More

    ಹೊಲಿಗೆ ತರಬೇತಿಯಿಂದ ಆರ್ಥಿಕ ಪ್ರಗತಿ

    ಹಿರೇಬಾಗೇವಾಡಿ: ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡಿದರೆ ಕುಟುಂಬ ನಿರ್ವಹಣೆಯೊಂದಿಗೆ ಆರ್ಥಿಕ ಅಭಿವೃದ್ಧಿ ಕಾಣಲು ಸಹಕಾರಿಯಾಗುತ್ತದೆ ಎಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರದಿಪ ಶೆಟ್ಟಿ ಹೇಳಿದರು.

    ಸಮೀಪದ ಬಸ್ತವಾಡ ಗ್ರಾಮದ ಹಲಗಲಿ ಕಲ್ಮೇಶ್ವರ ದೇವಸ್ಥಾನದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಖಾಸಬಾಗ ಶಾಖೆಯ ಬಿಸಿ ಟ್ರಸ್ಟ್​ ಹಾಗೂ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ಶುಕ್ರವಾರ ಹಮ್ಮಿಕೊಂಡಿದ್ದ ಹೊಲಿಗೆ ತರಬೇತಿ ಶಿಬಿರದ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕೆನರಾ ಬ್ಯಾಂಕ್​ ಗ್ರಾಮೀಣ ತರಬೇತಿ ಸಂಸ್ಥೆಯ ನಿರ್ದೇಶಕ ಸಿದ್ದನಗೌಡ ಮಾತನಾಡಿ, ಉದ್ಯೋಗ ತರಬೇತಿ ಕೇಂದ್ರದಲ್ಲಿ ಗ್ರಾಮೀಣ ಜನರಿಗೆ ಉಚಿತ ಹಾಗೂ ವಸತಿ ಸಹಿತ ತರಬೇತಿ ನೀಡಲಾಗುತ್ತದೆ ಎಂದರು.

    ತಾಪಂ ಸದಸ್ಯ ಮಹಾವೀರ ಬಸ್ತವಾಡ ಅಧ್ಯತೆ ವಹಿಸಿದ್ದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮಾಜಿ ಅಧ್ಯ ಚಾರುಕೀರ್ತಿ ಸೈಬಣ್ಣವರ, ರಾಜು ಬೆಲ್ಲದ, ರಾಜು ಮಿರ್ಜಣ್ಣವರ, ವೀರನಗೌಡ, ಜ್ಞಾನವಿಕಾಸ ಸಮನ್ವಯಾ-ಧಿಕಾರಿ ಗಂಗೂಬಾಯಿ ಜಗತಾಪ, ವಲಯ ಮೇಲ್ವಿಚಾರಕಿ ರೇಣುಕಾ ಅಂಬಿಗೇರ, ಜ್ಞಾನವಿಕಾಸ ಸದಸ್ಯರು, ಸೇವಾ ಪ್ರತಿನಿಧಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts