More

    ಹೊಟ್ಯಾಳಪುರ ಅಂಗನವಾಡಿ ಶೆಡ್ ತೆರವಿಗೆ ವಿರೋಧ: ಅರಣ್ಯಾಧಿಕಾರಿಗಳ ಜತೆ ಗ್ರಾಮಸ್ಥರ ಮಾತಿನ ಚಕಮಕಿ

    ರಿಪ್ಪನ್‌ಪೇಟೆ: ಸಮೀಪದ ಅರಸಾಳು ಗ್ರಾಪಂ ವ್ಯಾಪ್ತಿಯ ಹೊಟ್ಯಾಳಪುರ ಗ್ರಾಮದ ಮಿನಿ ಅಂಗನವಾಡಿ ನಿರ್ಮಾಣಕ್ಕೆ ಅರಣ್ಯಾಧಿಕಾರಿಗಳು ವಿರೋಧದ ಹಿನ್ನ್ನೆಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
    ನಾಲ್ಕು ವರ್ಷಗಳ ಹಿಂದೆ ತಮ್ಮಡಿಕೊಪ್ಪ ಮಜರೆ ಹೊಟ್ಯಾಳಪುರ ಮಿನಿ ಅಂಗನವಾಡಿಯಲ್ಲಿ ಮಗುವೊಂದಕ್ಕೆ ಹಾವು ಕಡಿದು ಮೃತಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಸುಸಜ್ಜಿತ ಮಿನಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿತ್ತು. ಗ್ರಾಮಸ್ಥರು ಮೂಗುಡ್ತಿ ವನ್ಯಜೀವಿ ವಲಯ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳಾವಕಾಶ ಕೋರಿ ಮನವಿ ಸಲ್ಲಿಸಿದ್ದರು. ಅಧಿಕಾರಿಗಳು ಏನೂ ಕ್ರಮಕೈಗೊಳ್ಳದೆ ಇದ್ದ ಕಾರಣ ಏಕಾಏಕಿ ಗ್ರಾಮಸ್ಥರು ಅರಣ್ಯ ಭೂಮಿಯಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿದ್ದರು.
    ಮೂಗೂಡ್ತಿ ವನ್ಯಜೀವಿ ವಿಭಾಗ ವಲಯ ಅರಣ್ಯಾಧಿಕಾರಿ ಅಫ್ರೀನಾಜ್ ಶುಂಠಿ ಅವರು ಸಿಬ್ಬಂದಿ ಜತೆ ಶೆಡ್ ತೆರವುಗೊಳಿಸಲು ಮುಂದಾದಾಗ ಅರಸಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಉಮಾಕರ ನೇತೃತ್ವದಲ್ಲಿ ತಡೆದ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
    ಗ್ರಾಪಂ ಅಧ್ಯಕ್ಷ ಉಮಾಕರ ಸಿಬ್ಬಂದಿಗೆ ತೆರವುಗೊಳಿಸದಂತೆ ಸೂಚಿಸಿದಾಗ, ಅರಣ್ಯಾಧಿಕಾರಿಗಳೊಂದಿಗೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ನಂತರ ಗ್ರಾಮಸ್ಥರ ಅಹವಾಲು ಆಲಿಸಿದ ಅಫ್ರೀನಾಜ್ ಶುಂಠಿ, ಕಟ್ಟಡಕ್ಕೆ ಸ್ಥಳಾವಕಾಶ ನೀಡುವ ಬಗ್ಗೆ ಸಂಬಂಧಪಟ್ಟ ಸಿಡಿಪಿಒ ಮತ್ತು ಪಿಡಿಒ ಜತೆ ಚರ್ಚಿಸಿ ಅರಣ್ಯ ಇಲಾಖೆ ಮೇಲಧಿಕಾರಿಗಳಿಗೆ ಪತ್ರ ಬರೆದು ಜಾಗ ನೀಡುವ ಬಗ್ಗೆ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts