೂ. ಖಾತೆಯಲ್ಲೇ ಬಾಕಿ, ಬಾಲವನ ಪಾರಂಪರಿಕ ತಾಣವಾಗಿ ಅಭಿವೃದ್ಧಿಗೆ ಅನುದಾನ

    ಪುತ್ತೂರು: ಪರ್ಲಡ್ಕದಲ್ಲಿರುವ ಬಾಲವನವನ್ನು ಪಾರಂಪರಿಕ ತಾಣವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಎರಡು ವರ್ಷ ಹಿಂದೆ ರಾಜ್ಯ ಸರ್ಕಾರ ಒಂದು ಕೋಟಿ ರೂ. ಬಿಡುಗಡೆ ಮಾಡಿದ್ದರೂ ವ್ಯಯಿಸಲು ಸಾಧ್ಯವಾಗಿಲ್ಲ.

    ಯೋಜನೆ ಅನುಷ್ಠಾನ ಬಗ್ಗೆ ಚರ್ಚೆಯಲ್ಲೇ ಎರಡು ವರ್ಷ ಕಳೆದಿದೆ. ಈ ನಡುವೆ ಪಾರಂಪರಿಕ ತಾಣವಾಗಿಸಲು ಸಮಗ್ರ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉತ್ಸುಕತೆ ತೋರಿರುವ ಕಾರಣ ಶಾಸಕ ಸಂಜೀವ ಮಠಂದೂರು ಮುತುವರ್ಜಿಯಲ್ಲಿ ಸುಮಾರು 20 ಕೋಟಿ ರೂ.ಗಳ ಮೆಗಾ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ.

    2019ರಲ್ಲಿ ಲೋಕಾರ್ಪಣೆ: ಬಾಲವನ ಪರಿಸರ ಸಮೃದ್ಧವಾಗಿದ್ದು, 5.90 ಎಕರೆ ವಿಸ್ತೀರ್ಣ ಇದೆ. ಇದರಲ್ಲಿ ಕಾರಂತರ ಮನೆ, ಮುದ್ರಣಾಲಯ, ನಾಟ್ಯಾಲಯ, ರಂಗಮಂದಿರ, ವಾಚನಾಲಯಗಳಿದ್ದು, ಕಾರಂತರ ಜ್ಞಾನಪೀಠ ಪ್ರಶಸ್ತಿಯೂ ಇದೆ. ಬಾಲವನದ ಪೂರ್ಣ ಪ್ರದೇಶ ಸರ್ಕಾರ ಖರೀದಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೇತೃತ್ವದಲ್ಲಿ ಸಂರಕ್ಷಿಸಿಕೊಂಡು ಬರಲಾಗುತ್ತಿದೆ. ಕಾರಂತರು ವಾಸಿಸುತ್ತಿದ್ದ ಮನೆ ಶಿಥಿಲಗೊಂಡು ಮಳೆಗಾಲದಲ್ಲಿ ಸೋರಲಾರಂಭಿಸಿದಾಗ 2015ರಲ್ಲಿ ಅಂದಿನ ಸಚಿವೆ ಉಮಾಶ್ರೀ ಮುತುವರ್ಜಿಯಿಂದ ಮನೆಯ ಪುನಶ್ಚೇತನಕ್ಕೆ 29 ಲಕ್ಷ ರೂ. ಬಿಡುಗಡೆಗೊಳಿಸಿ ಅಭಿವೃದ್ಧಿಪಡಿಸಿ 2019ರಲ್ಲಿ ಲೋಕಾರ್ಪಣೆ ಮಾಡಲಾಗಿತ್ತು.

    ಕಾರಂತರ ಕರ್ಮಭೂಮಿ ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧಿ ಪಡೆಯುವ ಪಾರಂಪರಿಕ ತಾಣವಾಗಬೇಕೆಂಬುದು ಸಚಿವ ಕೋಟ ಶ್ರಿನಿವಾಸ ಪೂಜಾರಿ ಅವರ ಕನಸು. ಇದಕ್ಕಾಗಿ ನಾವು ಮೆಗಾ ಯೋಜನೆ ಸಿದ್ಧಪಡಿಸಿದ್ದೇವೆ. ಬಾಲವನ ಅಭಿವೃದ್ಧಿ ಸಮಿತಿ ಕಳೆದ ತಿಂಗಳು ಆನ್‌ಲೈನ್ ಮೂಲಕ ಸಭೆ ನಡೆಸಿ ಈ ಬಗ್ಗೆ ಚರ್ಚಿಸಿದೆ. ಕೋವಿಡ್ ಕಾರಣದಿಂದ ಮುಂದಿನ ಹೆಜ್ಜೆ ಇಡಲು ಸಾಧ್ಯವಾಗಿಲ್ಲ.

    -ಸಂಜೀವ ಮಠಂದೂರು
    ಪುತ್ತೂರು ಶಾಸಕ

    ಕಾರಂತರ ಬಾಲವನವನ್ನು ಹೆರಿಟೇಜ್ ವಿಲೇಜ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಉಸ್ತುವಾರಿ ಸಚಿವರ ಸೂಚನೆಯಂತೆ ಎರಡು ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ತ್ರಿಡಿ ಥಿಯೇಟರ್ ನಿರ್ಮಾಣ, ಕಾರಂತರ ನಾಟ್ಯಶಾಲೆ, ಮುದ್ರಣಾಲಯ, ವಾಚನಾಲಯಗಳ ಅಭಿವೃದ್ಧಿ ಮತ್ತು ಇಡೀ ಪರಿಸರವನ್ನು ಸರ್ವಾಂಗ ಸುಂದರಗೊಳಿಸುವ ಯೋಜನೆ ಅಡಗಿದೆ

    -ಯತೀಶ್ ಉಳ್ಳಾಲ್
    ಪುತ್ತೂರು ಸಹಾಯಕ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts