More

    ಹೊನ್ನಲ್ದಾಮ್ಮ, ಚಿಕ್ಕಮ್ಮದೇವಿ ರಥೋತ್ಸವ

    ಅರಸೀಕೆರೆ: ಪಟ್ಟಣ ಹೊರವಲಯದಲ್ಲಿರುವ ಜಾಜೂರು ಗ್ರಾಮದ ಹೊನ್ನಲ್ದಾಮ್ಮ ಹಾಗೂ ಚಿಕ್ಕಮ್ಮದೇವಿಯ ರಥೋತ್ಸವ ಇತ್ತೀಚೆಗೆ ಸಂಭ್ರಮದಿಂದ ಜರುಗಿತು.


    ದೇವಿಯ ಉತ್ಸವಮೂರ್ತಿ ಮೆರವಣಿಗೆ, ಉತ್ಸವ ನಡೆಸಲಾಯಿತು. ಮಹಾಮಂಗಳಾರತಿ ನೆರವೇರಿಸಿ ರಥದಲ್ಲಿ ಹೊನ್ನಲ್ದಾಮ್ಮ ಹಾಗೂ ಚಿಕ್ಕಮ್ಮ ದೇವಿಯ ಉತ್ಸವಮೂರ್ತಿ ಕೂರಿಸಿ ರಥದ ಚಕ್ರಗಳಿಗೆ ಈಡುಗಾಯಿ ಒಡೆದು ಮಂಗಳಾರತಿ ಸಲ್ಲಿಸುತ್ತಿದ್ದಂತೆ ಭಕ್ತರು ರಥ ಎಳೆದು ಸಂಭ್ರಮಿಸಿದರು. ನಾಗತಿಹಳ್ಳಿ, ಹೊಸಳ್ಳಿ, ಭೈರನಾಯ್ಕನಹಳ್ಳಿ, ಕಲ್ಲನಾಯ್ಕನಹಳ್ಳಿ, ಕಾಟೀಕೆರೆ ಸೇರಿ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಭಕ್ತರು ಭಾಗಿಯಾಗಿದ್ದರು. ಚಲುವರಾಯ ಹಾಗೂ ಧೂತರಾಯಸ್ವಾಮಿ ಕುಣಿತ ಎಲ್ಲರ ಮನಸೂರೆಗೊಂಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts